ನೀರು ಕುಡಿಯಲು ನೆನಪಿಸುವ ವಾಟರ್‌ ಬಾಟಲ್‌

By Suneel
|

ಕಾಲ ಬದಲಾದಂತೆ ಮನುಷ್ಯ ತಾನು ಸಮಾಜದ ಬೆಳವಣಿಗೆಗೆ ಹೊಂದಿಕೊಂಡು ಹೋಗುವುದು ಸಹಜ ಪ್ರವೃತ್ತಿ. ಅಂತೆಯೇ ಇಂದಿನ ತಂತ್ರಜ್ಞಾನ ಬೆಳವಣಿಗೆ ಜೊತೆ ಹೊಂದಿಕೊಂಡು ಹೋಗುತ್ತಿರುವುದು ಎಲ್ಲರೂ ಗ್ರಹಿಸಿರುವ ವಿಷಯ. ಇಂದು ನಾವು ನಮ್ಮ ಅವಶ್ಯಕತೆಗೆ ತಕ್ಕಂತೆ ಅಪ್ಲಿಕೇಶನ್‌ಗಳನ್ನು ಬಳಸುತ್ತಾ ಹೋಗುತ್ತಿದ್ದೇವೆ. ಈ ತಂತ್ರಜ್ಞಾನ ಬೆಳವಣಿಗೆ ಇಂದಲೇ ಇಂದು ನಮಗೆ ಹಲವು ಗೊತ್ತಿಲ್ಲದ ವಿಚಾರಗಳು ಹೆಚ್ಚು ಹೆಚ್ಚು ತಿಳಿಯುತ್ತಿವೆ. ಆದರೆ ನಮ್ಮ ದಿನನಿತ್ಯ ಜೀವನದ ಜಂಜಾಟದಲ್ಲಿ ಬಹುಶಃ ಹಲವರು ತಮ್ಮ ದೇಹಕ್ಕೆ ತಕ್ಕ ಪ್ರಮಾಣದಲ್ಲಿ ನೀರನ್ನು ಕುಡಿಯಲು ಮರೆಯುತ್ತಿದ್ದಾರೆ ಎಂಬುದಂತು ಸ್ಪಷ್ಟವಾಗಿದೆ.

ಓದಿರಿ:ಥೈಲೆಂಡ್‌ನಲ್ಲಿ ಫೇಸ್‌ಬುಕ್‌ ಕಛೇರಿ ಆರಂಭ

ಪ್ರಾಯೋಗಿಕವಾಗಿ ಮನುಷ್ಯ ಹೆಚ್ಚು ನೀರು ಕುಡಿದಷ್ಟು ಎರ್ನಜಿಯಾಗಿ ವರ್ತಿಸಬಲ್ಲ ಹಾಗೂ ತನ್ನ ಆರೋಗ್ಯ ಸುಧಾರಿಸಲು ಸಾಧ್ಯ. ಹಾಗೆಯೇ ಶುದ್ಧ ನೀರು ಕುಡಿದಲ್ಲಿ ನಮ್ಮ ದೇಹ ವ್ಯವಸ್ಥೆಯಲ್ಲಿ ಮಾನಸಿಕವಾಗಿ ಏಕಾಗ್ರತೆ ಮತ್ತು ಮನಸ್ಥಿತಿ ಉತ್ತಮವಾಗಿರುವಂತೆ ಮಾಡುತ್ತದೆ. ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ಅಲ್ಲದೇ ತಲೆನೋವಿನ ನಿವಾರಣೆ ಮತ್ತು ಉಸಿರಾಟದ ತೊಂದರೆ ನಿವಾರಣೆಯೂ ಸಾಧ್ಯ.

