5G ವೇಗಕ್ಕಿಂತಲೂ 10 ಪಟ್ಟು ವೇಗವಾಗಿ ಡೇಟಾ ವರ್ಗಾಹಿಸುವ ಹೊಸ ಟೆಕ್ನಾಲಜಿ

ಟೆರಾಹರ್ಟ್ಸ್ ಟ್ರಾನ್ಸ್‌ಮಿಷನ್ ಹೆಸರಿನ ಟೆಕ್ನಾಲಜಿಯೊಂದು 5G ವೇಗಕ್ಕಿಂತ 10 ಪಟ್ಟು ವೇಗವಾಗಿ ಡೇಟಾವನ್ನು ವರ್ಗಾವಣೆ ಮಾಡಲಿದೆ ಎನ್ನಲಾಗಿದೆ.

|

ಟೆಕ್ನಾಲಜಿ ಲೋಕದಲ್ಲಿ ಪ್ರತಿ ನಿತ್ಯ ಹೊಸ-ಹೊಸ ಟೆಕ್ನಾಲಜಿ ಪರಿಚಯವಾಗುತ್ತಿರುತ್ತವೆ. ಇದೊಂದಿಗೆ ಹೊಸ ಆವಿಷ್ಕಾರಗಳನ್ನು ನಡೆಯುತ್ತಿರುತ್ತವೆ. ಸದ್ಯ ಸಂಶೋಧಕರು ಹೊಸದೊಂದು ಟೆಕ್ನಾಲಾಜಿಯನ್ನು ಕಂಡು ಹಿಡಿದಿದ್ದು, ಟೆರಾಹರ್ಟ್ಸ್ ಟ್ರಾನ್ಸ್‌ಮಿಷನ್ ಹೆಸರಿನ ಟೆಕ್ನಾಲಜಿಯೊಂದು 5G ವೇಗಕ್ಕಿಂತ 10 ಪಟ್ಟು ವೇಗವಾಗಿ ಡೇಟಾವನ್ನು ವರ್ಗಾವಣೆ ಮಾಡಲಿದೆ ಎನ್ನಲಾಗಿದೆ. ಇದರಿಂದ ಡೇಟಾವನ್ನು ವೇಗವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾಹಿಸಲು ಸುಲಭವಾಗಲಿದೆ.

5G ವೇಗಕ್ಕಿಂತಲೂ 10 ಪಟ್ಟು ವೇಗವಾಗಿ ಡೇಟಾ ವರ್ಗಾಹಿಸುವ ಹೊಸ ಟೆಕ್ನಾಲಜಿ

ಓದಿರಿ: ವಾಟ್ಸ್ಆಪ್ ಚಾಟಿಂಗ್ ಇನ್ನಷ್ಟು ನಾಟಿಯಾಗಲಿದೆ: ಬಂದಿವೆ ಸುಂದರ ಎಮೋಜಿಗಳು..!

2020ರ ವೇಳೆಗೆ ಬಳಕೆಗೆ ಮುಕ್ತವಾಗಲಿರುವ 5ನೇ ತಲೆಮಾರಿನ ಮೊಬೈಲ್ ನೆಟ್‌ವರ್ಕ್ ವೇಗಕ್ಕಿಂತಲೂ ಟೆರಾಹರ್ಟ್ಸ್ ಟ್ರಾನ್ಸ್‌ಮಿಷನ್ 10 ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, ಈ ಟೆಕ್ನಾಲಜಿಯ ಸಹಾಯದಿಂದಾಗಿ ಒಂದು ಡಿವಿಡಿಯಲ್ಲಿ ಹಿಡಿಯುವ ಡೇಟಾವನ್ನು ಕ್ಷಣ ಮಾತ್ರದಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡಬಹುದಾಗಿದೆ.

ಇದೇ ತಿಂಗಳು ಕ್ಯಾಲಿಪೋರ್ನಿಯದಲ್ಲಿ ನಡೆಯುತ್ತಿರುವ ಸಮಾವೇಶವೊಂದರಲ್ಲಿ ಈ ಹೊಸ ಟೆಕ್ನಾಲಜಿಯನ್ನು ಪರಿಚಯಿಸಲಾಗುತ್ತಿದೆ ಎನ್ನಲಾಗಿದೆ. ಈ ಟೆರಾಹರ್ಟ್ಸ್ ಟ್ರಾನ್ಸ್‌ಮಿಷನ್ ಅನ್ನು ಮುಂಬರುವ ದಿನಗಳಲ್ಲಿ ಆಲ್ಟ್ರಾ- ಸ್ಪಿಡ್ ವೈರ್‌ಲೈಸ್ ಕಮ್ಯುನಿಕೇಶನ್‌ಗಾಗಿ ಬಳಸಲು ಸೂಕ್ತವಾಗಿದೆ ಎನ್ನವ ಮಾತುಗಳು ಕೇಳಿಬಂದಿದೆ.

5G ವೇಗಕ್ಕಿಂತಲೂ 10 ಪಟ್ಟು ವೇಗವಾಗಿ ಡೇಟಾ ವರ್ಗಾಹಿಸುವ ಹೊಸ ಟೆಕ್ನಾಲಜಿ

ಓದಿರಿ: ಕೇವಲ ರೂ. 4,199ಕ್ಕೆ ಇಂಟೆಲ್ ಆಕ್ವಾ 4.0 4G ಪೋನು ...!

ಈ ಹೊಸ ಟೆರಾಹರ್ಟ್ಸ್ ಟ್ರಾನ್ಸ್‌ಮಿಷನ್ ಟೆಕ್ನಾಲಜಿಯೂ ವೈರ್‌ಲೇಸ್ ಆಗಿದ್ದು, ವಿಮಾನಗಳಲ್ಲಿ ಬಳಸುವ ನೆಟ್‌ವರ್ಕ್ ಕನೆಕ್ಷನ್ ವೇಗವನ್ನು ಹೆಚ್ಚಿಸಲು ಸಹಾಯಕಾರಿಯಾಗಿದ್ದು, ಮೊಬೈಲ್ ನಲ್ಲಿ ವೇಗವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಇದು ಸಹಾಯಕಾರಿಯಾಗಲಿದೆ. ಇದು ಸಾಮಾನ್ಯ ಜನರ ಬಳಕೆಗೆ ಮುಕ್ತವಾದರೆ ಜೀವನ ಮತ್ತಷ್ಟು ವೇಗವಾಗಿ ನಡೆಯಲಿದೆ.

ಈ ಟೆರಾಹರ್ಟ್ಸ್ ಟ್ರಾನ್ಸ್‌ಮಿಷನ್ ವೇಗವೂ 105 ಗಿಗಾಬೈಟ್ಸ್ ಇದ್ದು, ಇದರ ಫ್ರಿಕ್ವೆನ್ಸಿ 275 GHz to 450 GHz ರೆಂಜ್ ಅನ್ನು ಹೊಂದಿದೆ ಎನ್ನಲಾಗಿದೆ. ಇದರಲ್ಲಿ 100 ಗಿಗಾ ಬೈಟ್ಸ್ ಡೇಟಾವನ್ನು ಸೆಕೆಂಡ್ಸ್ ಲೆಕ್ಕದಲ್ಲಿ ಕಳುಹಿಸಬಹುದಾಗಿದೆ.

Best Mobiles in India

Read more about:
English summary
Researchers have developed a terahertz (THz) transmitter capable of transmitting digital data at a rate 10 times or more faster. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X