ಡಿಜಿಟಲ್‌ ವ್ಯವಹಾರ ನಡೆಸಿ ಸರ್ಕಾರದಿಂದ 1 ಕೋಟಿ ಬಹುಮಾನ ಪಡೆಯಿರಿ!!

ಹಳ್ಳಿಗಳು ಮತ್ತು ಚಿಕ್ಕ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಜನರನ್ನು ಡಿಜಿಟಲ್ ವ್ಯವಹಾರದ ಕಡೆ ಪ್ರೋತ್ಸಾಹಿಸಲುದ ಬಹುಮಾನವನ್ನು ನೀಡಲಾಗುತ್ತಿದೆ.

|

ಸಾಮಾನ್ಯ ಜನತೆ ಡಿಜಿಟಲ್ ವ್ಯವಹಾರ ಬಳಸುವಂತೆ ಪ್ರೋತ್ಸಾಹಿಸಲು ಸೇವಾ ಟ್ಯಾಕ್ಸ್‌ ರದ್ದು ಮಾಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಬಹುಮಾನದ ಆಫರ್‌ ಡಿಜಿಟಲ್‌ ಬಳಕೆದಾರರಿಗೆ ಸಿಕ್ಕಿದೆ. ಹೌದು, ಭಾರತ ಸರ್ಕಾರದ ನೀತಿ ಆಯೋಗ ಇದಕ್ಕಾಗಿ ಹೊಸದೊಂದು ಪ್ಲಾನ್ ಮಾಡಿದದ್ದು, ಡಿಜಿಟಲ್ ವ್ಯವಹಾರ ನಡೆಸುವವರಿಗೆ ಲಕ್ಕಿ ಡ್ರಾ ಮೂಲಕ ದೊಡ್ಡ ಮೊತ್ತದ ಹಣದ ಬಹುಮಾನ ನೀಡಲು ಚಿಂತಿಸಿದೆ ಎನ್ನಲಾಗಿದೆ.

ಹಳ್ಳಿಗಳು ಮತ್ತು ಚಿಕ್ಕ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದ ಜನರನ್ನು ಡಿಜಿಟಲ್ ವ್ಯವಹಾರದ ಕಡೆ ಪ್ರೋತ್ಸಾಹಿಸಲುದ ಬಹುಮಾನವನ್ನು ನೀಡಲಾಗುತ್ತಿದ್ದು, ಬಹುಮಾನದ ಹಣಕ್ಕಾಗಿ ರಾಷ್ಟ್ರೀಯ ಆರ್ಥಿಕ ನಿಧಿಯಿಂದ ರೂ.125 ಕೋಟಿ ಹಣವನ್ನು ಮೀಸಲಿಡಲು ನಿರ್ಣಯಿಸಲಾಗಿದೆ. ಇನ್ನು ಯೋಜನೆಯ ಕುರಿತು ರೂಪುರೇಷೆಗಳನ್ನು ನಿರ್ಮಿಸಲು ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾಗವನ್ನು ನೀತಿ ಆಯೋಗ ವಿನಂತಿಸಿದೆ.

ಡಿಜಿಟಲ್‌ ವ್ಯವಹಾರ ನಡೆಸಿ ಸರ್ಕಾರದಿಂದ 1 ಕೋಟಿ ಬಹುಮಾನ ಪಡೆಯಿರಿ!!

ಆನ್‌ಲೈನ್ ವ್ಯವಹಾರ ಏಕೆ ಮಾಡಬೇಕು ಮತ್ತು ಏಕೆ ಮಾಡಬಾರದು? 10 ಕಾರಣಗಳು!?

ನೀತಿ ಆಯೋಗ ಎರಡು ಸ್ಕೀಂಗಳಲ್ಲಿ ಲಕ್ಕಿ ಡ್ರಾ ಬಹುಮಾನವನ್ನು ನೀಡುತ್ತಿದ್ದು, ಗ್ರಾಹಕರಿಗಾಗಿ ಲಕ್ಕಿ ಗ್ರಾಹಕ್ ಯೋಜನಾ ಮತ್ತು ವ್ಯಾಪಾರಿಗಳಿಗಾಗಿ ಡಿಜಿ-ಧನ್ ವ್ಯಾಪರ್ ಯೋಜನಾ ಎನ್ನುವ ಸ್ಕ್ಈಂಗಳನ್ನು ನೀಡಿದೆ. ಇನ್ನು ವಾರಕ್ಕೆ ಒಮ್ಮೆ ಲಕ್ಕಿ ಡ್ರಾ ನಡೆಸಿ 10 ಜನ ಗ್ರಾಹಕರು, 10 ಜನ ವ್ಯಾಪಾರಿಗಳನ್ನು ಆಯ್ಕೆ ಮಾಡಿ ತಲಾ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ.

ಡಿಜಿಟಲ್‌ ವ್ಯವಹಾರ ನಡೆಸಿ ಸರ್ಕಾರದಿಂದ 1 ಕೋಟಿ ಬಹುಮಾನ ಪಡೆಯಿರಿ!!

ಇನ್ನು ಡಿಜಿಟಲ್ ಪೇಮೆಂಟ್ ಮೂಲಕ ವ್ಯವಹಾರ ನಡೆಸುವ ಒಬ್ಬರಿಗೆ ಬಂಪರ್ ಬಹುಮಾನವಾಗಿ 1 ಕೋಟಿ ರೂ. ಕೊಡಲು ನಿರ್ಧರಿಸಲಾಗಿದೆ. ಭಾರತದ ಪ್ರಮುಖ ರಾಷ್ಟೀಯ ಬ್ಯಾಂಕ್‌ಗಳು ಬಹುಮಾನದ ಪ್ರಯೋಜಕತ್ವವನ್ನು ವಹಿಸಿಕೊಳ್ಳಲಿದ್ದು, ರಾಷ್ಟೀಯ ಬ್ಯಾಂಕ್‌ಗಳ ಕ್ರೆಡಿಟ್‌ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಉಪಯೋಗಿಸಿದವರಿಗೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು ಎನ್ನಲಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The awards will be offered through two schemes-the Lucky Grahak Yojana for consumers, and the Digital-dhan Vyapar Yojana for merchants .to know more this visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X