ನೀರು ಕುಡಿಯದಿರಲು ಪ್ರಮುಖ ಕಾರಣ ನಮ್ಮ ಮರೆವು

ನೀರು ಕುಡಿಯದಿರಲು ಪ್ರಮುಖ ಕಾರಣ ನಮ್ಮ ಮರೆವು

ನಾವು ನೀರು ಕುಡಿಯದಿರಲು ಪ್ರಮುಖ ಕಾರಣ ನಮ್ಮ ಮರೆವು. ಆರೋಗ್ಯವಾಗಿರಲು ಹೆಚ್ಚು ಹೆಚ್ಚು ನೀರು ಕುಡಿಯಬೇಕೆಂಬುದು ತಿಳಿದಿದ್ದರೂ ಕೂಡ ದಿನನಿತ್ಯ ಓಡಾಡದಲ್ಲಿ ಒಂದು ಕಡೆ ಇಂದ ಮತ್ತೊಂದು ಕಡೆಗೆ ಹೋಗುವ ತವಕದಲ್ಲಿ ನೀರು ಕುಡಿಯುತ್ತಿಲ್ಲ. ಎನಾದರೂ ಕುಡಿದಲ್ಲಿ ಬಹುಶಃ ಅದು ಹೆಚ್ಚು ಬಾಯಾರಿಕೆ ಆದಲ್ಲಿ ಮಾತ್ರ. ಡಾಕ್ಟರ್ ಬಳಿಗೆ ಹೋದಾಗ ನಿಮ್ಮನ್ನು ಮೊದಲು ಕೇಳುವ ಪ್ರಶ್ನೆ ಎಂದರೆ ನಿಮಗೆ ಬಾಯಾರಿಕೆ ಆಗುತ್ತಿದೆಯೇ ಎಂದು ಕೇಳಿ, ಹೌದು ಎಂದರೆ ನಿಮಗೆ ಡಿಹೈಡ್ರಾಯ್ಡ್‌ಪ್ರಾರಂಭವಾಗಿದೆ ಎಂದು ಹೇಳುತ್ತಾರೆ.

ನೀರು ಕುಡಿಯುವಂತೆ ಹೇಳಲು ಹಲವು ಅಪ್ಲಿಕೇಶನ್‌ಗಳು ಸಿದ್ದಗೊಂಡಿವೆ

ನೀರು ಕುಡಿಯುವಂತೆ ಹೇಳಲು ಹಲವು ಅಪ್ಲಿಕೇಶನ್‌ಗಳು ಸಿದ್ದಗೊಂಡಿವೆ

ಈಗ ಕಾಲಬದಲಾಗಿದೆ. ಮನುಷ್ಯ ನೀರು ಕುಡಿಯಲು ತಾನೇ ಆವಿಷ್ಕಾರ ಮಾಡಿದ ಅಪ್ಲಿಕೇಶನ್‌ಗಳಿಂದ ಸಲಹೆ ಕೇಳುವ ಕಾಲ ಬಂದಿದೆ. ಹೌದು, ನಿಮಗೆ ನೀರು ಕುಡಿಯುವಂತೆ ಹೇಳಲು ಹಲವು ಅಪ್ಲಿಕೇಶನ್‌ಗಳು ಸಿದ್ದಗೊಂಡಿವೆ. ಇವು ಇತರೆ ಅಪ್ಲಿಕೇಶನ್‌ಗಳಿಗೆ ಹೋಲಿಸಿದರೆ ಉತ್ತಮವಾದವು. ನಮ್ಮ ಫೋನ್‌ಗಳು ನಮ್ಮಲ್ಲಿ ಸದಾಕಾಲ ಇರುವಾಗ ಮತ್ತೊಂದು ಮಾಹಿತಿ ವಸ್ತುಗಳನ್ನು ನಾವು ಪಡೆಯಲು ಇಚ್ಛಿಸುವುದಿಲ್ಲ. ಹಾಗೆ ಕೆಲಸ ನಿರತರಾಗಿದ್ದಾಗ ಸಂದೇಶಗಳನ್ನು ಕೂಡ ತಿರಸ್ಕರಿಸುತ್ತೇವೆ.

ಹೈಡ್ರೇಟ್‌ ಮಿ ಅಪ್ಲಿಕೇಶನ್

ಹೈಡ್ರೇಟ್‌ ಮಿ ಅಪ್ಲಿಕೇಶನ್

ಹೈಡ್ರೇಟ್‌ ಒಂದು ವ್ಯವಸ್ಥೆಯಾಗಿದ್ದು, ಸ್ಟೈಲಿಸ್‌ವಾಟರ್‌‌ಬಾಟಲ್‌ನಲ್ಲಿ ಅಳವಡಿಸಲಾದ ಅಪ್ಲಿಕೇಶನ್‌ನಿಂದ ಹೆಚ್ಚು ನೀರುಕುಡಿಯುವಂತೆ ನೆನಪು ಮಾಡುತ್ತದೆ. ಈ ಅಪ್ಲಿಕೇಶನ್‌ ಎಷ್ಟು ಪ್ರಮಾಣದಲ್ಲಿ ದಿನನಿತ್ಯ ನೀರು ಕುಡಿಯುತ್ತಿದ್ದೀರಿ ಎಂಬುದನ್ನು ವಯಕ್ತಿಕವಾಗಿ ಪರಿಶೀಲಿಸಿ ಟ್ರ್ಯಾಕ್‌ ಮಾಡುತ್ತದೆ. ಇನ್ನು ಕೆಲವು ಅಪ್ಲಿಕೇಶನ್‌ಗಳ ನೀರಿನಲ್ಲಿನ ವಿಶಿಷ್ಟ ಪರಿಮಾಣವನ್ನು ನೆನಪಿಸುತ್ತವೆ. ಹೈಡ್ರೇಟ್‌ಮಿ ವ್ಯವಸ್ಥೆಯು ನಿಮಗೆ ತಾಪಮಾನ ಮತ್ತು ವಾತಾವರಣಕ್ಕೆ ಅನುಗುಣವಾಗಿ ನೀರು ಕುಡಿಯಲು ಹೇಳುತ್ತದೆ.

