10 ಕೋಟಿ ಗ್ರಾಹಕರನ್ನು ಹೊಂದುವ ಗುರಿ: ಜಿಯೋದಿಂದ ಮತ್ತೊಂದು ಭರ್ಜರಿ ಆಫರ್..!!

ಸದ್ಯ 7 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರು ಜಿಯೋ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ

Written By:

ಸದ್ಯ ದೇಶಿಯ ಟೆಲಿಕಾಂ ವಲಯದಲ್ಲಿ ಹೊಸ ಅಲೆಯನ್ನೇ ಹುಟ್ಟು ಹಾಕಿರುವ ರಿಲಯನ್ಸ್ ಮಾಲೀಕತ್ವದ ಜಿಯೋ, ಸೇವೆ ಆಂಭಿಸಿದ ದಿನದ ಇಲ್ಲಿಯವರೆಗೂ ಬಹುತೇಕ ಉಚಿತ ಡೇಟಾ ಮತ್ತು ಉಚಿತ ಕರೆ ಸೇವೆಯನ್ನು ನೀಡುತ್ತಲೇ ಬಂದಿದೆ. ಸದ್ಯ 7 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರು ಜಿಯೋ ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ.

10 ಕೋಟಿ ಗ್ರಾಹಕರನ್ನು ಹೊಂದುವ ಗುರಿ: ಜಿಯೋದಿಂದ ಮತ್ತೊಂದು ಭರ್ಜರಿ ಆಫರ್..!!

ಓದಿರಿ: ದುಡ್ಡಿಗೆ ಜಿಯೋ ಸಿಮ್ ಮಾರಾಟ ಮಾಡುವವರೇ ಎಚ್ಚರ: ಜೈಲು ಸೇರಬೇಕಾದಿತು..!!

ದೊಡ್ಡ ಸಂಖ್ಯೆಯ ಮೇಲೆಯೇ ಕಣ್ಣು ಇಟ್ಟಿರುವ ಜಿಯೋ ಕಾರ್ಯ ಆರಂಭ ಮಾಡಿದ 5 ತಿಂಗಳಿಗಿಂತ ಕಡಿಮೆ ಅವಧಿಯಲ್ಲೇ ಗರಿಷ್ಠ ಪ್ರಮಾಣದ ಗ್ರಾಹಕರನ್ನು ತಲುಪಿತ್ತು, ಸದ್ಯ ಸುಮಾರು 7.5 ಕೋಟಿಗಿಂತ ಹೆಚ್ಚಿನ ಜನರು ಜಿಯೋ ಬಳಕೆದಾರದ್ದು, ಇದು ಹೆಚ್ಚುತ್ತಲೆ ಸಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

10 ಕೋಟಿ ಗ್ರಾಹಕರ ಗುರಿ:

ದೇಶಿಯ ಟೆಲಿಕಾಂ ವಲಯದಲ್ಲಿ ದೈತ್ಯ ಮಟ್ಟಕ್ಕೆ ಬೆಳೆಯುತ್ತಿರುವ ಜಿಯೋ, ಕಡಿಮೆ ಕಾಲದಲ್ಲಿ ಅತೀ ಹೆಚ್ಚಿನ ಗ್ರಾಹಕರನ್ನು ತನ್ನ ಬಳಿಗೆ ಸೆಳೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ಮಾರ್ಚ್ ಅಂತ್ಯದ ವೇಳೆಗೆ ಜಿಯೋ ಬಳಕೆದಾರರ ಸಂಖ್ಯೆಯನ್ನು 10 ಕೋಟಿಗೆ ಏರಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದೆ ಎನ್ನಲಾಗಿದೆ.

