ಹುವಾಯಿ ಪಿ7ನ ಅತ್ಯದ್ಭುತ 10 ವಿಶೇಷತೆಗಳು

By Shwetha
|

ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮತ್ತು ತಂತ್ರಜ್ಞಾನ ಸಲಹೆಗಾರ ಹುವಾಯಿ ಇತ್ತೀಚೆಗೆ ಹೆಚ್ಚು ನಿರೀಕ್ಷಿತ ಹುವಾಯಿ ಅಸೆಂಡ್ ಪಿ7 ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಹುವಾಯಿ ಅಸೆಂಡ್ ಪಿ6 ನ ಯಶಸ್ಸನ್ನು ಆಧರಿಸಿ ಹೊಸ 4ಜಿ ಎಲ್‌ಟಿಇ ಸಕ್ರಿಯಗೊಂಡಿರುವ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ತಂದಿದೆ. ಅತ್ಯಪೂರ್ಣ ವೈಶಿಷ್ಟ್ಯ, ಹೆಚ್ಚು ವೇಗದ ಸಂಪರ್ಕ ಮತ್ತು ಅತ್ಯಂತ ಸುಂದರವಾಗಿ ಈ ಫೋನ್‌ ಅನ್ನು ವಿನ್ಯಾಸಗೊಳಿಸಿದ್ದು ತನ್ನದೇ ಖ್ಯಾತಿಯನ್ನು ಮಾರುಕಟ್ಟೆಯಲ್ಲಿ ಈ ಡಿವೈಸ್ ಮಾಡಿದೆ ಎಂದೇ ಹೇಳಬಹುದು.

ಇದರ ಬೆಲೆ ರೂ 24,000 ಗಳಾಗಿದ್ದು, ಹುವಾಯಿ ಅಸೆಂಡ್ ಪಿ7, 5 ಇಂಚಿನ ಪೂರ್ಣ ಹೈ ಡೆಫಿನೇಶನ್ ಡಿಸ್‌ಪ್ಲೇಯೊಂದಿಗೆ ಬಂದಿದೆ. ಫೋನ್‌ನ ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದ್ದು ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದೆ.

ಹುವಾಯಿ ಅಸೆಂಡ್ ಪಿ7 ಅನ್ನು ಮರುವಿನ್ಯಾಸಗೊಳಿಸಿದ್ದು ಬಳಕೆದಾರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಸ್ಮಾರ್ಟ್‌ಫೋನ್‌ನ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅನ್ನು ವಿನ್ಯಾಸಪಡಿಸಿದೆ. 6.5 ಎಮ್‌ಎಮ್ ಸ್ಲಿಮ್ ಫೋನ್ ಇದಾಗಿದ್ದು, ಅಸೆಂಡ್ ಪಿ7 ಮಾರುಕಟ್ಟೆಯಲ್ಲಿ ಸ್ಲಿಮ್ ಫೋನ್‌ಗಳಲ್ಲಿ ಒಂದೆನಿಸಿದೆ.

ಹಾಗಿದ್ದರೆ ಈ ಕೆಳಗಿನ ಸ್ಲೈಡರ್‌ಗಳಲ್ಲಿನ ವೈಶಿಷ್ಟ್ಯಗಳನ್ನು ಅರಿತುಕೊಂಡು ಹುವಾಯಿ ಪಿ7 ಏಕೆ ಅತಿ ವಿಶಿಷ್ಟ ಏಕೆ ಎಂಬುದನ್ನು ಅರಿತುಕೊಳ್ಳೋಣ.

#1

#1

ಹುವಾಯಿ ಅಸೆಂಡ್ ಪಿ7 ಸುಧಾರಿತ ಬಲ ಹಾಗೂ ಸದೃಢತೆಯೊಂದಿಗೆ ಬಂದಿದ್ದು ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಅನ್ನು ಫೋನ್ ಹೊಂದಿದೆ. ಇದು ಸ್ಲೀಕ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಮೆಟಾಲಿಕ್ ಗೋಚರತೆ ಇದರಲ್ಲಿದೆ. ಇದು 7 ಪದರದ ಸರ್ಫೇಸ್ ಅನ್ನು ಪಡೆದುಕೊಂಡಿದ್ದು "ಸ್ಪಿನ್ ಇಫೆಕ್ಟ್" ಡಿವೈಸ್‌ನಲ್ಲಿದೆ.

