ಸ್ವಯಂ ಚಾರ್ಜಿಂಗ್ ಮೊಬೈಲ್ ಕಂಡುಹಿಡಿದ ಮೈಸೂರು ಕಂಪೆನಿ!!

ಕೇವಲ 18 ತಿಂಗಳಲ್ಲಿಯೇ 25 ಪೇಟೆಂಟ್ ಪಡೆದಿರುವ ಮೈಸೂರು ಮೂಲದ ಒಂದು ಸ್ಟಾರ್ಟ್ಅಪ್ ಸಂಸ್ಥೆ ದೇಶದಲ್ಲಿಯೇ ಕೀರ್ತಿಗೆ ಭಾಜನವಾಗಿದೆ.!!

|

ಸ್ವಯಂ ಚಾರ್ಜಿಂಗ್ ವ್ಯವಸ್ಥೆಯ ಮೊಬೈಲ್ ಫೋನ್ ಕಂಡುಹಿಡಿಯುವುದಲ್ಲದೇ, ಕಂಪೆನಿ ಆರಂಭವಾದ ಕೇವಲ 18 ತಿಂಗಳಲ್ಲಿಯೇ 25 ಪೇಟೆಂಟ್ ಪಡೆದಿರುವ ಮೈಸೂರು ಮೂಲದ ಒಂದು ಸ್ಟಾರ್ಟ್ಅಪ್ ಸಂಸ್ಥೆ ದೇಶದಲ್ಲಿಯೇ ಕೀರ್ತಿಗೆ ಭಾಜನವಾಗಿದೆ.!!

ಹೌದು, ಮೈಸೂರಿನಲ್ಲಿಯೇ ಹುಟ್ಟಿರುವ, ಗೌತಮಿ ಎಂಬ ಮಹಿಳೆಯು ತಮ್ಮ ಹಲವು ಸ್ನೇಹಿತರೊಂದಿಗೆ ಸೇರಿ ಸ್ಥಾಪಿಸಿದ 'ಅಲ್ಲಿನೋವ್ ರೀಸರ್ಚ್ ಅಂಡ್ ಡೆವಲಪ್ ಮೆಂಟ್' ಎಂಬ ಸಂಸ್ಥೆ ಇಂತಹ ಮಹತ್ತರ ಸಾಧನೆ ಮಾಡಿದ್ದು, ಕೇವಲ 18 ತಿಂಗಳಲ್ಲಿ ಬರೊಬ್ಬರಿ 25 ಪೇಟೆಂಟ್ ಪಡೆದು ಸಾಧನೆ ಮಾಡಿದೆ.!!

ಸ್ವಯಂ ಚಾರ್ಜಿಂಗ್ ಮೊಬೈಲ್ ಕಂಡುಹಿಡಿದ ಮೈಸೂರು ಕಂಪೆನಿ!!

ಹಲವು ವಿಶಿಷ್ಟ ವಸ್ತುಗಳಿಗೆ ಸಂಸ್ಥೆ ಪೇಟೆಂಟ್ ಪಡೆದಿದ್ದು, ಸ್ವಯಂ ಚಾರ್ಜಿಂಗ್ ವ್ಯವಸ್ಥೆಯ ಮೊಬೈಲ್ ಫೋನ್, ಸ್ವಯಂ ಬಿಸಿಯಾಗುವ ಕಾಫಿ ಮಗ್, ನೀರು ಶುದ್ದೀಕರಣದ ಯಂತ್ರ, ಹೆಲ್ಮೆಟ್ ಲಾಕ್ ಸೇರಿದಂತೆ ಹಲವು ವಿನೂತನ ವಸ್ತುಗಳನ್ನು ಸಂಸ್ಥೆ ತಯಾರಿಸಿ ಪೇಟೆಂಟ್ ಮಾಡಿಸಿಕೊಂಡಿದೆ.

ಗ್ರಾಹಕ ಸ್ನೇಹಿ ಮತ್ತು ಅಗ್ಗದ ವಿನೂತನ ವಸ್ತುಗಳನ್ನು ಸಂಶೋಧಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ಹೆಳಿರುವ ಸಂಸ್ಥೆಯ ಸಂಸ್ಥಾಪಕಿ ಗೌತಮಿ ಅವರು . ಮತ್ತಷ್ಟು ವಿನೂತನ ವಸ್ತುಗಳಿಗೆ ಸಂಸ್ಥೆ ಪೇಟೆಂಟ್ ಪಡೆಯಲು ನಿರ್ಧರಿಸಿದ್ದು, ಆ ಮೂಲಕ ಸಂಸ್ಥೆಯ ಪೇಟೆಂಟ್‌ಗಳ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.!!

ಸ್ವಯಂ ಚಾರ್ಜಿಂಗ್ ಮೊಬೈಲ್ ಕಂಡುಹಿಡಿದ ಮೈಸೂರು ಕಂಪೆನಿ!!

ಅಲ್ಲಿನೋವ್ ರೀಸರ್ಚ್ ಅಂಡ್ ಡೆವಲಪ್ ಮೆಂಟ್ ಸಂಸ್ಥೆಯಲ್ಲಿ 200ಕ್ಕೂ ಅಧಿಕ ಪ್ರಮಾಣೀಕೃತ ಸಂಶೋಧಕರಿದ್ದು, ಬಹುತೇಕ ಹೆಚ್ಚು ಜನರು ದೇಶ ವಿದೇಶಗಳ ಪ್ರತಿಷ್ಟಿತ ಸಂಸ್ಥೆಗಳಿಂದ ಕಲಿತವರಾಗಿದ್ದಾರೆ. ಇನ್ನು ಸಂಸ್ಥೆ ಇತ್ತೀಚೆಗಷ್ಟೇ 2017ರಲ್ಲಿ ದೆಹಲಿಯಲ್ಲಿ ಈ ಸಂಸ್ಥೆ ರಾಷ್ಟ್ರೀಯ ಬೌದ್ಧಿಕ ಆಸ್ತಿ ಪ್ರಶಸ್ತಿ ಪಡೆದಿದೆ.!!

Best Mobiles in India

English summary
a start-up founded by a few youngsters from Mysuru.to know more visitt o kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X