ಸ್ಮಾರ್ಟ್‌ಫೋನ್‌ನಿಂದ ಕ್ಯಾನ್ಸರ್; ಅಧ್ಯಯನಗಳಿಂದ ಸಾಬೀತು

By Shwetha
|

ನಿಮ್ಮ ದಿನನಿತ್ಯದ ಜೀವನದಲ್ಲಿ ಸ್ಮಾರ್ಟ್‌ಫೋನ್ ಬಳಕೆಯನ್ನು ಮಾಡದವರು ಯಾರಿದ್ದಾರೆ ಹೇಳಿ? ಅವಶ್ಯ ಕೆಲಸಗಳಿಗೆ ಫೋನ್ ಅನ್ನು ಬಳಸುವುದು ಇಂದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಎಸ್‌ಎಮ್‌ಎಸ್, ವಾಟ್ಸಾಪ್, ಫೇಸ್‌ಬುಕ್ ಬಳಕೆ ಹೀಗೆ ಹತ್ತು ಹಲವು ಕಾರ್ಯಗಳಿಗೆ ಇಂದು ಸ್ಮಾರ್ಟ್‌ಫೋನ್ ಪ್ರಯೋಜನಕಾರಿ ಎಂದೆನಿಸಿದೆ. ಆದರೆ ನೀವು ಬಳಸುವ ಫೋನ್ ಎಷ್ಟು ಉಪಕಾರಿಯೋ ಅಷ್ಟೇ ಅಪಾಯವನ್ನುಂಟು ಮಾಡುತ್ತದೆ ಎಂಬ ಸಂಗತಿಯನ್ನು ನೀವು ತಿಳಿದಿದ್ದೀರಾ?

ಇದನ್ನೂ ಓದಿರಿ: ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಕಾರಣಗಳೇನು?

ಮೊಬೈಲ್ ಫೋನ್ ಮತ್ತು ಕ್ಯಾನ್ಸರ್‌ಗೆ ಸಂಬಂಧವಿದ್ದು ಯುಎಸ್ ಸರಕಾರವು ನಡೆಸಿದ ಅಧ್ಯಯನದಿಂದ ಇದು ಸಾಬೀತಾಗಿದೆ. ಈ ಮೊದಲು ಫೋನ್‌ ಕಾರಣದಿಂದ ಹಲವಾರು ಆರೋಗ್ಯ ತೊಂದರೆಗಳು ಉಂಟಾಗುವುದು ಸಹಜ ಎಂಬುದಾಗಿ ನಾವು ತಿಳಿಸಿದ್ದರೂ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಮಾಹಿತಿ ಕ್ಯಾನ್ಸರ್ ರೋಗದ್ದಾಗಿದೆ.

#1

#1

ಬಳಕೆದಾರರ ಆರೋಗ್ಯದ ಮೇಲೆ ಫೋನ್‌ಗಳು ಮಾಡುವ ಹಾನಿಯನ್ನು ಈ ಅಧ್ಯಯನವು ಪರಿಶೀಲಿಸಿದ್ದು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಫೋನ್ ಕಾರಣವಾಗಲಿದೆ ಎಂಬ ಅಂಶ ತಿಳಿದು ಬಂದಿದೆ.

#2

#2

ಮೊಬೈಲ್ ಫೋನ್‌ಗಳು ಸಾಮಾನ್ಯವಾಗಿ ಒಂದು ವಿಧದ ರೇಡಿಯೊ ಫ್ರಿಕ್ವೆನ್ಸಿಯನ್ನು ಬಿಡುಗಡೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಂಭವ ಸಾಧ್ಯವಿದೆ ಎಂಬುದಾಗಿ ಈ ಅಧ್ಯಯನ ತಿಳಿಸಿದೆ.

#3

#3

ಪ್ರಾಣಿಗಳಲ್ಲಿ ಎರಡು ರೀತಿಯ ಟ್ಯೂಮರ್‌ಗಳು ಕಂಡುಬರಲಿದ್ದು ಇದು ಹೃದಯ ಮತ್ತು ಮೆದುಳಿನಲ್ಲಿ ಕಾಣಿಸಿಕೊಳ್ಳುತ್ತದೆ. ಇಂತಹ ಘಟನೆಗಳು ಕಡಿಮೆಯಾಗಿದ್ದರೂ ರೇಡಿಯೊ ವಿಕಿರಣಗಳಿಂದ ಈ ಕ್ಯಾನ್ಸರ್ ಬರುವ ಸಂಭವವಿದೆ.