ಕಿಕ್‌ ಸ್ಟಾಟರ್‌

ಕಿಕ್‌ ಸ್ಟಾಟರ್‌

ಇದು ಬಾಟಲ್‌ಗೆ ಸಂಪರ್ಕದಲ್ಲಿದ್ದು, ನೀವು ದೀರ್ಘಕಾಲದಿಂದಲೂ ನೀರು ಕುಡಿಯದಿದ್ದಲ್ಲಿ ನೀರು ಕುಡಿಯಲು ಹೇಳುತ್ತದೆ ಹಾಗೂ ಬಾಟಲ್‌ನಲ್ಲಿ ಬೆಳಕು ಪ್ರಾರಂಭವಾಗುತ್ತದೆ.

ಹೈಡ್ರೇಟ್‌ಮಿ

ಹೈಡ್ರೇಟ್‌ಮಿ

ನಿಮ್ಮನ್ನು ನೀವು ನೀರು ಕುಡಿಯಲು ನೆನಪಿಸಿಕೊಳ್ಳಲು ಇದು ಸರಳ ವಿಧಾನವಾಗಿದೆ. ತರಗತಿ ಸಮಯ, ಜಿಮ್‌, ಮೀಟಿಂಗ್ ಹೀಗೆ ಹಲವಾರು ಸಂದರ್ಭಗಳಲ್ಲಿ ಇದು ನಿಮಗೆ ತೊಂದರೆ ಕೊಡದೆ ಸೂಕ್ಷ್ಮವಾಗಿ ನೀರು ಕುಡಿಯಲು ಎಚ್ಚರಿಸುತ್ತದೆ.

ಕಿಕ್‌ಸ್ಟಾಟರ್

ಕಿಕ್‌ಸ್ಟಾಟರ್

ಕಿಕ್‌ಸ್ಟಾಟರ್‌ನಲ್ಲಿರುವ ಬಾಟಲ್‌ ಈಗಾಗಲೇ ಮಾರಾಟವಾಗಲು ಸಿದ್ದವಾಗಿದ್ದು, ಸುಮಾರು 3600 ಜನರು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಹಾಗು $ 278,545 ಬೆಲೆಯನ್ನು ಪಡೆದುಕೊಂಡಿದೆ.

ಬಾಟಲ್‌ 5 ಬಣ್ಣಗಳಲ್ಲಿ ಲಭ್ಯ

ಬಾಟಲ್‌ 5 ಬಣ್ಣಗಳಲ್ಲಿ ಲಭ್ಯ

ಈ ಬಾಟಲ್‌ 5 ಬಣ್ಣಗಳಲ್ಲಿ ಲಭ್ಯವಿದ್ದು, ಸ್ಟೈಲಿಸ್‌ಆಗಿದೆ. ಹಾಗೂ ಇದನ್ನು ಎಲ್ಲಾಕಡೆ ಕೊಂಡೊಯ್ಯಬಹುದಾಗಿದೆ.

ಗ್ಲೋವಿಂಗ್‌ ಬಾಟಲ್‌

ಗ್ಲೋವಿಂಗ್‌ ಬಾಟಲ್‌

ಈ ಗ್ಲೋವಿಂಗ್‌ ಬಾಟಲ್‌ ಮತ್ತು ಅಪ್ಲಿಕೇಶನ್‌ ನೀರು ಕುಡಿಯಲು ನೆನಪಿಸಲು ಇರುವ ತಂತ್ರಜ್ಞಾನಾಧಾರಿತ ಚಟುವಟಿಕೆಯಾಗಿದ್ದು, ಸರಳವಾಗಿ ನಿರ್ವಹಿಸಬಹುದಾಗಿದೆ.

Best Mobiles in India

English summary
Wearable technology is becoming the norm for people now. With easy-to-wear devices and connected apps at our fingertips, we know more about our bodies now than ever before. One thing that is becoming more and more apparent is the benefit of simply getting enough water every day..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X