ಜಿಯೋ ಫೀಚರ್ ಫೋನ್‌ನಲ್ಲಿ ಅನ್‌ಲಿಮಿಟೆಡ್ ವಾಯ್ಸ್, ವೀಡಿಯೊ ಕರೆ ಆಫರ್

ಮುಕೇಶ್ ಅಂಬಾನಿ ಮಾಲೀಕತ್ವದ ಕಂಪನಿ ಫೀಚರ್‌ ಫೋನ್‌ಗಳಲ್ಲಿ ವಾಯ್ಸ್ ಓವರ್ ಎಲ್‌ಟಿಇ (VoLTE) ಟೆಕ್ನಾಲಜಿ ಆಫರ್ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರನ್ನು ಆಕರ್ಷಿಸುವ ಯೋಜನೆ ಇದಾಗಿದೆ.

By Suneel
|

ರಿಲಾಯನ್ಸ್ ಜಿಯೋ ಮಿಲಿಯನ್‌ ಗಟ್ಟಲೇ ಬಳಕೆದಾರರನ್ನು ತನ್ನತ್ತ ಸೆಳೆಯಲು ಹೊಸ ಹೊಸ ಕ್ಷೇತ್ರದಲ್ಲಿ ತನ್ನ ಸೇವೆ ಆರಂಭಿಸುತ್ತಿದೆ. ಅಂದಹಾಗೆ ಲೇಟೆಸ್ಟ್ ಸುದ್ದಿ ಅಂದ್ರೆ ರಿಲಾಯನ್ಸ್ ಇಂಡಸ್ಟ್ರಿ 4G ಸಪೋರ್ಟ್ ಮಾಡುವ ಫೀಚರ್ ಫೋನ್‌ಗಳನ್ನು ಲಾಂಚ್ ಮಾಡಲು ತಯಾರಾಗುತ್ತಿದೆ. ಅಲ್ಲದೇ ಮೊಬೈಲ್‌'ಗಳಲ್ಲಿ ಹೊಸ ವರ್ಗವನ್ನೇ ಕ್ರಿಯೇಟ್ ಮಾಡಲು ನಿರ್ಧರಿಸಿದೆ.

ರಿಲಾಯನ್ಸ್ ಜಿಯೋ ಲಾಂಚ್ ಮಾಡಲು ಪ್ಲಾನ್‌ ಮಾಡಿರುವ ಡಿವೈಸ್‌ಗಳ ಬೆಲೆ, ನಾವು ಈ ಹಿಂದೆ ಗಿಜ್‌ಬಾಟ್‌ನಲ್ಲಿ ಹೇಳಿದಂತೆ ಬೆಲೆ ರೂ.1,000. ಇನ್ನೊಂದು ವಿಶೇಷ ಅಂದ್ರೆ ಈ ಹೊಸ ಸ್ಮಾರ್ಟ್‌ಫೋನ್‌ಗಳು ಅನ್‌ಲಿಮಿಟೆಡ್ ವಾಯ್ಸ್ ಮತ್ತು ವೀಡಿಯೊ ಕರೆ, ಡಿಜಿಟಲ್ ಮಾಹಿತಿಗಳ ಆಫರ್‌ನೊಂದಿಗೆ ಲಾಂಚ್‌ ಆಗಲಿವೆ. ಅಲ್ಲದೇ ಜನರ ನೆಚ್ಚಿನ ಪ್ಲಾನ್‌ಗಳನ್ನು ಫೋನ್‌ಗಳು ಹೊಂದಿರುತ್ತವೆ ಎನ್ನಲಾಗಿದೆ.

ರಿಲಾಯನ್ಸ್ ಜಿಯೋದಿಂದ, 'ಏರ್‌ಟೆಲ್‌, ಐಡಿಯಾ, ವೊಡಾಫೋನ್'ಗಳಿಗೆ ಬೆನಿಫಿಟ್ ಅಂತೆ!

ಮುಕೇಶ್ ಅಂಬಾನಿ ಮಾಲೀಕತ್ವದ ಕಂಪನಿ ಫೀಚರ್‌ ಫೋನ್‌ಗಳಲ್ಲಿ ವಾಯ್ಸ್ ಓವರ್ ಎಲ್‌ಟಿಇ (VoLTE) ಟೆಕ್ನಾಲಜಿ ಆಫರ್ ಮಾಡುತ್ತಿದ್ದು, ಗ್ರಾಮೀಣ ಪ್ರದೇಶದ ಜನರನ್ನು ಆಕರ್ಷಿಸುವ ಯೋಜನೆ ಇದಾಗಿದೆ. ಫೋನ್ ಆಫರ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿರಿ.

