ಸೂಪರ್ ಬ್ಯಾಟರಿಯ 3ಜಿ ವೈಫೈ ಡಾಂಗಲ್ ಐಡಿಯಾದಿಂದ

By Shwetha
|

ಐಡಿಯಾ ಸೆಲ್ಯುಲಾರ್ ಬುಧವಾರ 'ಸ್ಮಾರ್ಟ್‌ವೈಫೈ ಹಬ್' ಆದ 3ಜಿ ವೈಫೈ ಡಾಂಗಲ್ ಅಥವಾ ಹಬ್ ಅನ್ನು ಲಾಂಚ್ ಮಾಡಿದ್ದು ಇದರ ಬೆಲೆ ರೂ 2,999 ಆಗಿದ್ದು 10 ಡಿವೈಸ್‌ವರೆಗೆ ಇದನ್ನು ಬಳಸಿ ಸಂಪರ್ಕಪಡಿಸಬಹುದಾಗಿದೆ. ಇದು 1500mAh ಬ್ಯಾಟರಿಯೊಂದಿಗೆ ಬಂದಿದ್ದು ಇದುವರೆಗೆ ಐಡಿಯಾ ಬ್ಯಾಟರಿ ಲೈಫ್ ವಿವರಗಳನ್ನು ನೀಡಿಲ್ಲ.

ಇದನ್ನೂ ಓದಿ: ಅತ್ಯುತ್ತಮ ವಿಶೇಷತೆಗಳೊಂದಿಗೆ ಸೂಪರ್ ಫೋನ್ಸ್

ಸ್ಮಾರ್ಟ್‌ವೈಫೈ ಹಬ್ ಡಾಂಗಲ್ ಬೆಲೆ ರೂ 2,999 ಆಗಿದ್ದು, 6ಜಿಬಿ 3ಜಿ ಡೇಟಾವನ್ನು ಒಂದು ತಿಂಗಳಿಗಾಗಿ ಇದು ಪಡೆದುಕೊಂಡಿದೆ. ಇದು ಎಲ್ಲಾ ಓಎಸ್ ಜೊತೆಗೆ ಕಾಂಪಿಟೇಬಲ್ ಆಗಲಿದೆ ಎಂದು ಐಡಿಯಾ ತಿಳಿಸಿದೆ.

ಐಡಿಯಾದಿಂದ 3ಜಿ ಡಾಂಗಲ್ ರೂ ಮಾರುಕಟ್ಟೆಗೆ ರೂ 2,999 ಕ್ಕೆ

ಸ್ಮಾರ್ಟ್‌ವೈಫೈ ಹಬ್ ಡಾಂಗಲ್ 900MHZ ಮತ್ತು 2100MHZ ನೊಂದಿಗೆ ಹೊಂದಾಣಿಕೆಯಾಗುತ್ತಿದ್ದು ಹೆಚ್ಚಿನ ಡಿವೈಸ್‌ಗಳೊಂದಿಗೆ ಸಂಪರ್ಕಪಡಿಸಬಹುದಾಗಿದೆ. ಇದು ಡೌನ್‌ಲೋಡ್ ವೇಗವಾದ 21.6Mbps ಮತ್ತು ಅಪ್‌ಲೋಡ್ ವೇಗ 11Mbps ವರೆಗೆ ಪಡೆದುಕೊಂಡಿದೆ.

ಈ 3ಜಿ ವೈಫೈ ಡಾಂಗಲ್ ಎಲ್ಲಾ ಐಡಿಯಾ 3ಜಿ ಮಾರುಕಟ್ಟೆಗಳಲ್ಲಿ ಲಭ್ಯವಿದ್ದು, ಆಂಧ್ರ ಪ್ರದೇಶ, ಛತ್ತೀಸ್‌ಗಢ, ಗುಜರಾತ್, ಗೋವಾ, ಹರ್ಯಾಣಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರಾ ಪ್ರದೇಶಗಳನ್ನು ಇದು ಒಳಗೊಂಡಿದೆ.

ಇನ್ನು ಸಪ್ಟೆಂಬರ್‌ನಲ್ಲಿ ಕಂಪೆನಿಯು ಎರಡು ಡ್ಯುಯಲ್ ಸಿಮ್ 3ಜಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು ಇದು ಐಡಿಯಾ ಮಗ್ನಾ ಹಾಗೂ ಐಡಿಯಾ ಮಗ್ನಾ ಎಲ್ ಎಂಬ ಹೆಸರಿನಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇವುಗಳ ಬೆಲೆ ರೂ 4,999 ಹಾಗೂ 6,250 ಆಗಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದ್ದು ಇದು 3ಜಿ ಸಂಪರ್ಕಕ್ಕೆ ಬೆಂಬಲವನ್ನು ನೀಡಲಿದೆ.

ಐಡಿಯಾ ಮಗ್ನಾ 4 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಡ್ಯುಯಲ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಫೋನ್ 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು, ವಿಜಿಎ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ.

ಐಡಿಯಾ ಮಗ್ನಾ ಎಲ್, 4.5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು, 1.3GHZ ಕ್ವಾಡ್ ಕೋರ್ ಪ್ರೊಸೆಸರ್ ಹಾಗೂ 5 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್‌ನಲ್ಲಿದೆ. ಫೋನ್‌ನ ಮುಂಭಾಗ ಕ್ಯಾಮೆರಾ ವಿಜಿಎ ಆಗಿದೆ.

Best Mobiles in India

English summary
This article tells about Idea Cellular on Wednesday launched the 'Smartwifi Hub' - a 3G Wi-Fi dongle or hub that can connect up to 10 devices, and comes with a built-in 1500mAh battery for portability. Notably, Idea has not provided battery life details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X