ಟೆಲಿಕಾಂ ವಲಯನ್ನೇ ನಡುಗಿಸಿದ್ದ ಜಿಯೋಗೆ ಮಾರುಕಟ್ಟೆಯಲ್ಲಿ 4ನೇ ಸ್ಥಾನ..!

ಸದ್ಯ ಜಿಯೋ ಮಾರ್ಚ್ ಮಾರುಕಟ್ಟೆಯಲ್ಲಿ 9.28% ಪಾಲನ್ನು ಪಡೆದುಕೊಂಡಿದೆ ಎಂದು ಟ್ರಾಯ್ ವರದಿ ಮಾಡಿದೆ.

|

ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ ಭಾರಿ ವೇಗದಲ್ಲಿ ಬೆಳೆಯುತ್ತಿದ್ದು, ಇತರೆ ಟೆಲಿಕಾಂ ಕಂಪನಿಗಳು ಕಣ್ಣು ಕಣ್ಣು ಬಿಡುವ ಮಟ್ಟಕ್ಕೆ ಬೆಳವಣಿಗೆಯನ್ನು ಸಾಧಿಸುತ್ತಿದೆ. ಸದ್ಯ ಜಿಯೋ ಮಾರ್ಚ್ ಮಾರುಕಟ್ಟೆಯಲ್ಲಿ 9.28% ಪಾಲನ್ನು ಪಡೆದುಕೊಂಡಿದೆ ಎಂದು ಟ್ರಾಯ್ ವರದಿ ಮಾಡಿದೆ.

ಟೆಲಿಕಾಂ ವಲಯನ್ನೇ ನಡುಗಿಸಿದ್ದ ಜಿಯೋಗೆ ಮಾರುಕಟ್ಟೆಯಲ್ಲಿ 4ನೇ ಸ್ಥಾನ..!

ಓದಿರಿ: ಖರ್ಚಿಲ್ಲದೇ ಒಂದೇ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಲು ಸಾಧ್ಯವೇ..?

ಮಾರ್ಚ್ 31 ರ ಅಂತ್ಯದ ವೇಳೆಗೆ ರಿಲಯನ್ಸ್ ಜಿಯೋ 10.86 ಕೋಟಿ ಬಳಕೆದಾರರನ್ನು ಹೊಂದಿದ್ದು, ಫೆಬ್ರವರಿಗೆ ಹೊಲಿಸಿಕೊಂಡರೆ 2 ಕೋಟಿ ಬಳಕೆದಾರರನ್ನು ಒಂದೇ ತಿಂಗಳಿನಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಮೂಲಕ ದೇಶದ ನಾಲ್ಕನೇ ಅತಿ ದೊಡ್ಡ ವೈರ್‌ಲೈಸ್ ಟೆಲಿಕಾಂ ಆಪರೇಟರ್ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಏರ್‌ಟೆಲೆಗೆ ನಂ.1 ಸ್ಥಾನ:

ಏರ್‌ಟೆಲೆಗೆ ನಂ.1 ಸ್ಥಾನ:

ಸದ್ಯ ದೇಶದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಏರ್‌ಟೆಲ್ ನಂಬರ್ 1 ಸ್ಥಾನದಲ್ಲಿ ಇದೆ. 27.3 ಕೋಟಿ ಬಳಕೆದಾರರು ಏರ್‌ಟೆಲ್ ಕುಟುಂಬದಲ್ಲಿದ್ದಾರೆ ಎನ್ನಲಾಗಿದೆ.

ಕಡಿಮೆ ದಿನದಲ್ಲಿ 4ನೇ ಸ್ಥಾನಕ್ಕೆರಿದ ಜಿಯೋ:

ಕಡಿಮೆ ದಿನದಲ್ಲಿ 4ನೇ ಸ್ಥಾನಕ್ಕೆರಿದ ಜಿಯೋ:

ಸೇವೆ ಆರಂಭಿಸಿ ಒಂದು ವರ್ಷವು ಕಳೆಯದೆ ಇದ್ದರೂ, ಆಕರ್ಷಕ ಆಫರ್ ನೀಡುವ ಮೂಲಕ ಜಿಯೋ ದೇಶದ 4 ನೇ ಅತೀ ದೊಡ್ಡ ನೆಟ್‌ವರ್ಕ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇಡೀ ಟೆಲಿಕಾಂ ವಲಯವನ್ನು ನಡುಗಿಸಿ ಈ ಮಟ್ಟಕ್ಕೆ ಬಂದು ನಿಂತಿದೆ.

170 ದಿನದಲ್ಲಿ 100 ಮಿಲಿಯನ್:

170 ದಿನದಲ್ಲಿ 100 ಮಿಲಿಯನ್:

ಜಿಯೋ ಸೇವೆಯನ್ನು ಶುರು ಮಾಡಿದ 170 ದಿನಗಳಲ್ಲಿ 100 ಮಿಲಿಯನ್ ಬಳಕೆದಾರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದು, ಉಚಿತ ಕೊಡುಗೆ, ವೇಗದ ಇಂಟರ್ ನೆಟ್ ಸೇವೆ ಮತ್ತು ಆಕರ್ಷಕ ಕೊಡುಗೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೆಳೆವಣಿಗೆ ಸಾಧಿಸಿದೆ.

Best Mobiles in India

Read more about:
English summary
Reliance Jio becomes the fourth largest wireless telecom operator in India . to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X