ಆಧಾರ್ ಕಾರ್ಡ್ ಆಧಾರಿತ ಎಟಿಎಂ ಲಾಂಚ್‌: ATM ಬಳಸಲು ಆಧಾರ್ ಕಾರ್ಡ್‌ ಸಾಕು!

ಹಣ ಬಿಡಿಸಲು ಎಡಿಎಂ'ಗೆ ಹೋದರೂ ಅಥವಾ ಹಣ ಡೆಪಾಸಿಟ್ ಮಾಡಲು ಸಿಡಿಎಂ'ಗೆ ಹೋದರೂ ಡೆಬಿಟ್‌ ಕಾರ್ಡ್‌ ಬೇಕೆ ಬೇಕು. ಆದರೆ ಇನ್ಮುಂದೆ ಎಟಿಎಂ ಮತ್ತು ಡೆಬಿಟ್‌ ಕಾರ್ಡ್‌ ಎರಡು ಇಲ್ಲದೇ ಹಣ ಬಿಡಿಸಿಕೊಳ್ಳಬಹುದು ಮತ್ತು ಸಿಡಿಎಂಗಳಲ್ಲಿ ಹಣ ಡೆಪಾಸಿಟ್ ಸಹ

Written By:

ಹಣ ಬಿಡಿಸಲು ಎಡಿಎಂ'ಗೆ ಹೋದರೂ ಅಥವಾ ಹಣ ಡೆಪಾಸಿಟ್ ಮಾಡಲು ಸಿಡಿಎಂ'ಗೆ ಹೋದರೂ ಡೆಬಿಟ್‌ ಕಾರ್ಡ್‌ ಬೇಕೆ ಬೇಕು. ಆದರೆ ಇನ್ಮುಂದೆ ಎಟಿಎಂ ಮತ್ತು ಡೆಬಿಟ್‌ ಕಾರ್ಡ್‌ ಎರಡು ಇಲ್ಲದೇ ಹಣ ಬಿಡಿಸಿಕೊಳ್ಳಬಹುದು ಮತ್ತು ಸಿಡಿಎಂಗಳಲ್ಲಿ ಹಣ ಡೆಪಾಸಿಟ್ ಸಹ ಮಾಡಬಹುದು.

ಆಧಾರ್ ಕಾರ್ಡ್ ಆಧಾರಿತ ಎಟಿಎಂ ಲಾಂಚ್‌: ATM ಬಳಸಲು ಆಧಾರ್ ಕಾರ್ಡ್‌ ಸಾಕು!

ಹೌದು, ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಡಿಸಿಬಿ ಬ್ಯಾಂಕ್, ಆಧಾರ್ ಕಾರ್ಡ್‌ ಆಧಾರಿತ ಎಟಿಎಂ ಅನ್ನು ಲಾಂಚ್‌ ಮಾಡಿದೆ. ಈ ಎಟಿಎಂ ಆಧಾರ್‌ ಕಾರ್ಡ್ ನಂಬರ್ ಮತ್ತು ಆಧಾರ್‌ ಕಾರ್ಡ್ ಫಿಂಗರ್‌ಪ್ರಿಂಟ್(ಬಯೋಮೆಟ್ರಿಕ್‌) ಅನ್ನು ಡೆಬಿಟ್‌ ಕಾರ್ಡ್ ಮತ್ತು ಪಿನ್‌ ನಂಬರ್ ಬದಲು ಕ್ಯಾಶ್‌ ನೀಡಲು ಬಳಸಿಕೊಳ್ಳುತ್ತದೆ.

ಅಂದಹಾಗೆ ಈ ಕಾರ್ಡ್‌ಲೆಸ್‌ ಮತ್ತು ಪಿನ್‌ಲೆಸ್ ಎಟಿಎಂ ಅನ್ನು ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ನಂದನ್‌ ನಿಲೇಕೇಣಿ'ರವರು ಲಾಂಚ್‌ ಮಾಡಿದರು.

ಆಧಾರ್ ಕಾರ್ಡ್ ಆಧಾರಿತ ಎಟಿಎಂ ಲಾಂಚ್‌: ATM ಬಳಸಲು ಆಧಾರ್ ಕಾರ್ಡ್‌ ಸಾಕು!

" ಇದೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಆಧಾರ್‌ ಕಾರ್ಡ್‌ ಆಧಾರಿತ ಎಟಿಎಂ ಅನ್ನು ಆರಂಭಿಸಿದ್ದೇವೆ. ಜನರು ಯಾವುದೇ ಕಾರ್ಡ್ ಅಗತ್ಯವಿಲ್ಲದೇ ಆಧಾರ್ ಕಾರ್ಡ್‌ ಬಳಸಿ ಹಣ ವ್ಯವಹಾರ ಮಾಡಬಹುದು" ಎಂದು ಎಟಿಎಂ ಲಾಂಚ್‌ ವೇಳೆ ಡಿಸಿಬಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕರಾದ ಮುರಳಿ ನಿರಂಜನ್ ಹೇಳಿದ್ದಾರೆ.

2016 ರ ಏಪ್ರಿಲ್‌ನಲ್ಲಿ ಡಿಸಿಬಿ ಬ್ಯಾಂಕ್‌ ಚಾಲಕರು ಮುಂಬೈನಲ್ಲಿ ಮೊದಲ ಆಧಾರ್ ಕಾರ್ಡ್ ಆಧಾರಿತ ಎಟಿಎಂ ಅನ್ನು ಲಾಂಚ್‌ ಮಾಡಿದ್ದಾರೆ.

