ತಂತ್ರಜ್ಞಾನ ಗುರುವಾಗಿ ನರೇಂದ್ರ ಮೋದಿ

By Shwetha
|

ತಂತ್ರಜ್ಞಾನ ಜಗತ್ತಿನಲ್ಲಿ ನೀವು ಪ್ರತೀ ದಿನವೂ ಅದ್ಭುತಗಳನ್ನು ವಿಶೇಷತೆಗಳನ್ನು ನೋಡಬಹುದಾಗಿದೆ. ಇಲ್ಲಿ ನಡೆಯುವ ಪ್ರಗತಿಯು ಸಂಪೂರ್ಣ ದೇಶದ ಮೇಲೆ ಬದಲಾವಣೆಯನ್ನು ಪರಿಣಾಮವನ್ನು ಉಂಟುಮಾಡುತ್ತದೆ. ತಂತ್ರಜ್ಞಾನದ ಮೇಲೆ ಆಸಕ್ತಿ ಇದ್ದಲ್ಲಿ ಇಲ್ಲಿ ಮಾಡುವಂತಹ ಬದಲಾವಣೆಗಳು ಪರಿಣಾಮಕಾರಿಯಾಗಿರುತ್ತವೆ. ನಾವು ಎಷ್ಟೆಷ್ಟೋ ಹಳೆಯ ಕಟ್ಟುಪಾಡುಗಳನ್ನು ಟೆಕ್ ಕ್ಷೇತ್ರದಲ್ಲಿ ಅನುಸರಿಸುತ್ತಿದ್ದೆವು ಆದರೀಗ ಇದೆಲ್ಲವೂ ಮಾರ್ಪಾಡನ್ನು ಪಡೆದುಕೊಂಡಿದೆ. ನಿಜಕ್ಕೂ ಈ ಎಲ್ಲಾ ಬದಲಾವಣೆಗಳು ಒಂದು ಕ್ರಾಂತಿ ಎಂದೇ ಹೇಳಬಹುದು.

ಇನ್ನು ಅಧಿಕಾರದ ಚುಕ್ಕಾಣಿಯನ್ನು ಹಿಡಿದುಕೊಂಡ ಮಹಾನ್ ವ್ಯಕ್ತಿಗಳೂ ಕೂಡ ಟೆಕ್ ಕ್ಷೇತ್ರದಲ್ಲಿ ಅದ್ಭುತ ಬದಲಾವಣೆಗಳನ್ನು ತರುವ ಪ್ರಯತ್ನದಲ್ಲಿ ನಿಷ್ಣಾತರಾಗಿದ್ದಾರೆ ಎಂಬುದಕ್ಕೆ ಮುಖ್ಯ ಸಾಕ್ಷಿಯಾಗಿದ್ದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ದೇಶವನ್ನು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದಕ್ಕೆ ತರಬೇಕೆಂಬ ಅವರ ಇರಾದೆ ನಿಜಕ್ಕೂ ಅದ್ಭುತವಾಗಿ ಪರಿಣಾಮಕಾರಿಯಾಗಿದ್ದು ಜನರು ಕೂಡ ಈ ಕ್ಷೇತ್ರದಲ್ಲಿ ಅನುಭವವನ್ನು ಪಡೆಯಬೇಕೆಂಬುದು ಅವರ ಇರಾದೆಯಾಗಿದೆ.