#2

#2

ಅಸೆಂಡ್ ಪಿ7, 5 ಇಂಚಿನ FHD ಟಚ್ ಸ್ಕ್ರೀನ್ ಅನ್ನು ಹೊಂದಿದ್ದು ಡಿಸ್‌ಪ್ಲೇ ರೆಸಲ್ಯೂಶನ್ 1920 x 1080 ಪಿಕ್ಸೆಲ್‌ಗಳಾಗಿವೆ ಮತ್ತು 445ppi ಮತ್ತು 16:9 ರೇಟಿಯೊ ಇದರಲ್ಲಿದೆ.

ಅಸೆಂಡ್ ಪಿ7 ನ ಮುಂಭಾಗ ಪರದೆ ಮೋಡಿಮಾಡುವಂತಿದೆ. ಬೆಜೆಲ್ ಸ್ಲಿಮ್ ಆಗಿದ್ದು ಇದು ಯಾವುದೇ ಸಾಫ್ಟ್ ಕೀಗಳನ್ನು ಹೊಂದಿಲ್ಲ. ಇದರಲ್ಲಿ ಬಳಸಿರುವ ಬಣ್ಣ ತುಂಬಾ ನೈಸರ್ಗಿಕವಾಗಿದ್ದು ಫೋನ್‌ನ ಪ್ರತಿಯೊಂದು ಭಾಗವೂ ಸೂಪರ್ ಶಾರ್ಪ್ ಆಗಿದೆ.

#3

#3

ಹುವಾಯಿ ಅಸೆಂಡ್ ಪಿ7 ಬಳಸಲು ಸುಲಭವಾಗಿರುವ ಇಂಟರ್ಫೇಸ್ ಅನ್ನು ಪಡೆದುಕೊಂಡಿದ್ದು, ಇಮೋಶನ್ UI 2.3 ಅನ್ನು ಒದಗಿಸುತ್ತಿದೆ, ಕಸ್ಟಮೈಸೇಬಲ್ ಲಾಕ್ ಮತ್ತು ಹೋಮ್ ಸ್ಕ್ರೀನ್ ಅನ್ನು ಫೋನ್ ಪಡೆದುಕೊಂಡಿದೆ. ಎರಡು ಸುಧಾರಿತ UI ಗಳನ್ನು ಡಿವೈಸ್ ಪಡೆದುಕೊಂಡಿದೆ.

#4

#4

ಕ್ವಾಡ್ ಕೋರ್ 1.8GHz ಪ್ರೊಸೆಸರ್ ಜೊತೆಗೆ 2 ಜಿಬಿ RAM ಅನ್ನು ಫೋನ್ ಪಡೆದುಕೊಂಡಿದೆ. ಗೂಗಲ್‌ನ ಅತ್ಯಾಧುನಿಕ ಆಂಡ್ರಾಯ್ಡ್ ಆವೃತ್ತಿ 4.4 ಇದರಲ್ಲಿ ಚಾಲನೆಯಾಗುತ್ತಿದ್ದು ಆಂತರಿಕ ಮೆಮೊರಿ 16 ಜಿಬಿ ಇದರಲ್ಲಿದೆ ಇದನ್ನು 32 ಜಿಬಿಗೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್‌ ಬಳಸಿ ವಿಸ್ತರಿಸಬಹುದಾಗಿದೆ.

#5

#5

ಸೋನಿಯ 4 ನೇ ತಲೆಮಾರು BSI ಸೆನ್ಸಾರ್ ಅನ್ನು ಹುವಾಯಿ ಅಸೆಂಡ್ ಪಿ7 ಬಳಸುತ್ತಿದ್ದು ಇಮೇಜ್ ಸಿಗ್ನಲ್ ಪ್ರೊಸೆಸರ್, ಇಮೇಜ್ ಸ್ಮಾರ್ಟ್ 2.0 ಸಾಫ್ಟ್‌ವೇರ್ ಮತ್ತು f/2.0 ಅಪಾರ್ಚರ್ ಅನ್ನು ತನ್ನ 13 ಎಮ್‌ಪಿ 5 ಪಿ ನಾನ್ ಸ್ಪೆರಿಕಲ್ ಲೆನ್ಸ್ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಫೋನ್ ಒಳಗೊಂಡಿದೆ. ಇದು ರಾತ್ರಿ ವೇಳೆಯಲ್ಲೂ ಸ್ವಚ್ಛ ಮತ್ತು ಶ್ರೀಮಂತ ಚಿತ್ರಗಳನ್ನು ಒದಗಿಸುತ್ತದೆ.

