ವಿಶ್ವ ಮಾನ್ಯತೆ ಗಳಿಸಿದ ಭಾರತೀಯ ಮೂಲದ ಹೆಮ್ಮೆಯ ಸಿಇಒಗಳು

By Shwetha
|

ಆಧುನಿಕ ತಂತ್ರಜ್ಞಾನ ಲೋಕಕ್ಕೆ ಭಾರತೀಯರ ಕೊಡುಗೆ ಅಸಾಮಾನ್ಯವಾದುದಾಗಿದೆ. ಗೂಗಲ್‌ನಿಂದ ಮೈಕ್ರೋಸಾಫ್ಟ್‌ವರೆಗೆ, ಕಾಗ್ನಿಜೆಂಟೊನಿಂದ ನೆಟ್ ಆಪ್‌ವರೆಗೆ ಭಾರತೀಯ ನಿಸ್ಸೀಮರು ತಮ್ಮ ಪ್ರತಿಭೆಯನ್ನು ತಾಂತ್ರಿಕ ಲೋಕಕ್ಕೆ ದಾರೆ ಎರೆದಿದ್ದಾರೆ. ವಿಶ್ವದ ಅತಿ ದೊಡ್ಡ ಕಂಪೆನಿಗಳನ್ನೇ ಲೀಲಾ ಜಾಲವಾಗಿ ನಿರ್ವಹಿಸುವ ನೈಪುಣ್ಯತೆಯನ್ನು ಈ ಸ್ಥಾಪಕರು ಪಡೆದುಕೊಂಡಿದ್ದಾರೆ ಎಂಬುದೇ ಹೆಮ್ಮೆಯ ವಿಷಯವಾಗಿದೆ.

ಓದಿರಿ: ಹೊಸ ಮೊಬೈಲ್‌ ಕನೆಕ್ಷನ್‌ಗೆ ಆಧಾರ್ e-KYC: ಸರ್ಕಾರದಿಂದ ಅನುಮತಿ

ಹಾಗಿದ್ದರೆ ಈ ಅಸಾಮಾನ್ಯರನ್ನು ಕಾಣಬೇಕೆಂಬ ಹಂಬಲ ಅಂತೆಯೇ ಅವರನ್ನು ಕುರಿತ ಮಾಹಿತಿಯನ್ನು ತಿಳಿದುಕೊಳ್ಳಲು ಇಂದಿನ ಲೇಖನ ನಿಮಗೆ ಸಹಕಾರಿಯಾಗಲಿದೆ.

ಸುಂದರ್ ಪಿಚ್ಚೈ - ಗೂಗಲ್

ಸುಂದರ್ ಪಿಚ್ಚೈ - ಗೂಗಲ್

ಭಾರತದಲ್ಲಿ ಜನಿಸಿದ ಸುಂದರ್ ಪಿಚ್ಚೈ, ಆಗಸ್ಟ್ 10, 2015 ರಿಂದ ಗೂಗಲ್ ಸಿಇಒ ಆಗಿ ನೇಮಕಗೊಂಡಿದ್ದಾರೆ. 44 ರ ಹರೆಯದ ಸುಂದರ್ ಚೆನ್ನೈಯಲ್ಲಿ ಜನಿಸಿದವರು.

ಸತ್ಯ ನಡೇಲ್ಲಾ - ಮೈಕ್ರೋಸಾಫ್ಟ್

ಸತ್ಯ ನಡೇಲ್ಲಾ - ಮೈಕ್ರೋಸಾಫ್ಟ್

22 ವರ್ಷದ ನಂಟನ್ನು ಮೈಕ್ರೋಸಾಫ್ಟ್‌ನೊಂದಿಗೆ ಹೊಂದಿಕೊಂಡಿರುವ ಸತ್ಯ ನಡೇಲ್ಲಾ, ಫೆಬ್ರವರಿ 2014 ರಂದು ಮುಖ್ಯ ಎಕ್ಸಿಕ್ಯೂಟೀವ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.

ರಾಜೀವ್ ಸುರಿ - ನೋಕಿಯಾ ಸಲ್ಯೂಶನ್ ಏಂಡ್ ನೆಟ್‌ವರ್ಕ್ಸ್

ರಾಜೀವ್ ಸುರಿ - ನೋಕಿಯಾ ಸಲ್ಯೂಶನ್ ಏಂಡ್ ನೆಟ್‌ವರ್ಕ್ಸ್

1995 ರಲ್ಲಿ ನೋಕಿಯಾಗೆ ಸೇರ್ಪಡೆಗೊಂಡ ರಾಜೀವ್ ನಂತರ 2014 ರ ಏಪ್ರಿಲ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡರು.

ಶಂತನು ನಾರಾಯಣ್, ಅಡೋಬ್

ಶಂತನು ನಾರಾಯಣ್, ಅಡೋಬ್

ಹೈದ್ರಾಬಾದ್‌ನಲ್ಲಿ ಜನಿಸಿದ ಶಂತನು, ಅಡೋಬ್ ಅನ್ನು 1998 ರಲ್ಲಿ ಸೇರಿದರು. ನಂತರ 2007 ರಲ್ಲಿ ಸಿಇಒ ಆಗಿ ನೇಮಕಗೊಂಡರು.