ಅದ್ಭುತ ಟೆಕ್ ಗುರು ನರೇಂದ್ರ ಮೋದಿ

ತಂತ್ರಜ್ಞಾನದ ಬಗ್ಗೆ ಸಾಕಷ್ಟು ನಿಪುಣ ಮತ್ತು ನುರಿತವಾಗಿರುವ ಮೋದಿಯವರು ತಮ್ಮೆಲ್ಲಾ ಪ್ರಗತಿ ಪರ ವಿಚಾರಗಳನ್ನು ಜನತೆಯ ಮುಂದಿಡುವ ಉತ್ಸುಕತೆಯನ್ನು ಯಾವಾಗಲೂ ತೋರಿಸುತ್ತಾರೆ. ಅವರು ತಂತ್ರಜ್ಞಾನದ ಕುರಿತು ಮಾಡುವ ಭಾಷಣಗಳು ಮತ್ತು ಭವಿಷ್ಯತ್ ಯೋಜನೆಗಳು ಈ ಅಂಶವನ್ನು ಚೆನ್ನಾಗಿ ತೋರಿಸುತ್ತದೆ. ತಮ್ಮ ಮುಂದಿನ ಯೋಜನೆಯಾದ ಮೇಕ್ ಇನ್ ಇಂಡಿಯಾದ ಬಗ್ಗೆ ಹೆಚ್ಚು ಉತ್ಸುಕರಾಗಿರುವ ಮೋದಿಯವರು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಛಲವನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದಾರೆ. ದೇಶವನ್ನು ಇತರ ಅತ್ಯುತ್ತಮ ದೇಶಗಳೊಂದಿಗೆ ಪೈಪೋಟಿಗಿಳಿಸಿ ದೇಶವನ್ನು ಬಲಯುತಗೊಳಿಸುವ ಅವರ ಇರಾದೆ ನಿಜಕ್ಕೂ ಮೆಚ್ಚುವಂತಹದ್ದೇ!

ಅವರ ಮೊದಲ ಯೋಜನೆಯಾದ ಹಳ್ಳಿಗಳಿಗೂ ಅಂತರ್ಜಾಲ ಸಂಪರ್ಕವನ್ನು ಒದಗಿಸಿಕೊಡುವುದು ಯೂನಿಯನ್ ಕ್ಯಾಬಿನೇಟ್‌ನ ಅನುಮೋದನೆಯನ್ನು ಸ್ವೀಕರಿಸಿದೆ. ಇದು ನಿಜಕ್ಕೂ ಅಂತರ್ಜಾಲ ವ್ಯವಸ್ಥೆಯಲ್ಲಿ ಒಂದು ಕ್ರಾಂತಿಯನ್ನು ಉಂಟುಮಾಡುವಂತಿದ್ದು ಸ್ಮರಣೀಯ ಕಾರ್ಯವಾಗಿ ಇತಿಹಾಸದಲ್ಲಿ ಒಂದು ಗುರುತರ ಹೆಜ್ಜೆಯನ್ನು ಮೂಡಿಸುತ್ತದೆ. ಇದು ಕೇವಲ ಅಂತರ್ಜಾಲ ವ್ಯವಸ್ಥೆಯನ್ನು ಮಾತ್ರ ಒದಗಿಸದೇ ಸರಕಾರದ ಬಹಳಷ್ಟು ಯೋಜನೆಗಳ ಬಗ್ಗೆ ಜನರಲ್ಲಿ ಅರಿವನ್ನು ಉಂಟುಮಾಡಿಸುತ್ತದೆ ಮತ್ತು ಅವರಿಗೆ ಸೇವೆಯನ್ನು ಕೂಡ ಒದಗಿಸುತ್ತದೆ.

ಈ ಡಿಜಿಟಲ್ ಇಂಡಿಯಾ ಸೇವೆಯನ್ನು ಜೂನ್ 2016 ರ ಒಳಗಾಗಿ ಸಂಪೂರ್ಣಗೊಳಿಸುವ ಜವಬ್ದಾರಿಯನ್ನು ಟೆಲಿಕಮ್ಯೂನಿಕೇಶನ್ ವಿಭಾಗವು ತೆಗೆದುಕೊಂಡಿದೆ. ಆಧಾರ್ ಕಾರ್ಡ್‌ ಸಂಖ್ಯೆ ಮತ್ತು ಮೊಬೈಲ್ ಬಳಕೆದಾರರ ಸಿಮ್ ಕಾರ್ಡ್ ಸಂಖ್ಯೆಗಳನ್ನು ಈ ವಿಭಾಗವು ಸಂಪರ್ಕಪಡಿಸುತ್ತಿದೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಇದು ಒದಗಿಸುವ ವೈಫೈ ಸೇವೆ ತಲುಪುವಂತಹ ವ್ಯವಸ್ಥೆಯನ್ನು ಈ ವಿಭಾಗವು ಮಾಡುತ್ತಿದೆ.

Best Mobiles in India

English summary
This article tells about Narendra Modi the new tech Guru of India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X