ಗ್ರಾಮೀಣ ಪ್ರದೇಶದ ಜನರು ಟಾರ್ಗೆಟ್

ಗ್ರಾಮೀಣ ಪ್ರದೇಶದ ಜನರು ಟಾರ್ಗೆಟ್

ರಿಲಾಯನ್ಸ್ ಜಿಯೋ ದೇಶದ ಎಲ್ಲಾ ಭಾಗಗಳಲ್ಲು, ಮತ್ತು ಬೃಹತ್‌ ಮಟ್ಟದ ಗ್ರಾಹಕರನ್ನು ಗ್ರಾಮೀಣ ಪ್ರದೇಶದಿಂದಲೂ ಪಡೆಯಲು VoLTE ಫೀಚರ್‌ ಫೋನ್‌ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ಪ್ರಸ್ತುತದಲ್ಲಿ ಭಾರತದ ಮಾರುಕಟ್ಟೆಯಲ್ಲಿ 2G ಫೀಚರ್ ಫೋನ್‌ ಗಳು ಬೃಹತ್‌ ಪ್ರಮಾಣದಲ್ಲಿ ಇವೆ. ಆದರೆ ರಿಲಾಯನ್ಸ್ ಜಿಯೋ ಲಾಂಚ್ ಮಾಡಲಿರುವ ಫೀಚರ್‌ ಫೋನ್‌ ಮೊದಲ ಬಾರಿಗೆ ಡಾಟಾ ಬಳಕೆದಾರರನ್ನು ಪಡೆಯಲಿದೆ.

ಮೊಬೈಲ್ ಬಳಕೆದಾರರು

ಮೊಬೈಲ್ ಬಳಕೆದಾರರು

ಶೇ.65 ರಷ್ಟು ಭಾರತೀಯರಲ್ಲಿ ಒಂದು ಶತಕೋಟಿ ಮೊಬೈಲ್‌ ಫೋನ್‌ ಬಳಕೆದಾರರು ಫೀಚರ್‌ ಫೋನ್‌ ಬಳಸುತ್ತಿದ್ದಾರೆ. ಪ್ರಸ್ತುತದಲ್ಲಿ ಚೀಪೆಸ್ಟ್‌ ಅಂದರೂ 3000 ರೂ ಬೆಲೆಯಲ್ಲಿ 4G ಸ್ಮಾರ್ಟ್‌ಫೋನ್‌ಗಳು ಲಭ್ಯವಿವೆ. ಆದ್ದರಿಂದ ಅಧಿಕ ರೀತಿಯಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಹೊಂದುವುದು ಕಷ್ಟವಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋ ಆಫರ್

ಜಿಯೋ ಆಫರ್

ಭಾರತದಲ್ಲಿ ಜಿಯೋ ಒಂದೇ VoLTE ಕರೆ ಮಾಡಲು ಅವಕಾಶ ನೀಡುತ್ತಿದ್ದು, ಸೆಪ್ಟೆಂಬರ್ 5 ರಿಂದ 25 ದಶಲಕ್ಷ ಜನರು ಜಿಯೋ ಸೇವೆ ಪಡೆದಿದ್ದಾರೆ. 100 ದಶಲಕ್ಷ ಗ್ರಾಹಕರನ್ನು ಶೀಘ್ರದಲ್ಲಿ ಹೊಂದಲಾಗುವುದು, ಟೆಲಿಕಾಂ ಮಾರುಕಟ್ಟೆ ಲೀಡರ್ ಭಾರತಿ ಏರ್‌ಟೆಲ್ 250 ದಶಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದೆ ಎಂದು ಮುಕೇಶ್‌ ಅಂಬಾನಿ ಫೀಚರ್ ಫೋನ್‌ ಲಾಂಚ್‌ ಕುರಿತು ಹೇಳಿದ್ದಾರೆ.

ಜಿಯೋದಿಂದ 2 ಫೀಚರ್ ಫೋನ್‌ಗಳು

ಜಿಯೋದಿಂದ 2 ಫೀಚರ್ ಫೋನ್‌ಗಳು

ರಿಲಾಯನ್ಸ್ ಜಿಯೋ ರೂ.1000 ಮತ್ತು ರೂ.1,500 ಬೆಲೆಯ ಎರಡು ಫೀಚರ್‌ ಫೋನ್‌ಗಳನ್ನು ಅಭಿವೃದ್ದಿಪಡಿಸುತ್ತಿದ್ದು, ಮುಂಬರುವ ಜನವರಿ ಮತ್ತು ಮಾರ್ಚ್‌ ತಿಂಗಳ ನಡುವೆ ಲಾಂಚ್ ಮಾಡಲಿದೆ.

ಉಚಿತ ಇಂಟರ್ನೆಟ್

ಉಚಿತ ಇಂಟರ್ನೆಟ್

ಜಿಯೋ ಲಾಂಚ್ ಮಾಡಲಿರುವ ಎರಡು ಫೀಚರ್‌ ಫೋನ್‌ಗಳು ಸ್ಮಾರ್ಟ್‌ಫೋನ್‌ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಇಂಟರ್ನೆಟ್ ಡಾಟಾ ಆಕ್ಸೆಸ್ ಮತ್ತು ಕರೆಗಳನ್ನು ಉಚಿತವಾಗಿ ಮಾಡಲು ಅವಕಾಶ ನೀಡುತ್ತವೆ. ಆದರೆ ಟಚ್‌ಸ್ಕ್ರೀನ್‌ ಇರುವುದಿಲ್ಲ ಎಂದು ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Jio prepares to launch 4G feature phones with unlimited voice, video calling. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X