2030 ಕ್ಕೆ ಮಾನವನ ಕೈಯಲ್ಲಿ ಈ ಕ್ರಾಂತಿಕಾರಿ ಟೆಕ್‌ಗಳು

By Suneel
|

ತಂತ್ರಜ್ಞಾನ ಅಭಿವೃದ್ದಿಗೊಂಡಂತೆ ಜನರು ತಮ್ಮ ಜೀವನ ಶೈಲಿಯನ್ನು ಸರಳವಾಗಿ ಬದಲಿಸಿಕೊಳ್ಳುತ್ತಿದ್ದಾರೆ. ಬದಲಾವಣೆ ನಿಧಾನವಾಗಿದೆಯೇ ಅಂದ್ರೆ, ಅದೂ ಸಹ ತುಂಬ ವೇಗವಾಗಿದೆ. ಅದಕ್ಕೆ ಸಾಕ್ಷಿಯಾಗಿ ಇಂದು ಸ್ಮಾರ್ಟ್‌ಫೋನ್‌ ನಲ್ಲಿ ಬಳಸುತ್ತಿರುವ ಅಧಿಕ ಸಂಖ್ಯೆಯ ಅಪ್ಲಿಕೇಶನ್‌ಗಳು ಉದಾಹರಣೆ.

ಓದಿರಿ: ಬಾಹ್ಯಾಕಾಶಕ್ಕೆ ತಲುಪಿದ ಮಾನವರಲ್ಲದ 10 ಗಗನಯಾತ್ರಿಗಳು

ಹಾಗಾದ್ರೆ ಮುಂದೆ ಯಾವ ರೀತಿಯ ಟೆಕ್‌ ಅಭಿವೃದ್ದಿಗಳು ಆಗಬಹುದು ಎಂದು ಸಹ ಹಲವರು ಯೋಚಿಸುತ್ತಾ ಅನುಭವಕ್ಕಾಗಿ ಕಾದು ಕುಳಿತಿರುತ್ತಾರೆ. ನೀರಿಗೆ ಬೇಡಿಕೆ ಜಾಸ್ತಿ, ಮಾಂಸಹಾರಿಗಳಿಗೆ ಮಾಂಸ ಕೊಳ್ಳಲು ಕಷ್ಟ, ಹಳ್ಳಿಗಾಡಿನ ಪ್ರದೇಶಗಳು ಕಡಿಮೆಯಾಗಿ ಎಲ್ಲಾ ಸ್ಮಾರ್ಟ್‌ ಸಿಟಿಗಳಾಗಲು ಹೊರಟಿವೆ. ಹಾಗಾದ್ರೆ ಮುಂದೆ ನಮ್ಮ ಸುತ್ತಮುತ್ತಲ ಟೆಕ್‌ಗಳು ಯಾವುವು ಅವು ಹೇಗಿರುತ್ತವೆ ಎಂಬುದನ್ನು ಈಗಲೇ ಗಿಜ್‌ಬಾಟ್‌ ಲೇಖನದಲ್ಲಿ ಓದಿ ತಿಳಿಯಿರಿ. ಈ ಲೇಖನದಲ್ಲಿ ನ ಟೆಕ್‌ 2030 ವೇಳೆಗೆ ಸಿಗಲಿವೆ.

ಜನರು ಕುಡಿಯಬಹುದಾದ ಸಮುದ್ರ ನೀರು

ಜನರು ಕುಡಿಯಬಹುದಾದ ಸಮುದ್ರ ನೀರು

2030 ವೇಳೆಗೆ ಉಪ್ಪಿನ ಅಂಶವನ್ನು ತೆಗೆಯುವ ಕೈಗಾರಿಕೆಗಳ ಹೆಚ್ಚಲಿವೆ. ಸೌರಶಕ್ತಿ ಬಳಕೆಯ ಅಭಿವೃದ್ದಿಯಿಂದ ವಿದ್ಯುಜ್ಜನಕ ಶಕ್ತಿಯಿಂದ ಸಮುದ್ರದ ನೀರಿನಿಂದ ಉಪ್ಪಿನ ಅಂಶವನ್ನು ತೆಗೆದು ಕುಡಿಯುವ ನೀರನ್ನು ಪಡೆಯಬಹುದಾಗಿದೆ.

