ಜಿಯೋ ದರ ಸಮರ ಮುಂದುವರೆಸಲು ಮತ್ತೆ 4.4 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಅಂಬಾನಿ

ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ 4G ಸೇವೆಯನ್ನು ಆರಂಭಿಸಲು ಸುಮಾರು 25 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಮುಕೇಶ್

|

ಭಾರತದ ಅತೀ ಶ್ರೀಮಂತ ಎನ್ನುವ ಖ್ಯಾತಿಗೆ ಪಾತ್ರರಾಗಿರುವ ಮುಕೇಶ್ ಅಂಬಾನಿ ಒಡೆತನದ ಜಿಯೋ ಮಾರುಕಟ್ಟೆಯಲ್ಲಿ ಸಖತ್ ಸುದ್ದಿಯನ್ನು ಮಾಡಿದ್ದು, ದರ ಸಮರದ ಮೂಲಕ ಇತರೆ ಕಂಪನಿಗಳಿಗೆ ನಡುಕ ಹುಟ್ಟಿಸಿದ್ದು, ಇದೇ ಹಾದಿಯಲ್ಲಿ ಸಾಗಲು ಮತ್ತೆ ಜಿಯೋ ಮೇಲೆ ಸುಮಾರು 4.4 ಬಿಲಿಯನ್ ಡಾಲರ್ ಹೂಡಿಕೆಗೆ ಮುಕೇಶ್ ಅಂಬಾನಿ ಮುಂದಾಗಿದ್ದಾರೆ.

ಜಿಯೋ ದರ ಸಮರ ಮುಂದುವರೆಸಲು ಮತ್ತೆ 4.4 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಅಂಬಾನಿ

ಓದಿರಿ..: ಪ್ಲಾಷ್ ಸೇಲ್‌ನಲ್ಲಿ ರೆಡ್‌ಮಿ ನೋಟ್ 4 ಖರೀದಿಸುವುದು ಹೇಗೆ..? ಇಲ್ಲಿದೆ ಸಿಂಪಲ್ ಟ್ರಿಕ್ಸ್.....!

ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ 4G ಸೇವೆಯನ್ನು ಆರಂಭಿಸಲು ಸುಮಾರು 25 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದ ಮುಕೇಶ್ ಈ ಬಾರಿ ತಮ್ಮ ಮಾಲೀಕತ್ವದ ಜಿಯೋ ಸೇವೆಯನ್ನು ಸುಧಾರಿಸುವ ಸಲುವಾಗಿ 4.4 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಚಿಂತನೆ ನಡೆಸಿದ್ದಾರೆ.

ಜಿಯೋ ಸೇವೆ ಆರಂಭಿಸಿ 4 ತಿಂಗಳು ಕಳೆಯುತ್ತಿದ್ದು, ಈ ಹಿನ್ನಲೆಯಲ್ಲಿ ಪ್ರತಿ ನಿತ್ಯ ಸುಮಾರು 6 ಲಕ್ಷ ಮಂದಿ ಹೊಸ ಬಳಕೆದಾರರು ಜಿಯೋ ಕುಟುಂಬವನ್ನು ಸೇರುತ್ತಿದ್ದಾರೆ. ಇದುವರೆಗೂ ಇಡೀ ದೇಶದಾದ್ಯಂತ ಸುಮಾರು 72.4 ಮಿಲಿಯನ್ ಮಂದಿ ಜಿಯೋ ಗ್ರಾಹಕರಾಗಿದ್ದು, ಅಲ್ಲದೇ ಈ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ.

ಜಿಯೋ ದರ ಸಮರ ಮುಂದುವರೆಸಲು ಮತ್ತೆ 4.4 ಬಿಲಿಯನ್ ಡಾಲರ್ ಹೂಡಿಕೆಗೆ ಮುಂದಾದ ಅಂಬಾನಿ

ಓದಿರಿ..: ಡೌನ್‌ಲೋಡ್‌ ಮಾಡದೆ ಟೊರೇಂಟ್ ಮೂವಿ ನೋಡುವುದು ಹೇಗೆ..?

ಈ ಹಿನ್ನಲೆಯಲ್ಲಿ ಬೆಳೆಯುತ್ತಿರುವ ಜಿಯೋ ಗೆ ಮತ್ತಷ್ಟು ಶಕ್ತಿ ತುಂಬುವ ಸಲುವಾಗಿ 4.4 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತಿದ್ದು. ಪ್ರಸ್ತುತ ಗ್ರಾಹಕರು ಎದುರಿಸುತ್ತಿರುವ ನೆಟ್‌ವರ್ಕ್ ಸಮಸ್ಯೆಯನ್ನು ನಿವಾರಿಸಿ, ಮತ್ತಷ್ಟು ವೇಗ ನೆಟ್‌ವರ್ಕ್ ಸ್ಥಾಪನೆ ಮಾಡುವುದು ಈ ಹೂಡಿಕೆಯ ಉದ್ದೇಶವಾಗಿದೆ.

ಮುಂದಿನ ವರ್ಷಗಳಲ್ಲಿ ಭಾರತೀಯ ಟೆಲಿಕಾಂ ವಲಯದಲ್ಲಿ ಜಿಯೋ ಹೊಸದೊಂದು ಮೈಲಿಗಲ್ಲು ಸ್ಥಾಪಿಸಲಿದೆ ಎಂದರೆ ತಪ್ಪಾಗುವುದಿಲ್ಲ. ಹಾಗಾಗಿ ಮುಕೇಶ್ ಅಂಬಾನಿ ದೂರ ಆಲೋಚನೆಯಿಂದ ಹೂಡಿಕೆ ಮಾಡುತ್ತಿದ್ದು, ಉತ್ತಮ ರಿಟರ್ನ್ ನಿರೀಕ್ಷೆಯಲ್ಲಿದ್ದಾರೆ.

Best Mobiles in India

Read more about:
English summary
India’s richest man isn’t done yet. After plowing $25 billion into starting a national fourth-generation mobile network. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X