ಜಿಯೋ ಗ್ರಾಹಕರೇ ಧನ್ ಧನಾ ಧನ್ ಆಫರ್ ಬಗ್ಗೆ ನೀವು ತಿಳಿಯಲೇ ಬೇಕಾದ ವಿಷಯಗಳು..!!!

ಈ ಹಿಂದೆ 303 ರೂ.ಗೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡುತ್ತಿದ್ದ ಜಿಯೋ, ಈಗ 309 ರೂ.ಗಳಿಗೇ ಅದೇ ಮೂರು ತಿಂಗಳು ಉಚಿತ ಸೇವೆಯನ್ನು ನೀಡುತ್ತಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಕೊಟ್ಟ ಮಾತಿನಂತೆ ತನ್ನ ಗ್ರಾಹಕರಿಗೆ 'ಹೊಸ ಬಾಟಲಿಗೆ ಹಳೇ ಮದ್ಯ' ಎನ್ನುವಂತೆ ಸಮ್ಮರ್ ಸರ್ಪೈಸ್ ಆಫರ್ ಬದಲಿಗೆ 'ಧನ್ ಧನಾ ಧನ್' ಎಂಬ ಹೊಸದೊಂದು ಆಫರ್ ನೀಡಿದೆ. ಈ ಹಿಂದೆ 303 ರೂ.ಗೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡುತ್ತಿದ್ದ ಜಿಯೋ, ಈಗ 309 ರೂ.ಗಳಿಗೇ ಅದೇ ಮೂರು ತಿಂಗಳು ಉಚಿತ ಸೇವೆಯನ್ನು ನೀಡುತ್ತಿದೆ.

ಓದಿರಿ: ಜಿಯೋ 'ಧನ್ ಧನಾ ಧನ್' ಆಫರ್: ನಡುಗಿದ ಟೆಲಿಕಾಂ ಲೋಕ

ಮೊದಲು ಕೇವಲ ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಸಮ್ಮರ್ ಸರ್ಪೈಸ್ ಕೊಡುಗೆ ನೀಡುವುದಾಗಿ ಜಿಯೋ ಆಫರ್ ಮಾಡಿತ್ತು. ಆದರೆ ಈಗ ಬದಲಾದ ಹೊಸ ಆಫರ್‌ನಲ್ಲಿ ಜಿಯೋ ಹೊಸ ಗ್ರಾಹಕರಿಗೂ ಮತ್ತೇ ಮೂರು ತಿಂಗಳು ಉಚಿತ ಸೇವೆಯನ್ನು ನೀಡುವುದಾಗಿ ಘೋಷಣೆ ಮಾಡಿದೆ. ಇದರಿಂದಾಗಿ ಮತ್ತೇ ತನ್ನೆಡೆಗೆ ಹೊಸ ಗ್ರಾಹಕರನ್ನ ಸೆಳೆಯಲು ಜಿಯೋ ಹೊಸದೊಂದು ಕಸರತ್ತು ಶುರು ಮಾಡಿದೆ. ಈ ಹಿನ್ನಲೆಯಲ್ಲಿ ಜಿಯೋ ಗ್ರಾಹಕರು 'ಧನ್ ಧನಾ ಧನ್' ಆಫರ್‌ನ ಕುರಿತ ತಿಳಿಯಲೇ ಬೇಕಾದ ವಿಷಯಗಳ ಕುರಿತು ಮಾಹಿತಿ ಇಲ್ಲಿದೆ.

