ಹೈಕೋರ್ಟ್ ಜಡ್ಜ್‌ಗಳಿಗೆ ಸಿಗಲಿದೆ ಐಫೋನ್‌

By Ashwath
|

ಕರ್ನಾಟಕದ ಹೈಕೋರ್ಟ್‌ ನ್ಯಾಯಧೀಶರು ಸದ್ಯದಲ್ಲೇ ಐಫೋನ್‌ ಹೊಂದಲಿದ್ದಾರೆ.ಹೈಕೋರ್ಟ್‌ ನ್ಯಾಯಧೀಶರಿಗೆ ಐಫೋನ್‌ 5ಸಿ ವಿತರಣೆಯಾಗಲಿದೆ.

16 ಜಿಬಿ ಆಂತರಿಕ ಮೆಮೊರಿ ಹೊಂದಿರುವ 40 ಐಫೋನ್‌ 5ಸಿ ಸ್ಮಾರ್ಟ್‌ಫೋನ್‌ ಖರೀದಿಸಲು ಹೈಕೋರ್ಟ್ ರಿಜಿಸ್ಟಾರ್‌ ಆಫೀಸ್‌‌ ಟೆಂಡರ್‌ ಕರೆದಿದೆ. ಕೇಸ್‌ ಮತ್ತು ತೀರ್ಪು‌ಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು ಎರಡು ವಿಶೇಷ ಐಓಎಸ್‌‌ ಆಪ್‌ಗಳು ತಯಾರಾಗಿರುವ ಹಿನ್ನೆಲೆಯಲ್ಲಿ ನ್ಯಾಯಧೀಶರಿಗೆ ಐಫೋನ್‌ 5ಸಿ ವಿತರಣೆಯಾಗಲಿದೆ.

 ಹೈಕೋರ್ಟ್ ಜಡ್ಜ್‌ಗಳಿಗೆ ಸಿಗಲಿದೆ ಐಫೋನ್‌
ಆಪಲ್‌ ಕಡಿಮೆ ಬೆಲೆಯ ಐಫೋನ್‌ 5ಸಿ ವಿಶ್ವದ ಮಾರುಕಟ್ಟೆಯಲ್ಲಿ ಮೂರು ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ 16/32 ಜಿಬಿ ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದ್ದರೆ, ಮಾರ್ಚ್ ತಿಂಗಳಿನಲ್ಲಿ ಇಂಗ್ಲೆಂಡ್‌ನಲ್ಲಿ 8 ಜಿಬಿ ಆಂತರಿಕ ಮೆಮೊರಿಯ ಐಫೋನ್‌ 5ಸಿ ಬಿಡುಗಡೆಯಾಗಿತ್ತು.

ಸದ್ಯ ಮಾರುಕಟ್ಟೆಯಲ್ಲಿ 16ಜಿಬಿ ಆಂತರಿಕ ಮೆಮೊರಿಯ ಐಫೋನ್‌ 5ಸಿಗೆ 39,499 ರೂಪಾಯಿ ನಿಗದಿಯಾಗಿದ್ದರೆ, 32ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌‌ಫೋನ್‌ 53,500 ಬೆಲೆಯಲ್ಲಿ ಲಭ್ಯವಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X