ಜಿಯೋ Vs ಏರ್‌ಟೆಲ್ Vs ವೊಡೋಪೊನ್ Vs ಐಡಿಯಾ: ಯಾವುದರಲ್ಲಿದೆ ಬೆಸ್ಟ್‌ ಆಫರ್..!!

ಬಿಟ್ಟು ಹೋದ ಗ್ರಾಹಕರನ್ನು ಮತ್ತೆ ಸೆಳೆಯಲು ಎಂದು ತೀರ್ಮಾನಿಸಿ ಒಬ್ಬರಿಗಿಂತ ಒಬ್ಬರು ಹೊಸ ಹೊಸ ಆಫರ್‌ಗಳನ್ನು ನೀಡಲು ಮುಂದಾಗಿವೆ.

Written By:

ರಿಲಯನ್ಸ್ ಮಾಲೀಕತ್ವದ ಜಿಯೋ ಉಚಿತ ಸೇವೆಯನ್ನು ನಿಲ್ಲಿಸಿ, ಗ್ರಾಹಕರಿಗೆ ಸೇವೆಗಳ ಮೇಲೆ ದರ ವಿಧಿಸಲು ಮುಂದಾದ ಬೆನ್ನಲೇ ಇತರೇ ಕಂಪನಿಗಳೂ ಎಚ್ಚೆತ್ತು ಕೊಂಡಿದ್ದು, ಇದೇ ಸರಿಯಾದ ಸಮಯ ಬಿಟ್ಟು ಹೋದ ಗ್ರಾಹಕರನ್ನು ಮತ್ತೆ ಸೆಳೆಯಲು ಎಂದು ತೀರ್ಮಾನಿಸಿ ಒಬ್ಬರಿಗಿಂತ ಒಬ್ಬರು ಹೊಸ ಹೊಸ ಆಫರ್‌ಗಳನ್ನು ನೀಡಲು ಮುಂದಾಗಿವೆ.

ಜಿಯೋ Vs ಏರ್‌ಟೆಲ್ Vs ವೊಡೋಪೊನ್ Vs ಐಡಿಯಾ: ಯಾವುದರಲ್ಲಿದೆ ಬೆಸ್ಟ್‌ ಆಫರ್..!!

ಓದಿರಿ: ಇಂದು ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ರಿಲಯನ್ಸ್ ಮಾಲೀಕ್ವದ ಜಿಯೋ ವಿರುದ್ಧ ಏರ್‌ಟೆಲ್, ಇದರೊಂದಿಗೆ ವೊಡೋಪೊನ್ ಹಾಗೂ ಐಡಿಯಾ ಸಹ ಸ್ಪರ್ಧೆಗೆ ಇಳಿದಿದ್ದು, ಒಂದಕ್ಕಿಂತ ಒಂದು ಚೆಂದ ಆಫರ್‌ಗಳನ್ನು ನೀಡುತ್ತಿವೆ. ಜಿಯೋ ಮಾದರಿಯಲ್ಲೇ ದಿನಕ್ಕೊಂದು GB ಡೇಟಾವನ್ನು ನೀಡಲು ಮುಂದಾಗಿವೆ. ಅನ್‌ಲಿಮಿಟೆಡ್ ಕಾಲಿಂಗ್ ಕೊಡುಗೆಯನ್ನು ನೀಡುತ್ತಿವೆ.

ಓದಿರಿ: ವೊಡೋಪೋನ್ ನಿಂದ ದಿನಕ್ಕೊಂದು GB 4G ಡೇಟಾ, ಅನ್‌ಲಿಮಿಡೆಟ್ ಕರೆ ಮಾಡುವ ಆಫರ್..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಏರ್‌ಟೆಲ್ ರೂ.345/349 ಆಫರ್:

ಏರ್‌ಟೆಲ್ ಹೊಸದಾಗಿ ಜಿಯೋ ವಿರುದ್ಧವಾಗಿ ಬಿಡುಗಡೆ ಮಾಡಿರುವ ರೂ.345/349 ಕೊಡುಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಿದ್ದು, ಗ್ರಾಹಕರಿಗೆ ಉಚಿತವಾಗಿ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮಾಡುವ ಅವಕಾಶವನ್ನು ನೀಡುತ್ತಿದೆ. ಇದರೊಂದಿಗೆ ಪ್ರತಿ ತಿಂಗಳು 28GB ಡೇಟಾವನ್ನು ನೀಡುತ್ತಿದ್ದು, ಫೇರ್‌ ಯುಸೆಜ್ ಪಾಲಿಸಿಯಂತೆ ಪ್ರತಿ ನಿತ್ಯ 1 GB ಡೇಟಾ ಬಳಕೆಗೆ ಲಭ್ಯವಿದೆ. ಇದರಲ್ಲಿ ಬೆಳಿಗ್ಗೆ 500 MB, ರಾತ್ರಿ 500 MB ದೊರೆಯಲಿದೆ.

ವೊಡೋಪೋನ್ ರೂ. 346 ಆಫರ್:

ವೊಡೋಪೋನ್ ಸಹ ಜಿಯೋಗೆ ಸೆಡ್ಡು ಹೊಡೆಯುವಂತೆ ಹೊಸದೊಂದು ಆಫರ್‌ ನೀಡಿದ್ದು, ರೂ. 346ಗಳಿಗೆ 28 ದಿನಗಳ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಉಚಿತವಾಗಿದ್ದು, ತಿಂಗಳಿಗೆ 28GB (ಮೊದಲ ತಿಂಗಳು ಉಚಿತ 56GB) ಡೇಟಾ ಉಚಿತವಾಗಿ ದೊರೆಯಲಿದೆ. ಫೇರ್‌ ಯುಸೆಜ್ ಪಾಲಿಸಿ ಅನ್ವಯ ಪ್ರತಿ ನಿತ್ಯ ಒಂದು GB ಡೇಟಾ ಬಳಸಬಹುದಾಗಿದೆ.

ಐಡಿಯಾ ರೂ. 345 ಆಫರ್:

ಐಡಿಯಾ ಜಿಯೋಗೆ ಸೆಡ್ಡು ಹೊಡೆಯುವಂತೆ ಹೊಸ ಆಫರ್ ನೀಡಲಾಗಿದೆ. ರೂ. 345ಗಳಿಗೆ 28 ದಿನಗಳ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಉಚಿತವಾಗಿ ಮಾಡಬಹುದಾಗಿದೆ. 28 GB ಡೇಟಾ ದೊರೆಯಲಿದೆ. ಪ್ರತಿ ದಿನ 1GB ಡೇಟಾ ಹೊಸ ಗ್ರಾಹಕರಿಗೆ ದೊರೆಯಲಿದ್ದು, ಹಳೇ ಗ್ರಾಹಕರಿಗೆ 500 MB ಡೇಟಾ ನಿತ್ಯ ದೊರೆಯಲಿದೆ.

ಜಿಯೋ ಪ್ರೈಮ್ ರೂ.303 ಆಫರ್:

ಜಿಯೋ ತನ್ನ ಪ್ರೈಮ್ ಸದಸ್ಯರಿಗಾಗಿ ರೂ. 303 ರ ಆಫರ್ ನೀಡಿದ್ದು, 28 ದಿನಗಳ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕಾಲ್, 28 GB ಡೇಟಾ, ಪ್ರತಿ ದಿನ 1 GB ಡೇಟಾ ಹೊಸ ಗ್ರಾಹಕರಿಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
This means jio trouble for other mobile network operators and as expected, they have responded. to know more visit kannada.gizbot.com
Please Wait while comments are loading...
Opinion Poll

Social Counting