ಏನೀದು ಧನ್ ಧನಾ ಧನ್ ಆಫರ್:

ಏನೀದು ಧನ್ ಧನಾ ಧನ್ ಆಫರ್:

ಟ್ರಾಯ್ ಆದೇಶದ ಮೇರೆಗೆ ಜಿಯೋ ತಾನು ನೀಡಿದ್ದ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಹಿಂಪಡೆದ ಬೆನ್ನಲೇ ತನ್ನ ಗ್ರಾಹಕರಿಗಾಗಿ ನೀಡಿದ ಮತ್ತೊಂದು ಆಫರ್ ಹೆಸರೇ ಧನ್ ಧನಾ ಧನ್. ಈ ಹಿಂದಿನ ಸಮ್ಮರ್ ಸರ್ಪ್ರೇಸ್ ಆಫರ್ ಮಾದರಿಯಲ್ಲೇ ಹೊಸ ಕೊಡುಗೆ ಸಹ ಮೂರು ತಿಂಗಳ ವ್ಯಾಲಿಡಿಟಿ ಅಂದೇ 84 ದಿನಗಳ ಕಾಲ ಸೇವೆಯನ್ನು ನೀಡಲಿದೆ. ಹೀಗಾಗಿ ಜಿಯೋ ಗ್ರಾಹಕರು ಮತ್ತೇ ಮೂರು ತಿಂಗಳು ಉಚಿತ ಸೇವೆಯ ಲಾಭವನ್ನು ಪಡೆಯಬಹುದಾಗಿದೆ.

ಯಾವಾಗ ಧನ್ ಧನಾ ಧನ್ ಆಫರ್ ಆರಂಭ:

ಯಾವಾಗ ಧನ್ ಧನಾ ಧನ್ ಆಫರ್ ಆರಂಭ:

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಬದಲಿಗೆ ನೀಡುವ 'ಧನ್ ಧನಾ ಧನ್' ಆಫರ್ ಘೋಷಣೆ ಮಾಡಿದ್ದು, ಈ ನೂತನ ಆಫರ್ ಏಪ್ರಿಲ್ 16 ರಿಂದ ಕಾರ್ಯಾರಂಭವನ್ನು ಮಾಡಲಿದೆ. ಏಪ್ರಿಲ್ 16ರಿಂದ ಗ್ರಾಹಕರಿಗೆ ಈ ಕೊಡುಗೆಯ ಲಾಭವು ದೊರೆಯಲಿದೆ.

ಧನ್ ಧನಾ ಧನ್ ಆಫರ್ ವ್ಯಾಲಿಡಿಟಿ:

ಧನ್ ಧನಾ ಧನ್ ಆಫರ್ ವ್ಯಾಲಿಡಿಟಿ:

ಜಿಯೋ ಧನ್ ಧನಾ ಧನ್ ಆಫರ್ ಜಿಯೋ ಗ್ರಾಹಕರ ಮೊದಲ ರೀಚಾರ್ಜ್ ಗೆ ದೊರೆಯುವ ಆಫರ್ ಆಗಿದ್ದು, ಇತರೇ ಟೆಲಿಕಾಂ ಕಂಪನಿಗಳಂತೆ ಯಾವುದೇ ಷರತ್ತು ಆಫರ್‌ಗೆ ಅನ್ವಯಿಸುವುದಿಲ್ಲ. ಅಲ್ಲದೇ ಇದು ಮೂರು ತಿಂಗಳ ವ್ಯಾಲಿಡಿಟಿ. ಅಂದರೇ 84 ದಿನಗಳು ಮಾತ್ರ ಉಚಿತ ಕೊಡುಗೆಯನ್ನು ನೀಡಲಿದೆ.

ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಧನ್ ಧನಾ ಧನ್ ಆಫರ್ ಲಾಭಗಳೇನು:

ಧನ್ ಧನಾ ಧನ್ ಆಫರ್ ಲಾಭಗಳೇನು:

