ಮೀಜು ಎಮ್ಎಕ್ಸ್5 ಸ್ಮಾರ್ಟ್‌ಫೋನ್ ಲಾಂಚ್

By Shwetha
|

ಚೀನಾದ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಮೀಜು ತನ್ನ ಮೀಜು ಎಮ್ಎಕ್ಸ್5 ಸ್ಮಾರ್ಟ್‌ಫೋನ್ ಅನ್ನು ಚೀನಾದ ಬೀಜಿಂಗ್‌ನಲ್ಲಿ ನಡೆಯುತ್ತಿರುವ ಈವೆಂಟ್ ಒಂದರಲ್ಲಿ ಲಾಂಚ್ ಮಾಡಿದೆ. ಎಮ್‌ಟಚ್ 2.0 ತಂತ್ರಜ್ಞಾನದೊಂದಿಗೆ ಡಿವೈಸ್ ಬಂದಿದ್ದು ಎಮ್‌ಪೇ ವಾಲೆಟ್ ಫೀಚರ್ ಫೋನ್‌ನಲ್ಲಿದೆ. ಡಿವೈಸ್ ಕುರಿತಾದ ಸಂಪೂರ್ಣ ಮಾಹಿತಿ ಕೆಳಗಿದೆ:

ಮೀಜು ಎಮ್ಎಕ್ಸ್5 ಸ್ಮಾರ್ಟ್‌ಫೋನ್ ಲಾಂಚ್

ಮೀಜು ಎಮ್ಎಕ್ಸ್5 ವಿಶೇಷತೆಗಳು
ಎಮ್ಎಕ್ಸ್5 ಸ್ಮಾರ್ಟ್‌ಫೋನ್ ಮೆಟಲ್ ವಿನ್ಯಾಸದೊಂದಿಗೆ ಬಂದಿದ್ದು 149 ಗ್ರಾಮ್ ತೂಕವನ್ನು ಹೊಂದಿದೆ. ಡಿಸ್‌ಪ್ಲೇ ಬಗ್ಗೆ ಮಾತನಾಡುವಾಗ, ಇದು 5.5 ಇಂಚಿನ ಸೂಪರ್ ಅಮೋಲೆಡ್ ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1080x1920 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ.

ಮೀಜು ಎಮ್ಎಕ್ಸ್5 ಸ್ಮಾರ್ಟ್‌ಫೋನ್ ಲಾಂಚ್

64 ಬಿಟ್ ಮೀಡಿಯಾ ಟೆಕ್ ಓಕ್ಟಾ ಕೋರ್ ಪ್ರೊಸೆಸರ್ ಡಿವೈಸ್‌ನಲ್ಲಿದ್ದು ಪವರ್ ವಿಆರ್ G6200 ಜಿಪಿಯು, ಜೊತೆಗೆ 3ಜಿಬಿ RAM ಫೋನ್‌ನಲ್ಲಿದೆ. ಇನ್ನು ಡಿವೈಸ್ ಮೆಮೊರಿಯ ಕುರಿತು ಹೇಳುವುದಾದರೆ, ಎಮ್ಎಕ್ಸ್5, 16 ಜಿಬಿ ಇನ್‌ಬಿಲ್ಟ್ ಮೆಮೊರಿಯೊಂದಿಗೆ ಬಂದಿದ್ದು, ಎಸ್‌ಡಿ ಕಾರ್ಡ್ ಸ್ಲಾಟ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಮೀಜು ಎಮ್ಎಕ್ಸ್5 ಸ್ಮಾರ್ಟ್‌ಫೋನ್ ಲಾಂಚ್

ಫೋನ್‌ನ ರಿಯರ್ ಕ್ಯಾಮೆರಾ ಸಾಮರ್ಥ್ಯ 20.7 ಎಮ್‌ಪಿಯಾಗಿದ್ದು ಸೋನಿ ಸೆನ್ಸಾರ್‌ನೊಂದಿಗೆ ಬಂದಿದೆ ಮತ್ತು ಇದು 2160ಪಿ ವೀಡಿಯೋ ರೆಕಾರ್ಡಿಂಗ್ ಮಾಡಬಲ್ಲ ವಿಶೇಷತೆಯನ್ನು ಪಡೆದುಕೊಂಡಿದೆ. ಇನ್ನು ಮುಂಭಾಗದಲ್ಲಿರುವ 5 ಎಮ್‌ಪಿ ಕ್ಯಾಮೆರಾ 1080ಪಿ ವೀಡಿಯೋ ರೆಕಾರ್ಡಿಂಗ್ ಅನ್ನು ಮಾಡಬಲ್ಲುದು.

ಮೀಜು ಎಮ್ಎಕ್ಸ್5 ಸ್ಮಾರ್ಟ್‌ಫೋನ್ ಲಾಂಚ್

ಎಮ್ಎಕ್ಸ್5, 4ಜಿ ಎಲ್‌ಟಿಇ ಸಂಪರ್ಕವನ್ನು ಬೆಂಬಲಿಸುವುದರ ಜೊತೆಗೆ, ಬ್ಲ್ಯೂಟೂತ್ 4.0, ವೈಫೈ ಮತ್ತು ಇನ್ನಷ್ಟು ವೈವಿಧ್ಯತೆಗಳನ್ನು ಪಡೆದುಕೊಂಡಿದೆ. ಸಾಫ್ಟ್‌ವೇರ್ ಬಗ್ಗೆ ಹೇಳುವುದಾದರೆ, ಎಮ್‌ಎಕ್ಸ್5 ಫ್ಲೈಮ್ಓಎಸ್ ಚಾಲನೆಯಿರುವ ಆಂಡ್ರಾಯ್ಡ್‌ನೊಂದಿಗೆ ಬಂದಿದೆ. 3150mAh ಬ್ಯಾಟರಿ ಶಕ್ತಿ ಡಿವೈಸ್‌ನಲ್ಲಿದೆ.

Best Mobiles in India

English summary
As promised, the Chinese handset maker Meizu has launched the MX5 smartphone in an event at Beijing, China. This device comes with the mTouch 2.0 technology along with the just announced mPay wallet feature. Here is all about the device.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X