ಮುಂದಿನ ಯುದ್ಧ ನೀರಿಗಾಗಿ

By Suneel
|

ಈಗಾಗಲೇ ಎಲ್ಲರಿಗೂ ತಿಳಿದಿದೆ. ಬೆಂಗಳೂರಿನಂತ ನಗರಗಳಲ್ಲಿ ಹಣ ನೀಡದೆ ಕುಡಿಯಲು ನೀರು ಸಿಗುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಸಂಶೋಧಕರ ತಂಡವೊಂದು ಮುಂದಿನ ಯುದ್ಧ ನೀರಿಗಾಗಿ ನಡೆಯಬಹುದೆಂಬ ಆಧಾರ ಸಹಿತ ಮಾಹಿತಿಯೊಂದನ್ನು ನೀಡಿದೆ. ಆ ವಿಶೇಷ ಮಾಹಿತಿ ಏನೆಂದು ಗಿಜ್‌ಬಾಟ್‌ ಲೇಖನ ಓದಿ ತಿಳಿಯಿರಿ.

ಓದಿರಿ: ಕ್ಯಾಂಡಿ ಕ್ರಷ್‌ ರಿಕ್ವೆಸ್ಟ್‌ ಬ್ಲಾಕ್‌ ಹೇಗೆ

ಮುಂದಿನ ಯುದ್ಧ ನೀರಿಗಾಗಿ.

ಮುಂದಿನ ಯುದ್ಧ ನೀರಿಗಾಗಿ.

ಹೊಸ ಅಧ್ಯಯನ ಒಂದು ಅಂತರ್ಜಲದ ನೀರಿನ ಮಟ್ಟ ಅಂದಾಜಿಸಿದ್ದು, ಅಧ್ಯಯನ ಫಲಿತಾಂಶ ಮುಂದಿನ ದಿನಗಳಲ್ಲಿ ನೀರಿಗಾಗಿ ಹೋರಾಟ ನೆಡೆಯುವಂತಹ ಮುನ್ಸೂಚೆನೆ ನೀಡಿದೆ. ಆದರೆ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಹೇಗೆ ಬಳಕೆಯಾಗುತ್ತದೆ ಹಾಗೂ ಬಳಸಿದ ನೀರನ್ನು ಮರುಬಳಕೆ ಮಾಡುವ ವಿಧಾನ ಆಧುನಿಕಗೊಂಡಲ್ಲಿ ನೀರಿನ ಸಮಸ್ಯೆ ಸುಧಾರಿಸಬಹುದು ಎನ್ನಲಾಗಿದೆ.

ಅಧ್ಯಯನ

ಅಧ್ಯಯನ

ವಿಕ್ಟೋರಿಯಾ ವಿಶ್ವವಿದ್ಯಾನಿಲಯ, ಟೆಕ್ಸಾಸ್‌ ವಿಶ್ವವಿದ್ಯಾನಿಲಯ, ಕ್ಯಾಲ್ಗರಿ ವಿಶ್ವವಿದ್ಯಾನಿಲಯ ಮತ್ತು ಗೊಟ್ಟಿಂಗನ್ ವಿಶ್ವವಿದ್ಯಾಲಯಗಳು ಅಂತರ್ಜಲ ನೀರಿನ ವಿತರಣೆ ಕುರಿತಾದ ಮ್ಯಾಪ್‌ ಹೊರತಂದಿದ್ದಾರೆ. ಈ ಮ್ಯಾಪ್‌ 40,000 ಕ್ಕು ಹೆಚ್ಚು ವೈಜ್ಞಾನಿಕ ಮಾದರಿಗಳು ವಿಶ್ಲೇಷಿಸುವ ಡಾಟಾ ಸೆಟ್‌ಗಳ ಆಧಾರಿತ ಮಾಹಿತಿಯಾಗಿದೆ.