ಜಿಯೋ ಹೊಸದಾಗಿ ಘೋಷಣೆ ಮಾಡಿರುವ 'ಧನ್‌ ಧನಾ ಧನ್' ಆಫರ್ ನಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳು ದೊರೆಯುತ್ತಿದೆ. ಒಂದು 84 ದಿನಗಳ ಕಾಲ ಪ್ರತಿ ನಿತ್ಯ 1 GB ಹೈಸ್ಪೀಡ್ 4G ಡೇಟಾ ಬಯಸುವವರಿಗೆ 309ರೂ. ಆಫರ್ ಹಾಗೆಯೇ ಪ್ರತಿ ನಿತ್ಯ 2 GB ಹೈಸ್ಪೀಡ್ 4G ಡೇಟಾ ಬೇಕು ಎಂದವರಿಗಾಗಿ 509 ರೂ. ಆಫರ್ ನೀಡಲು ಮುಂದಾಗಿದೆ. ಈ ಕೊಡುಗೆಯಲ್ಲಿ ಜಿಯೋ ಗ್ರಾಹಕರಿಗೆ ಉಚಿತ ಕರೆ ಮಾಡುವ, ಉಚಿತ ಮೇಸೆಜ್ ಕಳುಹಿಸುವ ಮತ್ತು ಉಚಿತ ವಾಗಿ ಜಿಯೋ ಆಪ್‌ಗಳ ಬಳಕೆ ಮಾಡುವ ಅವಕಾಶವನ್ನು ನೀಡಲಾಗಿದೆ.

ರೀಚಾರ್ಜ್ ಮಾಡಿಸುವುದು ಹೇಗೆ..:?

ರೀಚಾರ್ಜ್ ಮಾಡಿಸುವುದು ಹೇಗೆ..:?

ಜಿಯೋ ಪ್ರೈಮ್ ಸದಸ್ಯರೂ ಸೇರಿದಂತೆ ಜಿಯೋ ಗ್ರಾಹಕರು ಈ ಹೊಸ ಕೊಡುಗೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಒಂದೇ ರೀಚಾರ್ಜ್ ನಲ್ಲಿ ಮೂರು ತಿಂಗಳು ಉಚಿತ ಸೇವೆಯನ್ನು ಪಡೆಯಬಹುದಾಗಿದೆ. ಈಗಾಗಲೇ ಪ್ರೈಮ್ ಸದಸ್ಯರಾದವರು 309 ರೂ ರೀಚಾರ್ಜ್ ಮಾಡಿಸಿದರೆ, ಹೊಸ ಗ್ರಾಹಕರು ರೂ. 408(309+99) ರೀಚಾರ್ಜ್ ಮಾಡಿಸಬೇಕಾಗಿದೆ. ಜಿಯೋ ಮನಿ ಇಲ್ಲವೇ ಜಿಯೋ ಔಟ್ ಲೆಟ್‌ಗಳಲ್ಲಿ ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ಹೊಸ ಗ್ರಾಹಕರಿಗೂ ಮೂರು ತಿಂಗಳ ಆಫರ್:

ಹೊಸ ಗ್ರಾಹಕರಿಗೂ ಮೂರು ತಿಂಗಳ ಆಫರ್:

ಹೊಸದಾಗಿ ಜಿಯೋ ಸೇರಿದ ಗ್ರಾಹಕರು ಸಹ ಪ್ರೈಮ್ ಸದಸ್ಯರಲ್ಲದಿದ್ದರೂ 'ಧನ್ ಧನಾ ಧನ್' ಆಫರ್ ಲಾಭವನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಯಾವುದೇ ಹೆಚ್ಚಿನ ದರವನ್ನು ನೀಡಲಬೇಕಾಗಿಲ್ಲ. ಜಿಯೋ ಪ್ರೈಮ್ ಸದಸ್ಯತ್ವ ಶುಲ್ಕ ಮತ್ತು ಧನ್ ಧನಾ ಧನ್ ರೀಚಾರ್ಜ್ ಮೊತ್ತವನ್ನು ಪಾವತಿ ಮಾಡಿದರೆ ಸಾಕು.

Best Mobiles in India

Read more about:
English summary
a new ‘Dhan Dana Dhan’ tariff plan which is a Rs. 309 plan instead of the erstwhile Rs. 303 plan for services for three months. Here’s everything you need to know about Jio’s new plan. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X