ಶಾಕಿಂಗ್ ಸುದ್ದಿ..ಜಿಯೋ ಉಚಿತ ಆಫರ್ ಇಂದು ಮುಕ್ತಾಯ!..₹309ರೂ.ಆಫರ್‌ಗೆ ಲಾಸ್ಟ್ ಚಾನ್ಸ್!!

ಜಿಯೋ ಉಚಿತ ಆಫರ್ ಇಂದು ಮುಕ್ತಾಯವಾಗಿದ್ದು, ಜಿಯೋಗೆ 309 ರೂಪಾಯಿ ರೀಚಾರ್ಜ್ ಮಾಡಿಸದೇ ಇದ್ದವರ ಸೇವೆಗಳನ್ನು ಕೊನೆಗೊಳಿಸಲಾಗಿದೆ.!!

|

ಕಳೆದ ಏಳು ತಿಂಗಳಿಂದ ಉಚಿತವಾಗಿದ್ದ ಜಿಯೋ ಆಫರ್ ಇಂದು ಮುಕ್ತಾಯಗೊಂಡಿದೆ.!! ಹೌದು, ಹತ್ತು ಹಲವು ಬೆಳವಣಿಗೆಗಳ ನಂತರ ಜಿಯೋ ಉಚಿತ ಆಫರ್ ಇಂದು ಮುಕ್ತಾಯವಾಗಿದ್ದು, ಜಿಯೋಗೆ 309 ರೂಪಾಯಿ ರೀಚಾರ್ಜ್ ಮಾಡಿಸದೇ ಇದ್ದವರ ಸೇವೆಗಳನ್ನು ಕೊನೆಗೊಳಿಸಲಾಗಿದೆ.!!

ಓದಿರಿ: ಮತ್ತೇ ಬದಲಾದ ಜಿಯೋ ಪ್ಲಾನ್..! ಏಕೆ, ಹೊಸ ಆಫರ್ ಏನೇನು.?

ಜಿಯೋವಿನಿಂದ ಉಚಿತ ಕರೆ ಮತ್ತು ಡಾಟಾ ಸೌಲಭ್ಯ ಪಡೆಯುತ್ತಿದ್ದ ಗ್ರಾಹಕರಿಗಿದು ಕಹಿ ಸುದ್ದಿಯಾಗಿದ್ದು, ಏಪ್ರಿಲ್‌ 15 ನೇ ತಾರೀಖಿನಂದು ಮುಕ್ತಾಯವಾಗಲಿದೆ ಎನ್ನಲಾಗಿದ್ದ ಜಿಯೋ ಸೇವೆ 28 ನೇ ತಾರೀಖು ಕೊನೆಗೊಳ್ಳುತ್ತಿದೆ.!! ಇನ್ನು ಜಿಯೋವಿನ ಧನ್‌ಧನಾ ಧನ್ ಆಫರ್ ರೀಚಾರ್ಜ್ ಮಾಡಿಸಿದರಷ್ಟೇ ಜಿಯೋ ಸೇವೆ ಪಡೆಯಬಹುದಾಗಿದೆ.!!

ಶಾಕಿಂಗ್..ಜಿಯೋ ಉಚಿತ ಆಫರ್ ಇಂದು ಮುಕ್ತಾಯ!...₹309ರೂ.ಆಫರ್‌ಗೆ ಲಾಸ್ಟ್ ಚಾನ್ಸ್!!

28 ನೇ ತಾರೀಖಿನಿಂದ ಜಿಯೋ ಉಚಿತ ಕಾಲ್‌ಸೇವೆ ಕಡಿತವಾಗಿದ್ದು, ಇದೇ ತಿಂಗಳು 30ನೇ ತಾರೀಖು ಉಚಿತ ಡೇಟಾ ಕೊಡುಗೆ ಮುಗಿಯಲಿದೆ ಎನ್ನುವ ಮಾಹಿತಿ ಟೆಲಿಕಾಂನಿಂದ ಹೊರಬಿದ್ದಿದೆ. ಹಾಗಾಗಿ, ಕಳೆದ ಏಳು ತಿಂಗಳಿನಿಂದ ಉಚಿತ ಜಿಯೋ ಸೇವೆಗೆ ಎಳ್ಳು ನೀರು ಬಿಟ್ಟಂತಾಗಿದೆ.!!

