ಲಾಲಿಪಪ್ ಹೊಸ ಕಮಾಲು ಅಪ್ಲಿಕೇಶನ್ ಲಾಕ್ ವೈಶಿಷ್ಟ್ಯ

By Shwetha
|

ನಿಮ್ಮ ಫೋನ್ ಅನ್ನು ನಿಮ್ಮ ಮಗು ಕೈಗೆತ್ತಿಕೊಂಡು ಫೋನ್‌ನ ಅರ್ಧದಷ್ಟು ಅಪ್ಲಿಕೇಶನ್, ನಿಮ್ಮ ಮಹತ್ವದ ಸಂದೇಶಗಳನ್ನು ಅಳಿಸಿ ಹಾಕಿದೆಯೇ? ಆದರೆ ಈ ಸಮಸ್ಯೆಯನ್ನು ನಿಮಗೆ ಪರಿಹರಿಸಬಹುದಾಗಿದೆ. ಹೇಗೆಂದರೆ ಆಂಡ್ರಾಯ್ಡ್ 5.0 ಲಾಲಿಪಪ್‌ನ ಸ್ಕ್ರೀನ್ ಪಿನ್ನಿಂಗ್ ಫೀಚರ್ ಅನ್ನು ನೀವು ಬಳಸಿದರೆ ಸಾಕು.

ಇದನ್ನೂ ಓದಿರಿ: ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು ಕಡಿಮೆ ಬೆಲೆಗೆ

ನಿಮ್ಮ ಲಾಲಿಪಪ್ ಓಎಸ್ ಇರುವ ಫೋನ್‌ನಲ್ಲಿ ಈ ಸೆಟ್ಟಿಂಗ್ ಅನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಸೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ, ಸೆಕ್ಯುರಿಟಿ ಸ್ಪರ್ಶಿಸಿ ನಂತರ ಸ್ಕ್ರೀನ್ ಪಿನ್ನಿಂಗ್ ತಟ್ಟಿ ಇದನ್ನು "ಅಡ್ವಾನ್ಸ್ಡ್" ತಲೆಬರಹದಡಿಯಲ್ಲಿ ನಿಮಗೆ ಕಾಣಬಹುದಾಗಿದೆ. ನಂತರ ಸ್ಕ್ರೀನ್ ಪಿನ್ನಿಂಗ್‌ಗೆ ಟಾಗಲ್ ಮಾಡಿ ನಂತರ ಆನ್ ಸ್ಥಿತಿಗೆ ಟಾಗಲ್ ಮಾಡಿ.

ಲಾಲಿಪಪ್‌ನ ಕಮಾಲನ್ನು ಬಳಸಿ ಅಪ್ಲಿಕೇಶನ್ ಲಾಕ್ ಮಾಡಿ

ಸ್ಕ್ರೀನ್ ಪಿನ್ನಿಂಗ್ ಅನ್ನು ಬಳಸಲು, ಓವರ್ ವ್ಯೂ ಬಟನ್ ಅನ್ನು ತಟ್ಟಿರಿ. ನಂತರ ನೀವು ಪಿನ್ ಮಾಡಬೇಕೆಂದು ಬಯಸುವ ಅಪ್ಲಿಕೇಶನ್ ಲಭ್ಯವಾಗುವವರೆಗೆ ಮೇಲೆ ಕೆಳಗೆ ಸ್ವೈಪ್ ಮಾಡುತ್ತಿರಿ. ನೀವು ಪಿನ್ ಮಾಡಬೇಕೆಂದು ಬಯಸುವ ಅಪ್ಲಿಕೇಶನ್ ನಿಮಗೆ ದೊರಕಿದ ಒಡನೆ, ಪಿನ್ ಬಟನ್ ಅನ್ನು ಸ್ಪರ್ಶಿಸಿ. ಇದು ನೀಲಿ ಹಸಿರು ಬಟನ್ ಆಗಿದ್ದು ಇದರಲ್ಲಿ ಬಿಳಿ ಪುಶಪ್ ಅನ್ನು ನಿಮಗೆ ಕಾಣಬಹುದು.

ಸ್ಕ್ರೀನ್ ಪಿನ್ನಿಂಗ್ ಅನ್ನು ಆಫ್ ಮಾಡಲು ನೀವು ಸಿದ್ಧರಾದ ತಕ್ಷಣ ಇನ್ನೊಂದು ಅಪ್ಲಿಕೇಶನ್‌ಗೆ ಮುಂದುವರಿಯಿರಿ, ಹಿಂದಕ್ಕೆ ಒತ್ತಿ ಹಿಡಿಯಿರಿ ಮತ್ತು ಇದೇ ಸಮಯದಲ್ಲಿ ಸ್ವಲ್ಪ ಸೆಕೆಂಡ್‌ಗಾಗಿ ಓವರ್ ವ್ಯೂ ಬಟನ್‌ಗಳನ್ನು ಒತ್ತಿರಿ. ನಿಮ್ಮ ಅಪ್ಲಿಕೇಶನ್ ಇದೀಗ ಭದ್ರವಾಗಿದೆ ಮತ್ತು ನಿಮ್ಮ ಮಗುವಿಗೆ ಯಾವುದೇ ಭಯವಿಲ್ಲದೆ ಫೋನ್ ಅನ್ನು ಇದೀಗ ನೀಡಿ.

Best Mobiles in India

English summary
This article tells about By using Android 5.0 Lollipop’s screen pinning feature it more difficult to switch from one app to another—and accidentally wreak havoc on someone’s phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X