2,850 ಉದ್ಯೋಗಗಳನ್ನು ತೆಗೆದುಹಾಕಲಿರುವ ಮೈಕ್ರೋಸಾಫ್ಟ್‌!

By Suneel
|

ನೋಕಿಯಾ ಸ್ಮಾರ್ಟ್‌ಫೋನ್‌ ಹಾರ್ಡ್‌ವೇರ್‌ ಸಂಬಂಧಿಸಿದಂತೆ ಮಾಡಿದ ಉದ್ಯಮ ಪ್ರಯೋಗಗಳಿಂದ ಮೈಕ್ರೋಸಾಫ್ಟ್‌ $ 7.6 ಶತಕೋಟಿ ನಷ್ಟ ಅನುಭವಿಸಿದೆ. ಈ ಹಾನಿಯಿಂದ ಮೈಕ್ರೋಸಾಫ್ಟ್‌ ಮಹತ್ತರ ನಿರ್ಧಾರವೊಂದನ್ನು ಕೈಗೊಂಡಿದ್ದು 2,850 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಈ ಹಿಂದೆ 1,850 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿತ್ತು.

ತಂತ್ರಜ್ಞಾನ ದೈತ್ಯ ಕಂಪನಿ ಮೈಕ್ರೋಸಾಫ್ಟ್‌ 2017 ರ ಆರ್ಥಿಕ ವರ್ಷದಲ್ಲಿ ಜಾಗತಿಕವಾಗಿ ಒಟ್ಟಾರೆ 4,700 ಉದ್ಯೋಗಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಮೈಕ್ರೋಸಾಫ್ಟ್‌ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳು

ಸ್ಮಾರ್ಟ್‌ಫೋನ್‌ ಬ್ಯುಸಿನೆಸ್‌

ಸ್ಮಾರ್ಟ್‌ಫೋನ್‌ ಬ್ಯುಸಿನೆಸ್‌

ಕಳೆದ ಜೂನ್‌ ತಿಂಗಳಲ್ಲಿ ಮೈಕ್ರೋಸಾಫ್ಟ್‌ 'ಸ್ಮಾರ್ಟ್‌ಫೋನ್‌ ಬ್ಯುಸಿನೆಸ್'‌ನಲ್ಲಿನ 4,700 ಉದ್ಯೋಗಿಗಳನ್ನು ಜಾಗತಿಕವಾಗಿ ತೆಗೆದುಹಾಕುವ ಬಗ್ಗೆ ಹೇಳಿತ್ತು.

ನೋಕಿಯಾ ಪ್ರಯೋಗಗಳು

ನೋಕಿಯಾ ಪ್ರಯೋಗಗಳು

ಕಳೆದ ಮೇ ತಿಂಗಳಲ್ಲಿ ನೋಕಿಯಾ ಪ್ರಯೋಗಗಳನ್ನು ನಿಲ್ಲಿಸುವ ಬಗ್ಗೆ ಸೂಚನೆ ನೀಡಿದ್ದ ಮೈಕ್ರೋಸಾಫ್ಟ್‌ 1,850 ಉದ್ಯೋಗಗಳನ್ನು ಸ್ಥಗಿತಗೊಳಿಸುವ ಬಗ್ಗೆಯೂ ಪ್ರಕಟಣೆ ಹೊರಡಿಸಿತ್ತು. $950 ದಶಲಕ್ಷದಲ್ಲಿ $200 ದಶಲಕ್ಷವನ್ನು ವೇತನಕ್ಕಾಗಿಯೇ ನೀಡುತ್ತಿರುವ ಬಗ್ಗೆ ಹೇಳಿತ್ತು.

