ಭಾರತೀಯ ಪತ್ರಕರ್ತ‌ನಿಗೆ ಈ ವರ್ಷ‌ದ ಗೂಗಲ್‌ ಡಿಜಿಟಲ್‌ ಆಕ್ಟಿವಿಸಂ ಪ್ರಶಸ್ತಿ

By Ashwath
|

ಮೊಬೈಲ್‌ ಮೂಲಕ ಗ್ರಾಮೀಣ ಜನರೇ ತಮ್ಮ ಊರಿನ ಸಮಸ್ಯೆಯನ್ನು ಹೇಳಿ ಮಾಧ್ಯಮದವರನ್ನು ಸೆಳೆಯಲು ಹೊಸ ಡಿಜಿಟಲ್ ವೇದಿಕೆಯನ್ನು ಹುಟ್ಟುಹಾಕಿದ ಶುಭ್ರಾಂಶು ಚೌಧುರಿಯವರಿಗೆ ಈ ವರ್ಷದ ಪ್ರತಿಷ್ಠಿತ ಗೂಗಲ್‌ ಡಿಜಿಟಲ್‌ ಆಕ್ಟಿವಿಸಂ ಪ್ರಶಸ್ತಿ ಲಭಿಸಿದೆ.

ಗ್ರಾಮೀಣ ಭಾಗದ ಸಮಸ್ಯೆಗಳನ್ನು ನಿವಾರಿಸಲು ಬಿಬಿಸಿಯ ಪತ್ರಕರ್ತ‌ರಾಗಿರುವ ಶುಭ್ರಾಂಶು ಚೌಧುರಿ CGNet Swara ಹೆಸರಿನ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದು,ಈ ಸಂಸ್ಥೆಯ ಹೊಸ ಡಿಜಿಟಲ್‌ ಸಂವಹನ ವ್ಯವಸ್ಥೆಗೆ ಈ ಪ್ರಶಸ್ತಿ ಲಭಿಸಿದೆ.ಶುಭ್ರಾಂಶು ಚೌಧುರಿ CGNet Swara ವನ್ನು 2004ರಲ್ಲಿ ಆರಂಭಿಸಿದ್ದು,ಇಂದು ದೇಶದ ಯಾವುದೇ ರಾಜ್ಯದ ಹಳ್ಳಿಯ ಜನರು ತಮ್ಮ ಸಮಸ್ಯೆಯನ್ನು ಮೊಬೈಲ್‌ ಮೂಲಕವೇ ಹೇಳಿ ಪರಿಹಾರ ಮಾಡಬಹುದಾಗಿದೆ.

ವಿಶೇಷ ಏನೆಂದರೆ ಅಮೆರಿಕದ ಕದ್ದಾಲಿಕೆಯ ವಿಚಾರವನ್ನು ವಿಶ್ವದ ಜನರಿಗೆ ಬಹಿರಂಗಪಡಿಸಿದ್ದ ಎಡ್ವರ್ಡ್ ಸ್ನೋಡೆನ್ ಹೆಸರು ಈ ಪ್ರಶಸ್ತಿ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು.ಆದರೆ ಅಂತಿಮವಾಗಿ ಗೂಗಲ್‌ ಡಿಜಿಟಲ್‌ ಆಕ್ಟಿವಿಸಂ ಪ್ರಶಸ್ತಿ ಶುಭ್ರಾಂಶು ಚೌಧುರಿ ಪಾಲಾಯಿತು.

ಭಾರತೀಯ ಪತ್ರಕರ್ತ‌ನಿಗೆ ಈ ವರ್ಷ‌ದ ಗೂಗಲ್‌ ಡಿಜಿಟಲ್‌ ಆಕ್ಟಿವಿಸಂ  ಪ್ರಶಸ್ತಿ

ಏನಿದು ಹೊಸ ಡಿಜಿಟಲ್‌ ಸಂವಹನ ವ್ಯವಸ್ಥೆ:
ಗ್ರಾಮೀಣ ಜನರ ಸಮಸ್ಯೆಗಾಗಿ ಒಂದು ಫೋನ್‌ ನಂಬರ್‌ ಮೀಸಲಿಟ್ಟಿದ್ದು ಈ ನಂಬರ್‌ನ್ನು ಡಯಲ್‌ ಮಾಡಿ ಹಳ್ಳಿಯ ಜನರು ನೇರವಾಗಿ ಸಮಸ್ಯೆಯನ್ನು ಹೇಳುವುದರ ಜೊತೆಗೆ ಲೋಕಲ್‌ ಅಧಿಕಾರಿಯ ನಂಬರ್‌ನ್ನು ಹೇಳಬೇಕು.ಜನರ ಕರೆಗಳನ್ನುCGNet Swara ಸದಸ್ಯರು ದಾಖಲಿಸಿ ವೆಬ್‌ಸೈಟ್‌‌ನಲ್ಲಿ ಅವರ ಕರೆಯನ್ನು ಅಪ್‌‌ಲೋಡ್‌ ಮಾಡುವುದರ ಜೊತೆಗೆ ಇಂಗ್ಲಿಷ್‌‌ನಲ್ಲಿ ಸಮಸ್ಯೆ ವಿವರ ಮತ್ತು ಸಂಪರ್ಕಿಸಬೇಕಾದ ಅಧಿಕಾರಿ ನಂಬರ್‌ನ್ನು ಪ್ರಕಟಿಸುತ್ತಾರೆ.ಇದರಲ್ಲಿ ಪ್ರಕಟವಾದ ಬಳಿಕ CGNet Swaraದ ಪತ್ರಕರ್ತರು ಸ್ಥಳೀಯ ಅಧಿಕಾರಿಯನ್ನು ಪ್ರಶ್ನಿಸಿ ಹಳ್ಳಿಯ ಸಮಸ್ಯೆಯನ್ನು ನಿವಾರಿಸಲು ಮುಂದಾಗುತ್ತಾರೆ.

CGNet Swara ಕುರಿತ ಹೆಚ್ಚಿನ ವಿವರಗಳಿಗೆ ಇಲ್ಲಿ ಭೇಟಿ ನೀಡಬಹುದು:http://cgnetswara.org

ಈ ಡಿಜಿಟಲ್‌ ಸಂವಹನ ವ್ಯವಸ್ಥೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಈ ವಿಡಿಯೋವನ್ನು ವೀಕ್ಷಿಸಬಹುದು.

<center><iframe width="100%" height="360" src="//www.youtube.com/embed/kbAFwZMs4vA?feature=player_embedded" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X