ಅತ್ಯುತ್ತಮ ವೇರಿಯೇಬಲ್ ಡಿವೈಸ್ ಎಲ್‌ಜಿ ಜಿ ವಾಚ್

By Shwetha
|

ಎಲ್‌ಜಿಯ ಪ್ರಥಮ ಪ್ರಯತ್ನವಾಗಿರುವ ಜಿ ವಾಚ್, ಗೂಗಲ್‌ನ ಆಂಡ್ರಾಯ್ಡ್ ಓಎಸ್ ಚಾಲನೆಯಲ್ಲಿರುವ ಪ್ರಥಮ ವಾಚ್ ಆಗಿದ್ದು, ಸ್ಯಾಮ್‌ಸಂಗ್ ಗೇರ್ ಲೈವ್ ಮತ್ತು ಮೋಟೋರೋಲಾ ಮೋಟೋ 360 ಯ ಜೊತೆ ಕಾಣಿಸಿಕೊಂಡಿದೆ.

ಈ ವರ್ಷದ ಗೂಗಲ್‌ನ I/O ದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ಲಾಂಚ್ ಆಗಿರುವ ಜಿ ವಾಚ್, ಜುಲೈ 21 ರಂದು ಮುಂಬೈನಲ್ಲಿ ಲಾಂಚ್ ಆಗಿದೆ. ಮುಂಬೈನ ಮೆಹಬೂಬ್ ಸ್ಟುಡಿಯೋದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಜಿ ವಾಚ್ ಮತ್ತು G3 ಫ್ಲ್ಯಾಗ್‌ಶಿಪ್ ಹ್ಯಾಂಡ್‌ಸೆಟ್ ಅನ್ನು ಉದ್ಘಾಟಿಸಿದ್ದಾರೆ.

ಎಲ್‌ಜಿ ಜಿ ವಾಚ್ ವೀಡಿಯೋ ವಿಮರ್ಶೆ

ಇಂದಿನ ದಿನಗಳಲ್ಲಿ ಕಂಡುಬರುತ್ತಿರುವ ಇತರ ಬುದ್ಧಿವಂತ ವಾಚ್‌ಗಳಿಗಿಂತ ಎಲ್‌ಜಿ ಜಿ ವಾಚ್ ವಿಭಿನ್ನವಾಗಿದೆ ಪ್ರಥಮ ಬಾರಿಗೆ ಗೂಗಲ್‌ನ ಆಂಡ್ರಾಯ್ಡ್ ವೇರ್ ಇದರಲ್ಲಿ ಚಾಲನೆಯಾಗುತ್ತಿದೆ, ಮತ್ತು ಹೊಸ ವೇರಿಯೇಬಲ್ ಡಿವೈಸ್‌ಗಳಿಗೆ ಇರುವಂತಹ ವಿನ್ಯಾಸಗಳನ್ನು ಈ ವಾಚ್‌ನಲ್ಲಿ ಕಾಣಬಹುದು. ಇದರ ಬೆಲೆ ರೂ 14,990 ಇದನ್ನು ಮಧ್ಯಮ ಶ್ರೇಣಿಯ ಆಂಡ್ರಾಯ್ಡ್ ಡಿವೈಸ್‌ಗಳೊಂದಿಗೆ ಇದನ್ನು ಹೊಂದಿಸಬಹುದು.

ಎಲ್‌ಜಿ ಜಿ ವಾಚ್ ಪ್ರಮುಖ ವೈಶಿಷ್ಟ್ಯಗಳು
ಜಿ ವಾಚ್ 1.65 ಇಂಚಿನ IPS LCD ಟಚ್ ಡಿಸ್‌ಪ್ಲೇ ಇದರಲ್ಲಿದೆ. 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ವಾಚ್‌ನಲ್ಲಿದ್ದು, 512 ಎಮ್‌ಬಿ RAM ಇದರಲ್ಲಿದೆ. 4 ಜಿಬಿ ಆಂತರಿಕ ಸಂಗ್ರಹಣೆ ವಾಚ್‌ನಲ್ಲಿದೆ. 400mAh ಬ್ಯಾಟರಿಯನ್ನು ವಾಚ್‌ನ ಒಳಭಾಗದಲ್ಲಿ ನಮಗೆ ಕಾಣಬಹುದಾಗಿದ್ದು, ಆಂಡ್ರಾಯ್ಡ್ ವೇರ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ.

ಎಲ್‌ಜಿ ಜಿ ವಾಚ್ ಕುರಿತ ವೀಡಿಯೋದ ಸಂಪೂರ್ಣ ನೋಟ ಇಲ್ಲಿದ್ದು ವಾಚ್ ಕುರಿತ ದೃಶ್ಯಾವಳಿಯನ್ನು ನಿಮಗೆ ಕಾಣಬಹುದಾಗಿದೆ.

<center><iframe width="100%" height="510" src="//www.youtube.com/embed/FUjRLC5OUmA" frameborder="0" allowfullscreen></iframe></center>

Best Mobiles in India

Read more about:
English summary
This article tells about Lg g watch one of the greatest wearable which runs android wear Os video review.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X