ಸತ್ಯ ನಾಡೆಲ್ಲಾ

ಸತ್ಯ ನಾಡೆಲ್ಲಾ

" ಮೌಲ್ಯ ಭದ್ರತೆಯನ್ನು ಒದಗಿಸುವ ವಿಭಿನ್ನ ಫೋನ್‌ ತಯಾರಿ ಉದ್ಯಮದ ಮೇಲೆಯೇ ಹೆಚ್ಚು ಗಮನಹರಿಸಿದ್ದೇವೆ. ಅದಕ್ಕಾಗಿ ನಿರ್ವಹಣೆ ಮತ್ತು ಸಾಮರ್ಥ್ಯದ ಮೌಲ್ಯದ ಮೇಳೆ ಆಧಾರವಾಗಿದ್ದು ಗ್ರಾಹಕರು ಯಾವುದಕ್ಕೆ ಬೆಲೆ ನೀಡುತ್ತಾರೋ ಅದರ ಮೇಲೆ ಕೇಂದ್ರಿಕೃತವಾಗಿದ್ದೇವೆ ಎಂದು ಭಾರತ ಮೂಲದ ಮೈಕ್ರೋಸಾಫ್ಟ್‌ ಸಿಇಓ 'ಸತ್ಯ ನಾಡೆಲ್ಲಾ" ಹೇಳಿದ್ದಾರೆ.

 ಅತ್ಯಾಧುನಿಕ ಡಿವೈಸ್‌

ಅತ್ಯಾಧುನಿಕ ಡಿವೈಸ್‌

ಇನ್ನುಮುಂದೆ ಅತ್ಯಾಧುನಿಕ ಡಿವೈಸ್‌ಗಳನ್ನು ಹೊರತರುವಲ್ಲಿ ಮುಂದುವರೆಯುತ್ತೇವೆ ಮತ್ತು ಎಲ್ಲಾ ಮೊಬೈಲ್‌ ವೇದಿಕೆಗಳಿಗೂ ನಮ್ಮ ಕ್ಲೌಡ್‌ ಸರ್ವೀಸ್‌ ಸಿಗಲಿದೆ ಎಂದು ನಾಡೆಲ್ಲಾ ಅವರು ಹೇಳಿದ್ದಾರೆ.

ನೋಕಿಯಾ ಉದ್ಯೋಗಿಗಳಿಗೆ ಉದ್ಯೋಗವಿಲ್ಲ

ನೋಕಿಯಾ ಉದ್ಯೋಗಿಗಳಿಗೆ ಉದ್ಯೋಗವಿಲ್ಲ

ವರದಿಗಳ ಪ್ರಕಾರ ಮೈಕ್ರೋಸಾಫ್ಟ್‌ ತೆಗೆದುಹಾಕುತ್ತಿರುವ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಹಿಂದೆ ನೋಕಿಯಾದಲ್ಲಿ ಇದ್ದ ಉದ್ಯೋಗಿಗಳಾಗಿದ್ದು, ಮೈಕ್ರೋಸಾಫ್ಟ್‌ನಲ್ಲಿ ಅವರು ದೀರ್ಘಕಾಲ ಉದ್ಯೋಗ ನಿರ್ವಹಿಸಲಾರರು ಎನ್ನಲಾಗಿದೆ.

ಫೋನ್‌ ಮೇಲೆ ಬಂಡವಾಳ

ಫೋನ್‌ ಮೇಲೆ ಬಂಡವಾಳ

ಸುಮಾರು ವರ್ಷದ ಹಿಂದೆ ನಾಡೆಲ್ಲಾ ಅವರು ""ಹೆಚ್ಚು ಪರಿಣಾಮಕಾರಿ ಮತ್ತು ಗಮನ ಫೋನ್ ಬಂಡವಾಳ"ದ ಬ್ಯುಸಿನೆಸ್, ಮೌಲ್ಯದ ಫೋನ್‌ಗಳು ಮತ್ತು ಫ್ಲ್ಯಾಗ್‌ಶಿಪ್‌ ಪ್ರಾಮುಖ್ಯತೆ ಪಡೆಯುವ ಬಗ್ಗೆ ಹೇಳಿದ್ದರು.

