ಬೆರಳಿನಲ್ಲೇ ಜಗವನ್ನಾಳಿ

By Shwetha
|

ಹೌದು ಈ ವಿಚಾರ ಅದ್ಭುತವಾಗಿದೆ ಅಲ್ಲವೇ? ಬೆರಳಲ್ಲೇ ಜಗವನ್ನಾಳುವ ಕಲೆ ನಮಗೆ ಸಿದ್ಧಿಸಿತೆಂದರೆ ನಮ್ಮನ್ನು ಹಿಡಿಯಲು ಯಾರಿಗೂ ಸಾಧ್ಯವಾಗಲಿಕ್ಕಿಲ್ಲ. ಆದರೆ ನಿಮ್ಮ ಡಿವೈಸ್ ಅನ್ನು ನಿಮ್ಮ ನಿಯಂತ್ರಣದಲ್ಲಿಡುವ ಅದ್ಭುತ ಸಾಮರ್ಥ್ಯ ನಿಮಗೆ ಒದಗಿ ಬರಲಿದೆ.

ಮೌಂಟೇನ್ ವ್ಯೂನ ಇಂಜಿನಿಯರುಗಳು ಈ ಮಹಾನ್ ಸಾಧನೆಯ ರುವಾರಿಯಾಗಿದ್ದಾರೆ. ಡಿವೈಸ್ ಅನ್ನು ನಿಯಂತ್ರಣದಲ್ಲಿಡುವ ಕಲೆಗಾರಿಕೆಯನ್ನು ಬೆರಳಿನುಂಗುರದ ಮೂಲಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೇಗೆ ಕಂಪ್ಯೂಟರ್‌ನ ಅವತರಣಿಕೆಯಾದ ಡೆಸ್ಕ್‌ಟಾಪ್ ನಮ್ಮ ಮೊಬೈಲ್‌ಗಳಿಗೆ ವರ್ಗಾವಣೆಯಾಗಿದೆಯೋ ಅಂತೆಯೇ ಈ ನಾಡ್ ರಿಂಗ್ ನಿಮ್ಮ ಬೆರಳಿನಲ್ಲೇ ಮೊಬೈಲನ್ನು ಹಾಗೂ ಕಂಪ್ಯೂಟರ್‌ನ್ನು ಕುಣಿಸಲಿದೆ.

ಬೆರಳಿನಲ್ಲೇ ಜಗವನ್ನಾಳಿ

ನಾಡ್‌ ರಿಂಗ್‌ನಲ್ಲಿ ಬ್ಲೂಟೂತ್ ಸಕ್ರಿಯಗೊಂಡಿರುವ ಸನ್ನೆಗಳನ್ನು ನಿಯಂತ್ರಿಸುವ ಚತುರತೆ ಇದ್ದು ಬರಿಯ ನಿಮ್ಮ ಬೆರಳಿನ ಸ್ವಾಭಾವಿಕ ಚಲನೆಗಳನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ಗೆ ಸಂಪರ್ಕ ಹೊಂದಿದಂತೆ ಇದು ಹೆಚ್ಚಿನ ಸಂಖ್ಯೆಯ ಇನ್‌ಪುಟ್ ಮತ್ತು ನಿಯಂತ್ರಕ ಸಾಧನೆಗಳನ್ನು ಸಾಧಿಸುತ್ತದೆ.

ನಿಮ್ಮ ಸ್ಮಾರ್ಟ್‌ಫೋನ್‌ನ ಸಾಮರ್ಥ್ಯಗಳನ್ನು ಹೆಚ್ಚಿಸುವ ಸಲುವಾಗಿ ಇತರ ಸ್ಮಾರ್ಟ್‌ ಸಾಧನಗಳಿಗೂ ಈ ಉಂಗುರವನ್ನು ಸಂಪರ್ಕಪಡಿಸಬಹುದು ಅಂದರೆ ಸ್ಮಾರ್ಟ್‌ ಟಿವಿ ಸಾಧನಗಳು ಹಾಗೂ ಇತರ ಅಂರ್ಜಾಲ - ಸಂಪರ್ಕ ಹೊಂದಿದ ಸಾಧನಗಳಾದ ನೆಸ್ಟ್‌ಗೆ ಕನೆಕ್ಟ್ ಮಾಡಬಹುದು. ಒಂದು ವೇಳೆ ನಿಮ್ಮ ಫೋನ್ ಬ್ಲೂಟೂತ್ ಸಾಮರ್ಥ್ಯವನ್ನು ಹೊಂದಿಲ್ಲದಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಉಂಗುರವನ್ನು ಸಂಪರ್ಕಪಡಿಸಬಹುದು ಇದು ವೈಫೈ ಮೂಲಕ ಸಾಧನಕ್ಕೆ ಸಂಪರ್ಕಪಡಿಸುತ್ತದೆ.

ಇದರ ಬ್ಯಾಟರಿ ಬೆಂಬಲ ಕೂಡ ಒಂದು ದಿನಕ್ಕೆ ಸೀಮಿತವಾಗಿದ್ದು ಅದರಲ್ಲಿರುವ ಹೋಲ್ಡಿಂಗ್ ಕೇಸ್ ಮೂಲಕ ಇದನ್ನು ರೀಚಾರ್ಜ್ ಮಾಡಬಹುದು. ನಿಮ್ಮ ಅಂಗೈಗೆ ಮುಂಭಾಗ ಬರುವಂತೆ ಚಿತ್ರದಲ್ಲಿ ತೋರಿಸಿರುವಂತೆ ನೀವು ಈ ಉಂಗುರವನ್ನು ಧರಿಸಬೇಕು. ಎರಡೂ ಬದಿಗಳಲ್ಲಿರುವ ಸಣ್ಣ ಬಟನ್‌ಗಳು ಹೆಚ್ಚಿನ ಸಂಖ್ಯೆಯ ಕಾರ್ಯಗಳನ್ನು ನಡೆಸುತ್ತದೆ. ಐಓಎಸ್ ಹಾಗೂ ಆಂಡ್ರಾಯ್ಡ್‌ ಮೂಲಕ ಈ ಉಂಗುರದ ಕಾರ್ಯಗಳನ್ನು ನಿಯಂತ್ರಿಸಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X