ಕದ್ದು ಮುಚ್ಚಿ ಬೇನಾಮಿ ಇಮೇಲ್ ಕಳಿಸೋದು ಹೇಗೆ?

By Super
|

ಕದ್ದು ಮುಚ್ಚಿ ಬೇನಾಮಿ ಇಮೇಲ್ ಕಳಿಸೋದು ಹೇಗೆ?
ಸಾಮಾನ್ಯವಾಗಿ ಕಳಿಸುವ ಇಮೇಲ್ ಗಳಲ್ಲಿ ಪತ್ರ ಕಳಿಸಿದವರ ವಿಳಾಸಸೇರಿದಂತೆ ಎಲ್ಲಾ ಮಾಹಿತಿಗಳು ಪತ್ರ ಸ್ವೀಕರಿಸುವವರಿಗೆ ತಿಳಿಯುತ್ತದೆ. ವೆಬ್ ಆಧಾರಿತ ಇ ಮೇಲ್ ಮೂಲಕ ಕಳಿಸುವ ಪತ್ರದಲ್ಲಿ IP ಅಡ್ರೆಸ್ ಕೂಡಾ ತಿಳಿಯುತ್ತದೆ.

ನಿಮ್ಮ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ ಪತ್ರ ಸ್ವೀಕರಿಸುವವರಿಗೆ ತಲುಪುತ್ತದೆ. ಪತ್ರ ಪಡೆಯುವವ ಬುದ್ಧಿವಂತನಾದರೆ ನಿಮ್ಮ ಕಂಪ್ಯೂಟರ್ ನ ಗೌಪ್ಯ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು.

ನೀವು ಕಳಿಸುವ ಪತ್ರದಲ್ಲಿ ಗೌಪ್ಯ ವಿಷಯಗಳಿದ್ದರೆ ಹಾಗೂ ಬೇನಾಮಿಯಾಗಿ ಒಳ್ಳೆ ಕೆಲಸಕ್ಕೆ ತಿಳಿದವರಿಗೆ ಇಮೇಲ್ ಕಳಿಸುವುದು ಹೇಗೆ ಎಂಬುದನ್ನು ಗಿಜ್ ಬಾಟ್ ನಿಮಗೆ ಹಂತ ಹಂತವಾಗಿ ಹೇಳಿಕೊಡುತ್ತದೆ. ಸಿಸ್ಟಮ್ ಮುಂದೆ ಕುಳಿತು ಕಲಿತುಕೊಳ್ಳಿ



ಮೊದಲ ಹಂತ: send-email.org ವೆಬ್ ತಾಣ ಓಪನ್ ಮಾಡಿ



ಎರಡನೇ ಹಂತ: To ಎಂಬ ಕಡೆ ನೀವು ಯಾರಿಗೆ ಮೇಲ್ ಕಳಿಸಬೇಕೋ ಅವರ ಮೇಲ್ ಐಡಿ ಹಾಕಿ ಉದಾ: [email protected] OR [email protected]..ಇತ್ಯಾದಿ


ಮೂರನೇ ಹಂತ: ಒಂದು ಪದದಲ್ಲಿ ಪತ್ರದ ವಿಷಯ ತಿಳಿಸಿ



ನಾಲ್ಕನೇ ಹಂತ: ನಿಮ್ಮ ಪತ್ರದ ವಿಷಯ ತುಂಬಿಸಿ. ನಿಮ್ಮ ಪತ್ರದ ಪದಗಳ ಮಿತಿ 500 ಪದಗಳು(ಸಂಖ್ಯೆಗಳನ್ನು ಸೇರಿಸಿ)

ಐದನೇ ಹಂತ: ಚಿತ್ರದಲ್ಲಿ ಕಾಣುವ ವೇರಿಫಿಕೇಷನ್ ಕೋಡ್ ಹಾಕಿ, ಸ್ವಲ್ಪ ನಿಧಾನವಾದರೂ ಸರಿಯಾದ ಕೋಡ್ ಹಾಕಿ

ಆರನೇ ಹಂತ: ವೆರಿಫಿಕೇಷನ್ ಕೋಡ್ ಕೆಳಗಡೆ ಇರುವ send ಬಟನ್ ಒತ್ತಿ.. ಬೇನಾಮಿಯಾಗಿ ಮೇಲ್ ಕಳಿಸಿ

ಎಚ್ಚರಿಕೆ: ಬೇನಾಮಿಯಾಗಿ ಅನಾಮಧೇಯ ಇಮೇಲ್ ಸೌಲಭ್ಯವನ್ನು ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುವಂತಿಲ್ಲ. ನಿಯಮ ಮೀರಿ ಬಳಸಿದರೂ ಐಪಿ ಅಡ್ರೆಸ್ ಮೂಲಕವಾಗಿ ನಿಮ್ಮ ಗುರುತು ಪತ್ತೆ ಸುಲಭವಾಗಿ ಸಿಕ್ಕಿಬೀಳುತ್ತದೆ.

Read in English

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X