ಮಿಲಿಟರಿ ಅಟೋನಾಮಸ್‌ ರೋಬೋಟ್ಸ್

ಮಿಲಿಟರಿ ಅಟೋನಾಮಸ್‌ ರೋಬೋಟ್ಸ್

ಈಗಾಗಲೇ ಮಿಟಿಟರಿಗಾಗಿ ಹಲವು ವಿವಿಧ ವೆಪನ್‌ಗಳನ್ನು ಅಭಿವೃದ್ದಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ರೋಬೋಟ್‌ ಅನ್ನು ಮಿಲಿಟಿರಿಗಾಗಿ ಬಳಸಲಾಗುತ್ತದೆ. ರೋಬೋಟ್‌ಗೆ ಮಾನವನ ಯಾವುದೇ ಇನ್‌ಪುಟ್‌ ಮಾಹಿತಿ ಇಲ್ಲದಂತೆ ಕಾನೂನು ಬದ್ದವಾಗಿ ಅಭಿವೃದ್ದಿಗೊಳಿಸಲಾಗುತ್ತಿದೆ.

ಲ್ಯಾಬ್‌ನಲ್ಲಿ ಅಭಿವೃದ್ದಿಗೊಂಡ ಮಾಂಸ

ಲ್ಯಾಬ್‌ನಲ್ಲಿ ಅಭಿವೃದ್ದಿಗೊಂಡ ಮಾಂಸ

ಬಯೋಟೆಕ್ನಾಲಜಿ ಅಭಿವೃದ್ದಿಯಿಂದ ಇಂದು ಮಾಂಸವನ್ನು ಲ್ಯಾಬ್‌ನಲ್ಲಿ ಉತ್ಪಾದಿಸಿ ಸಾರ್ವಜನಿಕವಾಗಿ ತರಲು ಉದ್ದೇಶಿಸಲಾಗಿದೆ. ಈ ರೀತಿಯ ಒಂದು ಯೋಜನೆಗೆ ಗೂಗಲ್‌ ಸಹ ತನ್ನ ಸಹಕಾರ ನೀಡಿದೆ.

ಅಂತರ ಗ್ರಹಗಳ ನಡುವೆ ಇಂಟರ್ನೆಟ್

ಅಂತರ ಗ್ರಹಗಳ ನಡುವೆ ಇಂಟರ್ನೆಟ್

ಮುದೊಂದು ದಿನ ಅನ್ಯಗ್ರಹಗಳಿಗೆ ಹೋದಲ್ಲಿ ಮಾಹಿತಿ ಪ್ರಸಾರಕ್ಕಾಗಿ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳು ಅಂತರ ಗ್ರಹಗಳ ನಡುವೆ ಇಂಟರ್ನೆಟ್‌ ಸೌಲಭ್ಯ ಒದಗಿಸುವ ಯೋಜನೆಯನ್ನು ರೂಪಿಸುತ್ತವೆ. ಇದು ಒಂದು ರೀತಿಯಲ್ಲಿ ಹೊಸ ಅರ್ಜಿಯಾಗಿದೆ ಹಾಗೂ ಅಗತ್ಯವೂ ಆಗಬಹುದು.

Anti-Aging Intervention

Anti-Aging Intervention

ಟೆಕ್‌ ಬೆಳವಣಿಗೆಯಲ್ಲಿ ಮನುಷ್ಯರ ವಯಸ್ಸಿನ ಜೊತೆಗೆ ಸೌಂದರ್ಯ ಕಡಿಮೆ ಆಗುವುದನ್ನು ತಡೆಯಲು ಮುಂದೊಂದು ದಿನ ಕಾಸ್ಮೆಟಿಕ್‌ಗಳು ಮಧ್ಯ ಪ್ರವೇಶಿಸುವುದರಲ್ಲಿ ಸಂಶಯವಿಲ್ಲ.