1970 ರ ಅಧ್ಯಯನಕ್ಕಿಂತ ನಿಖರ

1970 ರ ಅಧ್ಯಯನಕ್ಕಿಂತ ನಿಖರ

1970 ರಲ್ಲಿ ಸಾಮಾನ್ಯ ಅಂದಾಜಿನಲ್ಲಿ ಅಂತರ್ಜಲ ನೀರಿನ ಮಟ್ಟ ಸಮೀಕ್ಷೆ ಮಾಡಲಾಗಿತ್ತು. ಆದರೆ ಪ್ರಸ್ತುತ ಅಧ್ಯಯನ ಸಂಪೂರ್ಣ ನಿಖರವಾಗಿ ಜಾಗತಿಕ ಮಟ್ಟದಲ್ಲಿ ಅಂತರ್ಜಲ ನೀರಿನ ಮಟ್ಟ ಅಂದಾಜಿಸಿದ್ದು ಇದು ನಿಜವಾಗಿಯೂ ನಿಖರ ಮಾಹಿತಿಯನ್ನು ಹೊಂದಿದೆ.

 ಅಂತರ್ಜಲ ನೀರು

ಅಂತರ್ಜಲ ನೀರು

ಅಂತರ್ಜಲ ನೀರು ಭೂಮಿ ಮೇಲಿನ ಪ್ರತಿಯೊಂದು ಜೀವಿಗಳಿಗೂ ಅತ್ಯಮೂಲ್ಯ ಸಂಪನ್ಮೂಲವಾಗಿದೆ.

ಅಂತರ್ಜಲವು 5.5 ದಶಲಕ್ಷ ಘನ(ಕ್ಯೂಬಿಕ್) ಮೈಲಿ

ಅಂತರ್ಜಲವು 5.5 ದಶಲಕ್ಷ ಘನ(ಕ್ಯೂಬಿಕ್) ಮೈಲಿ

ಅಧ್ಯಯನವು, ಅಂತರ್ಜಲವು 5.5 ದಶಲಕ್ಷ ಘನ(ಕ್ಯೂಬಿಕ್) ಮೈಲಿ ಇದೆ ಎಂದು ಅಂದಾಜಿಸಿದೆ.

ಅಂತರ್ಜಲದಲ್ಲಿ 2 ಪ್ರಕಾರ

ಅಂತರ್ಜಲದಲ್ಲಿ 2 ಪ್ರಕಾರ

ಅಂತರ್ಜಲದಲ್ಲಿ ಎರಡು ಪ್ರಕಾರ ಇರುವ ಬಗ್ಗೆ ಹೇಳಿದೆ. ಹಳೆಯ ಮತ್ತು ಆಧುನಿಕ ಅಂತರ್ಜಲ ಪ್ರಕಾರಗಳು.
* ಹಳೆಯ ಅಂತರ್ಜಲ : ಭೂಮಿಯಲ್ಲಿ ಅತಿ ಹೆಚ್ಚು ಆಳದಲ್ಲಿದ್ದು, ಉಪ್ಪಿನ ಅಂಶವು ಅರ್ಸೆನಿಕ್‌ ಮತ್ತು ಯುರೇನಿಯಂ ಅಂಶ ಹೊಂದಿದೆ.
* ಆಧುನಿಕ ಅಂತರ್ಜಲ : ಇದು ಹೆಚ್ಚು ಮೇಲ್ಮೈ ಪ್ರದೇಶದಲ್ಲಿದ್ದು, ಕ್ಷಿಪ್ರವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇದು ವಾತಾವರಣ ಬದಲಾವಣೆಗೆ ಅಧಿಕವಾಗಿ ಕಾರಣವಾಗಿದೆ.

ಮ್ಯಾಪ್‌ ಮಾಹಿತಿ.

ಮ್ಯಾಪ್‌ ಮಾಹಿತಿ.

ಮ್ಯಾಪ್‌ನಲ್ಲಿ ಅಧಿಕವಾಗಿ ಆಧುನಿಕ ಅಂತರ್ಜಲದ ನೀರು ಪರ್ವತ ಮತ್ತು ಉಷ್ಟವಲಯದ ಪ್ರದೇಶಗಳಿಂದ ಚಲಿಸುತ್ತಿರುವ ಬಗ್ಗೆ ಹೇಳಲಾಗಿದೆ.