ಸಂಜಯ್ ಜಹಾ, - ಗ್ಲೋಬಲ್ ಫೌಂಡರೀಸ್

ಸಂಜಯ್ ಜಹಾ, - ಗ್ಲೋಬಲ್ ಫೌಂಡರೀಸ್

ಗ್ಲೋಬಲ್ ಫೌಂಡರೀಸ್ ಸಿಇಒ ಆಗಿ ಸಂಜಯ್ ಜಹಾ ನೇಮಗೊಂಡಿದ್ದು, ಇದು ಚಿಪ್‌ಗಳನ್ನು ತಯಾರಿಸುವ ಬಹುದೊಡ್ಡ ಸಂಸ್ಥೆಯಾಗಿ ಬೆಳದಿದೆ.

ಸಂಜಯ್ ಮೆಹ್ರೋತ್ರಾ - ಸ್ಯಾಂಡಿಸ್ಕ್

ಸಂಜಯ್ ಮೆಹ್ರೋತ್ರಾ - ಸ್ಯಾಂಡಿಸ್ಕ್

1988 ರಲ್ಲಿ ಸಂಜಯ್ ಮೆಹ್ರೋತ್ರಾ ಫ್ಲ್ಯಾಶ್ ಮೆಮೊರಿ ಸ್ಟೋರೇಜ್ ಕಂಪೆನಿಯನ್ನು ಹುಟ್ಟು ಹಾಕಿದ್ದು ಜನವರಿ 2011 ರಿಂದ ಸಿಇಒ ಆಗಿ ನೇಮಕಗೊಂಡಿದ್ದಾರೆ.

ಜಾರ್ಜ್ ಕುರಿಯನ್ - ನೆಟ್ ಆಪ್

ಜಾರ್ಜ್ ಕುರಿಯನ್ - ನೆಟ್ ಆಪ್

ಜೂನ್ 2015 ರಲ್ಲಿ ಸ್ಟೋರೇಜ್ ಮತ್ತು ಡೇಟಾ ಮ್ಯಾನೇಜ್‌ಮೆಂಟ್ ಕಂಪೆನಿ ನೆಟ್ ಆಪ್ ಸಿಇಒ ಮತ್ತು ಅಧ್ಯಕ್ಷರಾಗಿ ಜಾರ್ಜ್ ಕುರಿಯನ್ ನೇಮಕಗೊಂಡಿದ್ದರು.

ಫ್ರಾನ್ಸಿಸ್ಕೊ ಡಿಸೋಜಾ - ಕಾಗ್ನಿಜಾಂಟ್

ಫ್ರಾನ್ಸಿಸ್ಕೊ ಡಿಸೋಜಾ - ಕಾಗ್ನಿಜಾಂಟ್

ಸಾಫ್ಟ್‌ವೇರ್ ಸರ್ವೀಸ್ ವರ್ಗದಲ್ಲೇ ಅತಿ ಕಿರಿಯ ಸಿಇಒ ಎಂಬ ಮಾನ್ಯತೆಗೆ ಭಾಜನರಾದ ಫ್ರಾನ್ಸಿಸ್ಕೊ, ಕಂಪೆನಿಯ ಬೋರ್ಡ್ ಆಫ್ ಡೈರೆಕ್ಟರ್ಸ್‌ನ ಸದಸ್ಯರೂ ಹೌದು.

ದಿನೇಶ್ ಪಲಿವಾಲ್ - ಹಾರ್ಮನ್

ದಿನೇಶ್ ಪಲಿವಾಲ್ - ಹಾರ್ಮನ್

ಹಾರ್ಮನ್ ಅಂತರಾಷ್ಟ್ರೀಯ ಕಂಪೆನಿಯ ಸಿಇಒ ಆಗಿರುವ ದಿನೇಶ್ ಪಲಿವಾಲ್, ಪ್ರೀಮಿಯಮ್ ಆಡಿಯೊ ಗೇರ್ ಬ್ರ್ಯಾಂಡ್‌ನ ಉತ್ತಮ ಹುದ್ದೆಯನ್ನು ಅಲಂಕರಿಸಿದ್ದಾರೆ.

ಅಶೋಕ್ ವೇಮುರಿ - ಕ್ಸೆರಾಕ್ಸ್ ಬ್ಯುಸಿನೆಸ್ ಎಲ್‌ಎಲ್‌ಸಿ

ಅಶೋಕ್ ವೇಮುರಿ - ಕ್ಸೆರಾಕ್ಸ್ ಬ್ಯುಸಿನೆಸ್ ಎಲ್‌ಎಲ್‌ಸಿ

110 ವರ್ಷದ ಹಳೆಯ ಡಾಕ್ಯುಮೆಂಟ್ ತಂತ್ರಜ್ಞಾನ ಕಂಪೆನಿಯಾಗಿರುವ ಕ್ಸೆರಾಕ್ಸ್, ಇದರ ಸಿಇಒ ಆಗಿ ಗದ್ದುಗೆಯನ್ನು ಏರಿದವರು ಅಶೋಕ್ ವೇಮುರಿಯಾಗಿದ್ದಾರೆ.

Best Mobiles in India

English summary
Here's a look at 10 India-born CEOs of global technology giants.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X