#4

#4

ಆವರ್ತನೆಗಳಿಗೆ ಒಡ್ಡಿಕೊಳ್ಳದೇ ಇರುವ ಇಲಿಗಳಲ್ಲಿ ಟ್ಯೂಮರ್‌ಗಳು ಪತ್ತೆಯಾಗಿಲ್ಲ. 2,500 ಕ್ಕಿಂತಲೂ ಹೆಚ್ಚಿನ ಇಲಿಗಳನ್ನು ಎರಡು ವರ್ಷಗಳ ಅವಧಿಯ ಅಂತರದಲ್ಲಿ ಪ್ರಯೋಗ ಮಾಡಲಾಯಿತು.

#5

#5

ವರದಿಯಲ್ಲಿ ಸಂಶೋಧಕರು ಹೇಳಿರುವಂತೆ, ಎಲ್ಲಾ ವಯಸ್ಸಿನವರು ಜಾಗತಿಕವಾಗಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಮಾಡುತ್ತಿದ್ದಾರೆ, ಮೊಬೈಲ್‌ಗಳು ಹೊರಸೂಸುವ ವಿಕಿರಣ ಅತಿ ಕಡಿಮೆ ಪ್ರಮಾಣದ್ದಾಗಿದ್ದರೂ ಇದು ಉಂಟುಮಾಡುವ ಹಾನಿ ಮಾತ್ರ ಅಪಾರವಾದುದು ಎಂದಾಗಿದೆ.

#6

#6

ಮೊಬೈಲ್‌ನಿಂದ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗಗಳನ್ನು ಪಸರಿಸುವುದು ಮಾತ್ರವಲ್ಲದೆ ಇತರ ಅಪಾಯವನ್ನೂ ಉಂಟುಮಾಡಲಿದೆ. ಮೆದುಳಿನ ಹಾನಿಯನ್ನು ಅನುಭವಿಸುವ ಸಾಧ್ಯತೆ ಇದೆ.

#7

#7

ಮೊಬೈಲ್ ಕುರಿತ ಈ ಸಂಶೋಧನೆಯು ಹೆಚ್ಚು ದೀರ್ಘ ಮತ್ತು ಆಳವಾಗಿದ್ದು ಕ್ಯಾನ್ಸರ್ ಅಪಾಯ ಮೊಬೈಲ್‌ನಿಂದ ಉಂಟಾಗುವುದು ನಿಖರ ಎಂಬುದಾಗಿ ಸಂಶೋಧಕ ರೋನ್ ಮೆನ್ಲಿಕ್ ತಿಳಿಸಿದ್ದಾರೆ.

#8

#8

ಅಪಾಯವಿದ್ದರೂ ಜನರು ಫೋನ್‌ಗಳನ್ನು ಬಳಸುವುದನ್ನು ಮಾತ್ರ ಕಡಿಮೆಮಾಡುತ್ತಿಲ್ಲ ಅಪಾಯದ ತೂಗುಗತ್ತಿಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.

#9

#9

ಈ ಹಿಂದೆ ಕೂಡ ಮೊಬೈಲ್‌ನ ಅಪಾಯದ ಕುರಿತು ಹಲವಾರು ಸಂಶೋಧನೆಗಳನ್ನು ನಡೆಸಿದ್ದರೂ ಇಲಿಗಳನ್ನು ಬಳಸಿ ಮಾಡಿರುವ ಪ್ರಯೋಗದಿಂದ ವಿಕಿರಣಗಳಿಂದ ಕ್ಯಾನ್ಸರ್ ರೋಗವನ್ನು ಪತ್ತೆಮಾಡಲಾಗಿದೆ.

#10

#10

ಇಲಿಗಳನ್ನು ಬಳಸಿ ವಿಜ್ಞಾನಿಗಳು ನಡೆಸಿದ ಈ ಸಂಶೋಧನೆಯಲ್ಲಿ ರೇಡಿಯೊ ವಿಕಿರಣಗಳಿಂದ ಕ್ಯಾನ್ಸರ್ ಉಂಟಾಗುವುದು ಖಾತ್ರಿ ಎಂಬುದನ್ನು ತಿಳಿಸಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?</a><br /><a href=ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು
ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ" title="ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?
ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು
ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ" loading="lazy" width="100" height="56" />ಚಾರ್ಜರ್, ಕರೆಂಟ್ ಜಂಜಾಟವಿಲ್ಲದೆಯೇ ಫೋನ್ ಚಾರ್ಜ್ ಮಾಡುವುದು ಹೇಗೆ?
ಸ್ಮಾರ್ಟ್‌ಫೋನ್ ಕಳೆದುಹೋದಾಗ ಸಹಾಯಕ್ಕೆ ಬರುವ 6 ಅಂಶಗಳು
ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
A major study has suggested there is a link between mobile phones and cancer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X