 ಡಾ. ಕೆವಿನ್‌ ಬೆಫಸ್ -ಸಂಶೋಧಕ

ಡಾ. ಕೆವಿನ್‌ ಬೆಫಸ್ -ಸಂಶೋಧಕ

ಅಧ್ಯಯನಕ್ಕಿಂತ ಮೊದಲು " 'ಒಣ ಪ್ರದೇಶಗಳಲ್ಲಿ ಕಡಿಮೆ ಅಂತರ್ಜಲ ಮತ್ತು ಆರ್ದ್ರ ಪ್ರದೇಶಗಳಲ್ಲಿ ಹೆಚ್ಚು ಅಂತರ್ಜಲ ಇರುವ ಬಗ್ಗೆ ಯೋಚಿಸಿದ್ದೆವು', 'ಅಲ್ಲದೇ ಭೂರಾಸಾಯನಿಕ ಹೋಲಿಕೆಯನ್ನು ಅಂದಾಜು ಮಾಡಲಾಗಿದೆ. ಆದರೆ ಪರಿಮಾಣಾತ್ಮಕ ಅಂದಾಜು ಹೊಂದಿಲ್ಲ" ಎಂದಿದ್ದಾರೆ.

ಶೇಕಡ 6 ಕ್ಕಿಂತ ಕಡಿಮೆ ಅಂತರ್ಜಲ

ಶೇಕಡ 6 ಕ್ಕಿಂತ ಕಡಿಮೆ ಅಂತರ್ಜಲ

ಶೇಕಡ 6 ಕ್ಕಿಂತ ಕಡಿಮೆ ಅಂತರ್ಜಲ ಭೂಮಿಯಲ್ಲಿ 2 ಕಿಲೋ ಮೀಟರ್‌ ಆಳದಲ್ಲಿ ಇದ್ದು, ಇದನ್ನು ಮಾನವ ಇರುವವರೆಗೆ ನವೀಕರಿಸ ಬಹುದೆಂದು ಪ್ರಸ್ತುತ ಅಧ್ಯಯನ ಹೇಳಿದೆ.

ಪ್ರಸ್ತುತ ಅಧ್ಯಯನ ಸಂಶೋಧಕರ ಡಾಟಾ ವಿಶ್ಲೇಷಣೆ

ಪ್ರಸ್ತುತ ಅಧ್ಯಯನ ಸಂಶೋಧಕರ ಡಾಟಾ ವಿಶ್ಲೇಷಣೆ

ಅಧ್ಯಯನ ಸಂಶೋಧಕರು ಹಳೆಯ ಮತ್ತು ಆಧುನಿಕ ಅಂತರ್ಜಲದ ನೀರು ಮಾನವ ಚಟುವಟಿಕೆಗಳಿಗೆ ಹೇಗೆ ಬಳಕೆ ಆಗುತ್ತಿದೆ ಎಂಬುದನ್ನು ವಿಶ್ಲೇಷಿಸುತ್ತಿದ್ದಾರೆ.

ಸಂಶೋಧಕರ ವಿಶ್ಲೇಷಣೆ ಸಹಾಯ

ಸಂಶೋಧಕರ ವಿಶ್ಲೇಷಣೆ ಸಹಾಯ

ಸಂಶೋಧಕರ ವಿಶ್ಲೇಷಣೆ ನೀರಿಗೆ ಸಂಬಂಧಿಸಿದ ಕಾನೂನು ಅಭಿವೃದ್ದಿಗಾರರು, ನೀರು ನಿರ್ವಹಣೆಗಾರರು ಮತ್ತು ವಿಜ್ಞಾನಿಗಳಿಗೆ ಸಹಾಯವಾಗಲಿದೆ.

Best Mobiles in India

English summary
Latest study has, for the first time, estimated the total volume of groundwater that is present on the Earth and the results are not too promising. In a nutshell; we are using up water supply much faster than it can be replaced naturally.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X