ಸ್ಕೇಲಿಂಗ್‌ ಬ್ಯಾಕ್‌

ಸ್ಕೇಲಿಂಗ್‌ ಬ್ಯಾಕ್‌

ಮೈಕ್ರೋಸಾಫ್ಟ್‌ ವಿಂಡೋಸ್ ಮತ್ತು ಡಿವೈಸ್‌ಗಳ ಮುಖ್ಯಸ್ಥರು "ನಾವು ಹಿನ್ನೆಡೆ ಹೊಂದಿದ್ದರು ಸಹ ವಿಫಲವಾಗಿಲ್ಲ" ಎಂದಿದ್ದಾರೆ.

ಸತ್ಯ ನಾಡೆಲ್ಲಾ ಹೇಳಿದ್ದೇನು?

ಸತ್ಯ ನಾಡೆಲ್ಲಾ ಹೇಳಿದ್ದೇನು?

"ಫೋನ್‌ ಯಶಸ್ಸು ಎಂಬುದು ಕಂಪನಿಗಳ ಭದ್ರತೆ ಮತ್ತು ಬದ್ಧತೆ ಮೌಲ್ಯಮಾಪನಕ್ಕೆ, ನಿರ್ವಹಣೆ, ಅನಂತತೆ ಮತ್ತು ಗ್ರಾಹಕರು ಹೆಚ್ಚು ನೀಡುವ ಪ್ರಾಮುಖ್ಯತೆಗೆ ಸೀಮಿತಗೊಳಿಸಲಾಗಿದೆ" ಎಂದು ನಾಡೆಲ್ಲಾ ಅವರು ಹೇಳಿದ್ದಾರೆ.

ಮೈಕ್ರೋಸಾಫ್ಟ್‌ ಲೂಮಿಯಾ ಮತ್ತು ವಿಂಡೋಸ್‌ ಫೋನ್‌

ಮೈಕ್ರೋಸಾಫ್ಟ್‌ ಲೂಮಿಯಾ ಮತ್ತು ವಿಂಡೋಸ್‌ ಫೋನ್‌

ಮೈಕ್ರೋಸಾಫ್ಟ್‌ ಲೂಮಿಯಾ ಮತ್ತು ವಿಂಡೋಸ್‌ ಫೋನ್‌ಗಳ ಮಾರಾಟ ಮತ್ತು ವಿಂಡೋಸ್‌ ಫೋನ್‌ ಮಾರುಕಟ್ಟೆ ಶೇರ್‌ ಕಾರ್ಯತಂತ್ರ ಎರಡು ಸಹ ವಿಫಲವಾದ್ದರಿಂದ ಮೈಕ್ರೋಸಾಫ್ಟ್‌ ಮೊಬೈಲ್‌ ಮರುಸ್ಥಾಪನೆ ಮಾಡುತ್ತಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮೈಕ್ರೋಸಾಫ್ಟ್‌ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳುಮೈಕ್ರೋಸಾಫ್ಟ್‌ ಬಗ್ಗೆ ಯಾರೂ ತಿಳಿಯದ ಅದ್ಭುತ ವಿಷಯಗಳು

ಮೈಕ್ರೋಸಾಫ್ಟ್‌ನಲ್ಲಿ 1.02 ಕೋಟಿ ವರಮಾನ: ವೆಲ್ಡರ್ ಪುತ್ರನ ಸಾಧನೆ ಮೈಕ್ರೋಸಾಫ್ಟ್‌ನಲ್ಲಿ 1.02 ಕೋಟಿ ವರಮಾನ: ವೆಲ್ಡರ್ ಪುತ್ರನ ಸಾಧನೆ

Best Mobiles in India

Read more about:
English summary
Hurt by a failed $7.6 billion Nokia experiment amid growing losses in the smartphone hardware business segment, Microsoft has announced to lay off an additional 2,850 workers to the previously 1,850 jobs it said it would cut.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X