ಅದ್ಭುತ ಕ್ಷಣಗಳನ್ನು ನಿಮ್ಮ ಫೋನ್‌ನಲ್ಲಿ ಸೆರೆಹಿಡಿಯಲು, ಹುವಾಯಿ ಅಸೆಂಡ್ ಪಿ7 ಅನನ್ಯ ಅಲ್ಟ್ರಾ ಸ್ನ್ಯಾಪ್‌ಶಾಟ್ ವ್ಯವಸ್ಥೆಯು ಬಳಕೆದಾರರಿಗೆ 1.2 ಸೆಕೆಂಡುಗಳಲ್ಲಿ ಕ್ಯಾಮೆರಾವನ್ನು ಸಕ್ರಿಯಗೊಳಿಸಲಿದ್ದು ಕೆಳಗಿನ ಧ್ವನಿ ಬಟನ್ ಅನ್ನು ಡಬಲ್ ಕ್ಲಿಕ್ ಮಾಡಿದ ನಂತರ ಲಾಕ್ ಮೋಡ್‌ನಿಂದ ಕ್ಯಾಮೆರಾವನ್ನು ಸಕ್ರಿಯಗೊಳಿಸುತ್ತದೆ ಇದರಿಂದ ಸ್ಕ್ರೀನ್ ಅನ್ನು ಅನ್‌ಲಾಕ್ ಮಾಡುವ ನಿಮ್ಮ ಸಮಯ ಉಳಿತಾಯವಾಗುತ್ತದೆ.

ಉತ್ತಮ ಸೆಲ್ಫೀಗಳನ್ನು ತೆಗೆಯಲು, ಅಥವಾ "ಗ್ರೂಫಿ" ಗುಂಪು ಸೆಲ್ಫೀಯನ್ನು ತೆಗೆಯಲು 8ಎಮ್‌ಪಿ 5ಪಿ ನಾನ್ ಸ್ಪೆರಿಕಲ್ ಲೆನ್ಸ್ ಮುಂಭಾಗ ಕ್ಯಾಮೆರಾವನ್ನು ಫೋನ್ ಹೊಂದಿದ್ದು ಪನೋರಮಾ ಫಂಕ್ಷನ್ ಜೊತೆಗೆ ಫೋನ್ ಬಂದಿದೆ. ಬಳಕೆದಾರರು 1080p ಎಚ್‌ಡಿ ವೀಡಿಯೊವನ್ನು ಇದರಲ್ಲಿ ತೆಗೆಯಬಹುದಾಗಿದ್ದು ಹುವಾಯಿ ಫೋನ್‌ನಲ್ಲಿ ಅಳವಡಿಸಿರುವ ಬಿಲ್ಟ್ ಇನ್ ಮಿರರ್ ಫಂಕ್ಷನ್ ಮತ್ತು ಸೆಲ್ಫೀ ಪ್ರಿವ್ಯೂ ವಿಂಡೋ ಫಂಕ್ಷನ್‌ ಪ್ರತೀ ಬಾರಿಯೂ ಚಿತ್ರ ಕ್ಷಣಗಳನ್ನು ಅದ್ಭುತಗೊಳಿಸುತ್ತದೆ.

#6

#6

ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷ ಆಡಿಯೊ ಅಭಿವ್ಯಕ್ತಿಗಳೊಂದಿಗೆ ಬಳಕೆದಾರರಿಗೆ ಫೋಟೋಗಳನ್ನು ಅಪ್‌ಲೋಡ್ ಮಾಡಲು 10 ಸೆಕೆಂಡ್‌ನ ಆಡಿಯೊ ಕ್ಲಿಪ್‌ಗಳ ಸಂಯೋಜನೆಯನ್ನು ಇದು ಒದಗಿಸುತ್ತದೆ.