ಆಧಾರ್ ಕಾರ್ಡ್ ಆಧಾರಿತ ಎಟಿಎಂ ಲಾಂಚ್‌: ATM ಬಳಸಲು ಆಧಾರ್ ಕಾರ್ಡ್‌ ಸಾಕು!

ಆಧಾರ್ ಕಾರ್ಡ್ ಬಳಸಿ ಹಣ ವ್ಯವಹಾರ ಹೇಗೆ?
ಬಳಕೆದಾರರು 12 ಆಧಾರ್‌ ಕಾರ್ಡ್‌ ನಂಬರ್‌ ಅನ್ನು ಎಟಿಎಂ(Automated Teller Machine)ನಲ್ಲಿ ಎಂಟರ್ ಮಾಡಿ ಟ್ರ್ಯಾನ್‌ಸಾಕ್ಷನ್‌ ಆರಂಭಿಸಬಹುದು. ಗುರುತು ಖಚಿತ ಪಡಿಸುವ ಮುನ್ನ ಪಿನ್‌ ನಂಬರ್ ಬದಲು ಆಧಾರ್‌ಕಾರ್ಡ್ ಬಯೋಮೆಟ್ರಿಕ್‌ ವಿವರ ನೀಡಬೇಕು.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಧಾರ್ ಕಾರ್ಡ್ ಆಧಾರಿತ ಎಟಿಎಂ ಲಾಂಚ್‌: ATM ಬಳಸಲು ಆಧಾರ್ ಕಾರ್ಡ್‌ ಸಾಕು!

ಅಂದರೆ ಫಿಂಗರ್‌ ಅನ್ನು ಸ್ಕ್ಯಾನ್‌ ಮಾಡಬೇಕು. ಇದು ಪಿನ್‌ ನಂಬರ್ ನೀಡುವುದಕ್ಕಿಂತಲು ಉತ್ತಮ. ಯಾಕಂದ್ರೆ ಹಲವು ಬ್ಯಾಂಕ್‌ಗಳನ್ನು ಹೊಂದಿರುವವರು ಪಿನ್‌ ನಂಬರ್‌ ಅನ್ನು ಕೆಲವೊಮ್ಮೆ ಮರೆಯಬಹುದು.

ಈ ಸೇವೆ ಪಡೆಯಲು ಮೊದಲು ಡಿಸಿಬಿ ಬ್ಯಾಂಕ್ ಖಾತೆಯನ್ನು ಆಧಾರ್‌ ನಂಬರ್ ನೀಡಿ ಪಡೆಯುವುದು ಅಗತ್ಯವಾಗಿದೆ.

Read more:ಸುಲಭವಾಗಿ ಪತ್ತೆಯಾಗುವ ಎಟಿಎಂ ಪಿನ್‌‌ ನಂಬರ್‌ಗಳು

ಅಂದಹಾಗೆ ಇದು ಹೆಚ್ಚು ವೆಚ್ಚದಾಯಕವಲ್ಲದ ಮಾರ್ಗವಾಗಿದ್ದು, ಡಿಸಿಬಿ ಬ್ಯಾಂಕ್‌ 400 ಕ್ಕೂ ಹೆಚ್ಚು ಆಧಾರ್‌ ಕಾರ್ಡ್(Aadhaar Card) ಆಧಾರಿತ ಎಟಿಎಂಗಳನ್ನು 6 ತಿಂಗಳ ಒಳಗಾಗಿ ಅಪ್‌ಗ್ರೇಡ್‌ ಮಾಡಲು ನಿಶ್ಚಯಿಸಿದೆ. ಹಾಗೂ ಪ್ರಸ್ತುತದಲ್ಲಿ ಡಿಸಿಬಿ ಬ್ಯಾಂಕ್ ಗ್ರಾಹಕರು ಮಾತ್ರ ಈ ಸೇವೆ ಪಡೆಯಲು ಅವಕಾಶವಿದೆ ಎಂದು ಲಾಂಚ್‌ ವೇಳೆ ನಿರಂಜನ್‌ ಹೇಳಿದ್ದಾರೆ.

ಆಧಾರ್ ಕಾರ್ಡ್ ಆಧಾರಿತ ಎಟಿಎಂ ಲಾಂಚ್‌: ATM ಬಳಸಲು ಆಧಾರ್ ಕಾರ್ಡ್‌ ಸಾಕು!

ಡಿಸಿಬಿ ಬ್ಯಾಂಕ್‌
ಡಿಸಿಬಿ ಬ್ಯಾಂಕ್‌ ಭಾರತದ ಖಾಸಗಿ ವಾಣಿಜ್ಯ ಬ್ಯಾಂಕ್‌ ಆಗಿದ್ದು, 205 ಶಾಖೆಗಳನ್ನು ಮತ್ತು 442 ಎಟಿಎಂ'ಗಳನ್ನು ಹೊಂದಿದೆ. 1930 ರಲ್ಲಿ ಸ್ಥಾಪನೆಯಾದ ಬ್ಯಾಂಕ್‌ ಮಹಾರಾಷ್ಟ್ರದಲ್ಲಿ ಕೇಂದ್ರ ವ್ಯವಹಾರ ಶಾಖೆ ಹೊಂದಿದೆ. ಪ್ರಸ್ತುತ ಸಿಇಓ 'ಮುರಳಿ ಎಂ ನಟರಾಜನ್‌'ರವರು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
In a first, DCB Bank starts Aadhaar-based ATMs. To know more visit kannada.gizbot.com
Please Wait while comments are loading...
Opinion Poll

Social Counting