ಇದೇ ಸಂಭ್ರಮದಲ್ಲಿ ಮತ್ತೊಂದು ಆಫರ್:

ಜಿಯೋ ಲಾಂಚ್ ಆದ ಸಂಭ್ರಮದಲ್ಲಿ ಗ್ರಾಹಕರಿಗೆ 'ವೆಲ್‌ಕಮ್ ಆಫರ್' ಹೆಸರಿನಲ್ಲಿ ಮೂರು ತಿಂಗಳು ಉಚಿತ ಕರೆ, ಮೂರು ತಿಂಗಳು ಉಚಿತ 4G ಇಂಟರ್‌ನೆಟ್‌ ಸೇವೆಯನ್ನು ನೀಡಿತ್ತು. ಇದಾದ ನಂತರದಲ್ಲಿ 'ಹ್ಯಾಪಿ ನ್ಯೂ ಇಯರ್' ಎಂದು ಮತ್ತೊಂದು ಆಫರ್ ನೀಡಿದ ಜಿಯೋ ಮತ್ತೆ ಮೂರು ತಿಂಗಳು ಉಚಿತ ಕರೆ ಮತ್ತು ಉಚಿತ 4G ಇಂಟರ್‌ನೆಟ್ ಸೇವೆಯನ್ನು ನೀಡಿತ್ತು. ಈಗ 10 ಕೋಟಿ ಗ್ರಾಹಕರ ಹೊಂದುವ ಸಂಭ್ರಮದಲ್ಲಿ ಮತ್ತೊಂದು ಆಫರ್ ನೀಡಲಿದೆ.

100 ರೂ ಆಫರ್:

ರಿಲಯನ್ಸ್ ಮಾಲೀಕತ್ವದ ಜಿಯೋ ಉಚಿತ ಸೇವೆಯನ್ನು ನೀಡಲು ಮುಂದಾದರು ಬೇರೆ ಕಂಪನಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದು, ಇದಕ್ಕೆ ಸರಿಯಾಗಿ ಜಿಯೋ ಸಹ ತನ್ನ ಆಫರ್‌ನಲ್ಲಿ ಕೊಂಚ ಬದಾಲವಣೆಯನ್ನು ಮಾಡುತ್ತಾ ಗ್ರಾಹಕರಿಗೆ ಉತ್ತಮ ಆಫರ್ ನೀಡಲು ಮುಂದಾಗಿದೆ. ಹಾಗೇ ಈ ಬಾರಿ ಗ್ರಾಹಕರಿಗೆ ಉಚಿತ ಸೇವೆಯನ್ನು ನೀಡುವ ಬದಲು, ಕೇಲವ 100 ರೂಗೆ ರಿಜಾರ್ಜ್ ಮಾಡಿಸಿಕೊಂಡು ಅಲ್‌ಲಿಮಿಟೆಡ್ ಕರೆಗಳು ಮತ್ತು ಉಚಿತ 4G ಇಂಟರ್‌ನೆಟ್ ಸೇವೆಯನ್ನು ನೀಡುವ ಯೋಜನೆಯಲ್ಲಿದೆ. ಹಾಗಾಗಿ ಜೂನ್ ತಿಂಗಳ ವರೆಗೂ ಜಿಯೋ ಉಚಿತ ಸೇವೆ ಮುಂದುವೆರೆಯಲಿದೆ.

ಲೈಫ್‌ಟೈಮ್ ಉಚಿತ ಸೇವೆಯ ಗುರಿ:

ಸದ್ಯ ಮತ್ತೆ 90 ದಿನಗಳ ಕಾಲ ಉಚಿತ ಸೇವೆಯನ್ನು ನೀಡಲು ಮನಸ್ಸು ಮಾಡಿರುವ ಜಿಯೋ, ತನ್ನ ಗ್ರಾಹಕರಿಗೆ ಉಚಿತ ಕರೆ ಸೇವೆಯನ್ನು ಲೈಫ್‌ಟೈಮ್ ನೀಡುವ ಆಲೋಚನೆಯಲ್ಲಿದೆ. ಕೇವಲ ಡೇಟಾ ಸೇವೆಗೆ ಮಾತ್ರ ದರ ವಿಧಿಸಿ ತನ್ನ ಗ್ರಾಹಕರನ್ನು ಸಂತೋಷ ಪಡಿಸಲು ಮುಂದಾಗಿದೆ ಎನ್ನಲಾಗಿದೆ.
ಸದ್ಯ ಮತ್ತೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 Read more about:
English summary
Reliance Industries chairman Mukesh Ambani has said that his newly-launched telecom venture Jio has crossed a customer base of 100 million. to know more visit kananda.gizbot.com
Please Wait while comments are loading...
Opinion Poll

Social Counting