ಜೂನ್ 25: ಲೆನೊವೊ ಕೆ3 ಬಜೆಟ್ ಫೋನ್ ಲಾಂಚ್

By Shwetha
|

ಜೂನ್ 25 ಕ್ಕೆ ನಡೆಯುವ ಈವೆಂಟ್‌ನಲ್ಲಿ ಹೊಸ ನೋಟ್ ಡಿವೈಸ್ ಅನ್ನು ಲೆನೊವೊ ಇಂಡಿಯಾ ಲಾಂಚ್ ಮಾಡಲಿದೆ. ಭಾರತದಲ್ಲಿ ಕೆ3 ನೋಟ್ ಸ್ಮಾರ್ಟ್‌ಫೋನ್ ಅನ್ನು ಕಂಪೆನಿ ಲಾಂಚ್ ಮಾಡಲಿದೆ.

ಓದಿರಿ: ನಿಮ್ಮ ಫೋನ್‌ಗಿಂತಲೂ ಹೆಚ್ಚು ಶುದ್ಧ ಈ 5 ವಿಷಯಗಳು

ಜೂನ್ 25: ಲೆನೊವೊ ಕೆ3 ಬಜೆಟ್ ಫೋನ್ ಲಾಂಚ್

ದಿನಾಂಕವನ್ನು ಗೊತ್ತು ಮಾಡಿಕೊಳ್ಳಿ ಎಂಬ ಚಿತ್ರವನ್ನು ಕಂಪೆನಿ ಬಿಡುಗಡೆ ಮಾಡಿದ್ದು, ಇದು ಲೆನೊವೊ ಬಳಕೆದಾರರಲ್ಲಿ ಕಾತರದ ಕ್ಷಣಗಳನ್ನು ಉಂಟುಮಾಡುವುದಂತೂ ಸುಳ್ಳಲ್ಲ. ಲೆನೊವೊ ಕೆ3 ನೋಟ್, 4ಜಿ ಎಲ್‌ಟಿಇ ಬಜೆಟ್ ಫ್ಯಾಬ್ಲೆಟ್ ಆಗಿದ್ದು, ಚೀನಾದಲ್ಲಿ ಇದನ್ನು ರೂ 9,300 ಕ್ಕೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಚೀನಾದಲ್ಲಿ ಮೀಜು ಎಮ್1 ನೋಟ್‌ಗೆ ಸ್ಪರ್ಧೆಯನ್ನು ಒಡ್ಡಲಿದೆ. ಚೀನಾದ ಹ್ಯಾಂಡ್‌ಸೆಟ್ ತಯಾಕರು ತಮ್ಮ ಎಮ್1 ನೋಟ್ ಅನ್ನು ರೂ 11,999 ಕ್ಕೆ ಬಿಡುಗಡೆ ಮಾಡಿದ್ದರು. ಈ ಎರಡೂ ಡಿವೈಸ್‌ಗಳು ಅತ್ಯುತ್ತಮ ಫೋನ್ ಫೀಚರ್‌ಗಳನ್ನು ಒಳಗೊಂಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಡಿವೈಸ್‌ಗಳ ಬೆಲೆ ಮಾತ್ರ ವ್ಯತ್ಯಾಸವನ್ನು ಪಡೆದುಕೊಂಡಿದೆ.

ಜೂನ್ 25: ಲೆನೊವೊ ಕೆ3 ಬಜೆಟ್ ಫೋನ್ ಲಾಂಚ್

ಲೆನೊವೊ ಕೆ3 ನೋಟ್, ಬಜೆಟ್ ಫೋನ್ ಆಗಿದ್ದು, ಡ್ಯುಯಲ್ ಸಿಮ್ ಬೆಂಬಲವನ್ನು ಒದಗಿಸುತ್ತಿದೆ. ಆಂಡ್ರಾಯ್ಡ್ 5.0 ಲಾಲಿಪಪ್ ಇದರಲ್ಲಿ ಚಾಲನೆಯಾಗುತ್ತಿದ್ದು, ಹೊಸ ವೈಬ್ ಯುಐ ಮೇಲ್ಭಾಗದಲ್ಲಿದೆ. 5.5 ಇಂಚಿನ ಪೂರ್ಣ ಎಚ್‌ಡಿ 1080x1920 ಪಿಕ್ಸೆಲ್‌ಗಳು ಡಿವೈಸ್‌ನಲ್ಲಿದ್ದು 401 ಪಿಪಿಐ ಪಿಕ್ಸೆಲ್ ಡೆನ್ಸಿಟಿ ಇದರಲ್ಲಿದೆ. ಫೋನ್ 64 ಬಿಟ್ 1.5GHz ಓಕ್ಟಾ ಕೋರ್ ಪ್ರೊಸೆಸರ್ ಜೊತೆಗೆ 2 ಜಿಬಿ RAM ಅನ್ನು ಪಡೆದುಕೊಂಡಿದೆ.

ಓದಿರಿ: ಫೇಸ್‌ಬುಕ್ ಒಡೆತನದಲ್ಲಿರುವ ಟಾಪ್ ಕಂಪೆನಿಗಳು

ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್‌ಗಳನ್ನು ಪಡೆದುಕೊಂಡಿದ್ದು ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇನ್ನು ಫೋನ್‌ನ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು. ಇನ್ನು ಸಂಪರ್ಕ ಅಂಶಗಳೆಂದರೆ 4ಜಿ, ವೈಫೈ, ಬ್ಲ್ಯೂಟೂತ್ ಮತ್ತು ಮೈಕ್ರೋ ಯುಎಸ್‌ಬಿ ಇದರಲ್ಲಿದೆ.

ಇನ್ನು ಡಿವೈಸ್ ಬ್ಯಾಟರಿ 3000mAh ಆಗಿದ್ದು, ಲೆನೊವೊ A7000' ನ 2900mAh ಬ್ಯಾರಿಗಿಂತಲೂ ಇದು ಹೆಚ್ಚಿಗಿದೆ. ಫೋನ್‌ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಫ್ಲಿಪ್‌ಕಾರ್ಟ್ ಪಾಲುದಾರಿಕೆಯನ್ನು ಪಡೆದುಕೊಂಡಿದ್ದು ಎರಡೂ ಡಿವೈಸ್‌ಗಳು ಫ್ಲ್ಯಾಶ್ ಸೇಲ್ ಮಾಡೆಲ್‌ನಲ್ಲಿ ಲಭ್ಯವಿದೆ.

Best Mobiles in India

English summary
Lenovo India has started sending press invites for the launch of a new Note device at a June 25 event. The company is widely expected to launch the K3 Note smartphone in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X