#7

#7

ಕ್ಯಾಮೆರಾ ಸುಧಾರಣೆಗಾಗಿ, ಹುವಾಯಿನ ಇಮೇಜ್ ಸಿಗ್ನಲ್ ಪ್ರೊಸೆಸರ್ (ಐಎಸ್‌ಪಿ) ಎಲ್ಲಾ ರೀತಿಯ ಕಾರ್ಯಗಳನ್ನು ನಿಯಂತ್ರಣ ಮಾಡುವ ಸಾಮರ್ಥ್ಯವನ್ನು ಒದಗಿಸಲಿದ್ದು ವೃತ್ತಿಪರ ಡಿಜಿಟಲ್ ಎಸ್‌ಎಲ್‌ಆರ್‌ಗಳಲ್ಲಿರುವ ಆಟೋಫೋಕಸ್, ವೈಟ್ ಬ್ಯಾಲೆನ್ಸ್, ಧ್ವನಿ ನಿಯಂತ್ರಣ ಮೊದಲಾದವುಗಳನ್ನು ಇದು ಹೊಂದಿದೆ. ಬಳಕೆದಾರರು ಕೇವಲ ಒಂದೇ ಸ್ಪರ್ಶದಲ್ಲಿ ಫೋಕಸ್ ಹಾಗೂ ಮೀಟಿಂಗ್ ಫಂಕ್ಷನ್ ಅನ್ನು ಆಯ್ಕೆಮಾಡಬಹುದಾಗಿದ್ದು ಫೋಕಸ್ ಮತ್ತು ಎಕ್ಸ್‌ಪೋಶರ್ ಸ್ಥಿತಿ ಚಿತ್ರ ನಿಖರತೆಯನ್ನು ಗರಿಷ್ಟಗೊಳಿಸುತ್ತದೆ.

#8

#8

ವೇಗ ಮತ್ತು ಯಾವುದೇ ಅಡೆತಡೆಯಿಲ್ಲದ ಸಂಪರ್ಕವನ್ನು ಬಯಸುವ ಜನರಿಗಾಗಿ, ಹುವಾಯಿ ಅಸೆಂಡ್ ಪಿ7 ಅಪರಿಮಿತ ಮಾಧ್ಯಮ ವೀಕ್ಷಣೆ ಜೊತೆಗೆ ಅಲ್ಟ್ರಾ ಫಾಸ್ಟ್ 4ಜಿ ಎಲ್‌ಟಿಇ ವೇಗ ಮತ್ತು ಹುವಾಯಿನ ಅನನ್ಯ ಡ್ಯುಯಲ್ ಆಂಟೆನಾ ವಿನ್ಯಾಸವನ್ನು ಒದಗಿಸುತ್ತಿದೆ. ಬ್ಯಾಟರಿ ನಷ್ಟವನ್ನು ಕಡಿಮೆಗೊಳಿಸುವುದಕ್ಕಾಗಿ ಸಿಗ್ನಲ್ ಇಲ್ಲದ ಸ್ಥಳಗಳಲ್ಲಿ ಸಂಪರ್ಕವನ್ನು ಸುಭದ್ರಗೊಳಿಸುತ್ತದೆ.

#9

#9

ನಿರಂತರ ಮಾಧ್ಯಮ ವೀಕ್ಷಣೆ ಮತ್ತು ಡೇಟಾ ಹಂಚಿಕೆಯಲ್ಲೂ ಯಾವುದೇ ತೊಂದರೆಯನ್ನು ಉಂಟುಮಾಡದಿರುವ ಫೋನ್‌ನಲ್ಲಿರುವ 2500 mAh ಲಿಥಿಯಮ್ ಪೋಲಿಮರ್ ಬ್ಯಾಟರಿಗೆ ಧನ್ಯವಾದಗಳನ್ನು ಅರ್ಪಿಸಬೇಕು. ಹಿನ್ನಲೆಯಲ್ಲಿ ಚಾಲನೆಯಾಗುತ್ತಿರುವ ಯಾವುದೇ ಅಪ್ಲಿಕೇಶನ್‌ಗಳನ್ನು ಬದಲಾಯಿಸಲು ಫೋನ್‌ನಲ್ಲಿನ ಪವರ್ ಸೇವಿಂಗ್ ಮ್ಯಾನೇಜ್‌ಮೆಂಟ್ ಫಂಕ್ಷನ್ ಬಳಕೆದಾರರಿಗೆ ಅನುಮತಿಯನ್ನು ನೀಡುತ್ತಿದ್ದು ಅನಗತ್ಯ ಬ್ಯಾಟರಿ ಸೋರಿಕೆಯನ್ನು ಇದು ಉಳಿಸಿ ಬ್ಯಾಟರಿಯನ್ನು ಸುಸ್ಥಿತಿಯಲ್ಲಿಡುತ್ತದೆ.