ವೈಯಕ್ತಿಕ ಫ್ಯಾಬ್ರಿಕೇಟರ್ಸ್

ವೈಯಕ್ತಿಕ ಫ್ಯಾಬ್ರಿಕೇಟರ್ಸ್

ಈಗಾಗಲೇ 3D ಪ್ರಿಟಂರ್‌ಗಳು ಕಾಲಿರಿಸಿದ್ದು , ಪ್ರತಿ ಮೆನೆಗಳಲ್ಲೂ ತಮಗೆ ಬೇಕಾದ ವಸ್ತುಗಳನ್ನು ತಾವೆ ತಯಾರಿಸಿಕೊಳ್ಳುವ ಸಂದರ್ಭ ಬರಲಿದೆ.

 ಕೃತಕ ಬುದ್ಧಿವಂತ ವಯಕ್ತಿಕ ಸಹಾಯಕರು

ಕೃತಕ ಬುದ್ಧಿವಂತ ವಯಕ್ತಿಕ ಸಹಾಯಕರು

ಇಂದು ಮೈಕ್ರೋಸಾಫ್ಟ್‌ ಮತ್ತು ಆಪಲ್‌ಗಳ ಟೆಕ್‌ ಬುದ್ಧಿವಂತಿಕೆ ಎಲ್ಲರನ್ನು ಮೆಚ್ಚು ವಂತದಾಗಿದ್ದು, 2030 ರೊಳಗೆ ನಮ್ಮ ಅವಶ್ಯಕತೆಗಳಿಗೆ ತಕ್ಕಂತೆ ಸಂವಹಿಸುವ ವಯಕ್ತಿಕ ಸಹಾಯಕರನ್ನು ಹೊಂದಬಹುದಾಗಿದೆ.

ಮೆಗಾಸ್ಕೇಲ್‌ ಭೂಇಂಜಿನಿಯರಿಂಗ್‌ ಯೋಜನೆ

ಮೆಗಾಸ್ಕೇಲ್‌ ಭೂಇಂಜಿನಿಯರಿಂಗ್‌ ಯೋಜನೆ

ತಾಪಮಾನ, ಸಮುದ್ರ ನೀರು ಕಡಿಮೆಯಾಗುತ್ತಿರುವುದು, ಹಿಮ ಪರ್ವತಗಳ ಕರಗುವಿಕೆಯಿಂದ ಪ್ರಪಂಚದ ನಕಾರಾತ್ಮಕ ಬದಲಾವಣೆಯನ್ನು ನೋಡುವುದಾದರೆ, ಭವಿಷ್ಯದಲ್ಲಿ ಕೃತಕ ಮರಗಳು, ಸಾಗರ ನಿರ್ಮಾಣ, ಹವಾ ನಿಯಂತ್ರಣವನ್ನು ಹೊಂದಬೇಕಾಗುತ್ತದೆ.

ಎಂದೂ ನೋಡದ ಕಂಪ್ಯೂಟರ್‌ಗಳು

ಎಂದೂ ನೋಡದ ಕಂಪ್ಯೂಟರ್‌ಗಳು

ಇಂದು ಗ್ಯಾಜೆಟ್ಸ್‌ಗಳು ದಿನದಿಂದ ದಿನಕ್ಕೆ ಚಿಕ್ಕ ಗಾತ್ರ ಪಡೆಯುತ್ತಿವೆ. ಟೆಕ್‌ ಬೆಳವಣಿಗೆ ಮುಂದೆ ಬಟ್ಟೆಯಲ್ಲಿ ಕಂಪ್ಯೂಟರ್‌ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಸಂಶಯವಿಲ್ಲ.

ವರ್ಚುವಲ್‌ ಪ್ರಾಣಿಗಳು

ವರ್ಚುವಲ್‌ ಪ್ರಾಣಿಗಳು

ಟೆಕ್ ಅಭಿವೃದ್ದಿಯಿಂದ ಡಿಜಿಟಲ್‌ ವರ್ಸನ್‌ ಹ್ಯೂಮನ್‌ ಮೈಂಡಿನ ಇರುವೆಗಳು. ಜೇನುಹುಳುಗಳು ಹಾಗೂ ಇಲಿಗಳನ್ನು ಕೃತಕವಾಗಿ ಪಡೆಯಲಾಗುತ್ತದೆ.

Best Mobiles in India

English summary
With the pace of technological development increasing at an exponential rate, life could drastically change in a shorter time than expected. In a few years time, some of the technologies listed below will become commonplace even though some of us do not even know that the technology exists.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X