ಟಿವಿಯನ್ನೇ ಕಂಪ್ಯೂಟರ್‌ನಂತೆ ಮಾರ್ಪಡಿಸುವ ಮ್ಯಾಜಿಕ್ ಸ್ಟಿಕ್

By Shwetha
|

ಇಂಟೆಲ್ ಕಂಪೆನಿ ಭಾರತದಲ್ಲಿ ಇಂಟೆಲ್ ಕಂಪ್ಯೂಟರ್ ಸ್ಟಿಕ್ ಅನ್ನು ಲಾಂಚ್ ಮಾಡಿದೆ. ಆನ್‌ಲೈನ್‌ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಈ ಸ್ಟಿಕ್ ಲಭ್ಯವಿದ್ದು ಇತರೇ ಇಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಕೂಡ ಡಿವೈಸ್ ದೊರೆಯಲಿದೆ. ಈ ಸ್ಟಿಕ್‌ನ ವಿಂಡೋಸ್ ಆವೃತ್ತಿ ರೂ 9,999 ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯುತ್ತಿದೆ. ಇನ್ನು ಲೀನಕ್ಸ್ ಆವೃತ್ತಿಯ ಬೆಲೆಯನ್ನು ನಿಗದಿಪಡಿಸಿಲ್ಲ.

ಓದಿರಿ: ಫೇಸ್‌ಬುಕ್ ಒಡೆಯನ ಸುತ್ತ ವಿವಾದಗಳ ಹುತ್ತ

ಟಿವಿಯನ್ನೇ ಕಂಪ್ಯೂಟರ್‌ನಂತೆ ಮಾರ್ಪಡಿಸುವ ಮ್ಯಾಜಿಕ್ ಸ್ಟಿಕ್

1.83GHZ ಇಂಟೆಲ್ ಆಟಮ್ ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು, ಕಂಪ್ಯೂಟರ್ ಸ್ಟಿಕ್ ಯಾವುದೇ ಎಚ್‌ಡಿಎಮ್ಐ ಪೋರ್ಟ್ ಲಭ್ಯವಿರುವ ಡಿಸ್‌ಪ್ಲೇ ಅಥವಾ ಮಾನಿಟರ್ ಅನ್ನು ಪೂರ್ಣ ಕಾರ್ಯನಿರ್ವಹಿಸುವ ಕಂಪ್ಯೂಟರ್ ಆಗಿ ಮಾರ್ಪಡಿಸಲಿದೆ.

ಓದಿರಿ: ವೈಫೈ ವೇಗಗೊಳಿಸಲು ಇಲ್ಲಿದೆ 10 ಸೂತ್ರಗಳು

ಟಿವಿಯನ್ನೇ ಕಂಪ್ಯೂಟರ್‌ನಂತೆ ಮಾರ್ಪಡಿಸುವ ಮ್ಯಾಜಿಕ್ ಸ್ಟಿಕ್

ಎರಡು ಆಪರೇಟಿಂಗ್ ಸಿಸ್ಟಮ್‌ ಆಯ್ಕೆಯುಳ್ಳ ಡಿವೈಸ್ ಇದಾಗಿದ್ದು ಬಳಕೆದಾರರಿಗೆ ಎರಡು ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ. ವಿಂಡೋಸ್ 8.1 ಆವೃತ್ತಿ ಬಿಂಗ್‌ನೊಂದಿಗೆ ಪೂರ್ವ ಇನ್‌ಸ್ಟಾಲ್ ಆಗಿದ್ದು, ಇದು 32ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಲ್ಲಿ 2ಜಿಬಿ RAM ಇದೆ. ಇನ್ನು ಲೀನಕ್ಸ್ ಆವೃತ್ತಿ ಪೂರ್ವ ಇನ್‌ಸ್ಟಾಲ್ ಆಗಿರುವ ಉಬಂಟು 14.04 ಜೊತೆಗೆ 8ಜಿಬಿ ಸಂಗ್ರಹಣೆ ಮತ್ತು 1ಜಿಬಿ RAM ಅನ್ನು ಪಡೆದುಕೊಂಡಿದೆ.

ಓದಿರಿ: ಆಪತ್ಕಾಲದಲ್ಲಿ ನೆರವಾಗುವ ಆಪತ್ಬಾಂಧವ: ವಾಟ್ಸಾಪ್ ವಾಯ್ಸ್ ಕಾಲಿಂಗ್

ಟಿವಿಯನ್ನೇ ಕಂಪ್ಯೂಟರ್‌ನಂತೆ ಮಾರ್ಪಡಿಸುವ ಮ್ಯಾಜಿಕ್ ಸ್ಟಿಕ್

ಎರಡೂ ಡಿವೈಸ್‌ಗಳು ವೈಫೈ ಮತ್ತು ಬ್ಲ್ಯೂಟೂತ್ ಅನ್ನು ಒಳಗೊಂಡಿದೆ. ಮೈಕ್ರೋ ಎಸ್‌ಡಿ ಸ್ಲಾಟ್ ಅನ್ನು ಇವುಗಳು ಪಡೆದುಕೊಂಡಿದ್ದು ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್ ಅನ್ನು ಬ್ಲ್ಯೂಟೂತ್ ಮೂಲಕ ಡಿವೈಸ್‌ಗೆ ಸಂಪರ್ಕಪಡಿಸಬಹುದಾಗಿದೆ.

Best Mobiles in India

English summary
Intel has launched the Intel Compute Stick in India. It will be available online through Flipkart and at physical stores via Intel technology providers across India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X