ಒಟ್ಟು ಬ್ಯಾಟರಿಯ 10 ಶೇಕಡಾದಷ್ಟು ಚಾಲನೆಯಾಗುತ್ತಿದ್ದರೂ ಶಕ್ತಿಯ ಸರಿಯಾದ ಬಳಕೆಯನ್ನು ಅಸೆಂಡ್ ಪಿ7 ನ ಸೂಪರ್ ಪವರ್ ಸೇವಿಂಗ್ ಮೋಡ್ ಒದಗಿಸುತ್ತದೆ. ಇದು ಸಕ್ರಿಯಗೊಂಡಾಗ ಪರದೆ ಡಿಮ್ ಆಗುತ್ತದೆ ಮತ್ತು ಫೋನ್‌ನ ಮುಖ್ಯ ಫಂಕ್ಷನ್‌ಗಳು ಮಾತ್ರವೇ ಸಕ್ರಿಯಗೊಂಡಿರುತ್ತದೆ, ಅಂದರೆ ಧ್ವನಿ ಕರೆಗಳು, ಸಂಪರ್ಕ ಪುಟಗಳು ಇತ್ಯಾದಿ. ಸ್ಟ್ಯಾಂಡ್‌ಬೈನಲ್ಲಿ ಕೊನೆಯ 24 ಗಂಟೆಗಳ ಬ್ಯಾಟರಿ ಶಕ್ತಿಯ ಉಳಿದ 10 ಶೇಕಡಾವನ್ನು ಇದು ವಿಸ್ತರಿಸುತ್ತದೆ.

MobileLG G2Samsung Galaxy S4HTC One M8Huawei Ascend P7SONY XPERIA Z2
ConnectivitySingle SIMSingle SIMSingle SIMSingle SIMSingle SIM
Network3G/LTE3G3G/LTE3G/LTE3G/LTE
Operating SystemAndroid 4.2.2Android 4.2.2Android 4.4 (KitKat)Android 4.4 (KitKat)Android 4.4 (KitKat)
Display5.2 inch5 inch5 inch5 inch5.2 inch
Clarity of images, video, wide viewing anglesFull HDFull HDFull HDFull HDFull HD
Pixels per inch (PPI)424441441445424
Processor and Storage2.26 GHz Qualcomm Snapdragon 800 Quad Core ProcessorExynos 5 Octa 5410 Quad-core 1.6 GHz Cortex-A15 & quad-core 1.2 GHz Cortex-A72.5 Ghz Quadcore Core Snapdragon 8011.8 Quadcore Cortex-A92.3 Ghz Quadcore
RAM2 GB RAM2 GB RAM2 GB RAM2 GB RAM3 GB RAM
ROM16 GB ROM16 GB ROM16 GB ROM16 GB ROM16 GB ROM
Camera13 MP Camera13 MP CameraUltrapixel Primary Camera13 MP Camera20.7 MP Camera
Panoramic selfie, auto-face enhanecementn.a.n.a.n.a.Yesn.a.
Camera2.1 MP Front Camera2 MP front camera5 MP Secondary Camera8 MP secondary camera2.2 MP Secondary Camera
Click pictures with a soundn.a.n.a.n.a.Yesn.a.
Ultra-fast snapshotn.a.n.a.n.a.Yesn.a.
FlashLED FlashLED FlashDual FlashLED FlashPulsed LED
RecordingFull HD RecordingHD RecordingHD RecordingHD RecordingHD Recording
BatteryLi-Po 3000 mAhLi-Ion 2600 mAhLi-ion 2600 mAhLi-Po 2500 mAh3200 mAh
Weight, thin143 gms, 8.9 mm130gms, 7.9 mm160 gms, 9.4 mm124 gms, 6.5 mm thin163 gms, 8.2 mm
PriceRS.35,499/-Rs.27,950/-Rs.39,490/-Rs.24,799/-Rs.36,925/-
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X