ಜಿಯೋ ಈಗಾಗಲೇ ₹309 ಧನ್‌ಧನಾ ಧನ್ ಆಫರ್ ಬಿಡುಗಡೆ ಮಾಡಿದ್ದು, ರೀಚಾರ್ಜ್ ಮಾಡಿಕೊಂಡಿರುವವರಿಗೆ ಮಾತ್ರ ಮೂರು ತಿಂಗಳ ಆಫರ್ ಮುಂದುವರಿಸುವುದಾಗಿ ತಿಳಿಸಿದೆ. ಹಾಗಾದರೆ, ಜಿಯೋವಿನ ಮೂರು ತಿಂಗಳ ಆಫರ್ ಧನ್‌ಧನಾ ಧನ್ ಆಫರ್ ಹೇಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಧನ್ ಧನಾ ಧನ್ ಆಫರ್!

ಧನ್ ಧನಾ ಧನ್ ಆಫರ್!

ಜಿಯೋ ಧನ್ ಧನಾ ಧನ್ ಆಫರ್ ನೀಡಿದ್ದು, ಅನ್‌ಲಿಮಿಟೆಡ್ ಕಾಲ್ ಮತ್ತು ಡೇಟಾ ನೀಡಲು ಈ ಕೊಡುಗೆಯಲ್ಲಿ ಗ್ರಾಹಕರಿಗೆ ಎರಡು ಆಯ್ಕೆ ನೀಡಿದೆ. ಈ ಎರಡು ಪ್ಲಾನ್‌ಗಳಲ್ಲಿ ಒಂದನ್ನು ಜಿಯೋ ಗ್ರಾಹಕರು ಆಯ್ದುಕೊಳ್ಳಬೇಕಿದೆ.!!

309ರ ಜಿಯೋ ಪ್ಲಾನ್

309ರ ಜಿಯೋ ಪ್ಲಾನ್

509 ರೂಪಾಯಿ ರಿಜಾರ್ಜ್ ಮಾಡಿಸುವ ಜಿಯೋ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ಹಾಗೂ ಪ್ರತಿ ದಿನ 2GB ಹೈಸ್ಪಿಡ್ ಡೇಟಾವನ್ನು ಜಿಯೋ ನೀಡಲಿದೆ. ಅಲ್ಲದೇ ಈ ಎರಡು ಪ್ಲಾನ್‌ನಲ್ಲಿ ಜಿಯೋ ಆಪ್ ಗಳನ್ನು ಉಚಿತವಾಗಿ ಬಳಕೆ ಮಾಡಬಹುದಾಗಿದೆ.

ಜಿಯೋ ಪ್ರೈಮ್ ಸದಸ್ಯತ್ವ

ಜಿಯೋ ಪ್ರೈಮ್ ಸದಸ್ಯತ್ವ

ಜಿಯೋ ಪ್ರೈಮ್ ಸದಸ್ಯತ್ವ ಪಡೆದರೆ ಮಾತ್ರ ಜಿಯೋವಿನ ಧನ್ ಧನಾ ಧನ್ ಆಫರ್ ಪಡೆಯುವ ಬಗ್ಗೆ ಜಿಯೋ ಇನ್ನು ಮಾಹಿತಿ ಬಿಡುಗಡೆ ಮಾಡಿಲ್ಲ. ಆದರೆ, ಮೂಲಗಳ ಪ್ರಕಾರ ಪ್ರೈಮ್ ಸದಸ್ಯತ್ವ ಪಡೆಯದವರು ಸಹ ಜಿಯೋ ಧನ್ ಧನಾ ಧನ್ ಆಫರ್ ಎಂಜಾಯ್ ಮಾಡಬಹುದಾಗಿದೆ.!!

₹309 ಆಫರ್‌ಗೆ ಲಾಸ್ಟ್ ಚಾನ್ಸ್

₹309 ಆಫರ್‌ಗೆ ಲಾಸ್ಟ್ ಚಾನ್ಸ್

ಈಗಾಗಲೇ ಜಿಯೋ ಸೇವೆ ಮುಗಿದಿದ್ದು, ಮೇ 10 ನೇ ತಾರೀಖಿನವರೆಗೂ ಜಿಯೋ ₹309 ರೂಪಾಯಿ ಧನ್ ಧನಾ ಧನ್ ಆಫರ್ ಪಡೆಯಲು ಲಾಸ್ಟ್ ಚಾನ್ಸ್ ನೀಡುತ್ತಿದೆ ಎನ್ನಲಾಗಿದೆ. ನಂತರ ಜಿಯೋವಿನ ಸಾಮಾನ್ಯ ಆಫರ್‌ಗಳು ಮುಂದುವರೆಯುತ್ತವೆ ಎನ್ನಲಾಗಿದೆ.!!

Best Mobiles in India

English summary
year 2016 was a monumental year for Indian telecom industry because this is the year when Jio entered the market and started offering its services, to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X