ಭಾರತದಲ್ಲಿ ನೋಕಿಯಾ 6 ಸ್ಮಾರ್ಟ್‌ಪೋನ್‌ ಲಭ್ಯ..! ಆದರೆ..?

ಭಾರತದಲ್ಲಿಯೂ ಸದ್ಯ ನೋಕಿಯಾ 6 ಸ್ಮಾರ್ಟ್‌ಪೋನ್‌ ಲಭ್ಯವಿದೆ. ಆದರೆ ಇದು ಥರ್ಡ್ ಪಾರ್ಟಿ ಪೋನಾಗಿದ್ದು, ಮೂಲ ಬೆಲೆಗಿಂತ ದುಪಟ್ಟು ಹಣವನ್ನು ಈ ಪೋನಿಗೆ ನೀಡಬೇಕಾಗಿದೆ.

Written By:

ನೋಕಿಯಾ ಮತ್ತೆ ಜಾಗತೀಕ ಮಾರುಕಟ್ಟೆಯಲ್ಲಿ ತನ್ನ ಪ್ರಭಾವನ್ನು ಸಾಕಷ್ಟು ಬೀರಿದ್ದು. ಮತ್ತೆ ತನ್ನ ಸ್ಮಾರ್ಟ್‌ಪೋನು ಮೂಲಕವೇ ಅಭಿಮಾನಿಗಳ ನಿದ್ದೆಗೆಡಿಸಿದೆ, ಈಗಾಗಲೇ ಚೀನಾ ಮಾರುಕಟ್ಟೆಗೆ ನೋಕಿಯಾ 6 ಎಂಬ ಸ್ಮಾರ್ಟ್‌ಪೋನನ್ನು ಪರಿಚಯಿಸಿದ್ದು, ಇದೇ ತಿಂಗಳ ಕೊನೆಯಲ್ಲಿ ಇನ್ನೇರಡು ಸ್ಮಾರ್ಟ್‌ಪೋನುಗಳನ್ನು ಬಿಡುಗಡೆ ಮಾಡಲಿದೆ. ಆದರೆ ಈ ಪೋನುಗಳು ಭಾರತಕ್ಕೆ ಕಾಲಿಟ್ಟಿಲ್ಲ.

ಭಾರತದಲ್ಲಿ ನೋಕಿಯಾ 6 ಸ್ಮಾರ್ಟ್‌ಪೋನ್‌ ಲಭ್ಯ..! ಆದರೆ..?

ಓದಿರಿ: ಪ್ರೇಮಿಗಳ ದಿನದಂದು ಜಿಯೋ ಮಾಡಿದ್ದೇನು..?

ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ

ಭಾರತದಲ್ಲಿ ನೋಕಿಯಾ ಸ್ಮಾರ್ಟ್‌ಪೋನ್:

ಭಾರತದಲ್ಲಿ ನೋಕಿಯಾ ಸ್ಮಾರ್ಟ್‌ಪೋನನ್ನು ಕೊಂಡುಕೊಳ್ಳಬೇಕು ಎಂದು ತುದಿಗಾಲಿನಲ್ಲಿ ನಿಂತಿರುವವರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಹಿನ್ನಲೆಯಲ್ಲಿ ಭಾರತದಲ್ಲಿಯೂ ಸದ್ಯ ನೋಕಿಯಾ 6 ಸ್ಮಾರ್ಟ್‌ಪೋನ್‌ ಲಭ್ಯವಿದೆ. ಆದರೆ ಇದು ಥರ್ಡ್ ಪಾರ್ಟಿ ಪೋನಾಗಿದ್ದು, ಮೂಲ ಬೆಲೆಗಿಂತ ದುಪಟ್ಟು ಹಣವನ್ನು ಈ ಪೋನಿಗೆ ನೀಡಬೇಕಾಗಿದೆ.

'ಈಬೇ'ನಲ್ಲಿ ಮಾರಾಟ:

ಭಾರತದಲ್ಲಿ ನೋಕಿಯಾ ಪೋನನ್ನು ಮಾರಾಟ ಮಾಡುವ ಹಕ್ಕು ಪಡೆದುಕೊಂಡಿರುವ ಹೆಚ್‌ಎಮ್‌ಡಿ ಗ್ಲೋಬಲ್ ಭಾರತದಲ್ಲಿ ನೋಕಿಯಾ 6 ಪೋನನ್ನು ಪರಿಚಯಿಸುವ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಈಬೇ ಆನ್‌ಲೈನ್ ಸೈಟಿನಲ್ಲಿ ಈಗಾಗಲೇ ನೋಕಿಯಾ 6 ಮಾರಾಟಕ್ಕೆ ಲಭ್ಯವಿದೆ.

ದುಪ್ಪಟ್ಟು ಹಣ ನೀಡಬೇಕು:

ಸದ್ಯ ಚೀನಾ ಮಾರುಕಟ್ಟೆಯಲ್ಲಿ ಈ ಪೋನಿನ ಬೆಲೆ ಸುಮಾರು 17,000 ರೂ,ಗಳಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈಗ ಈ ಪೋನು ಬೇಕೆಂದರೆ 32,400 ರೂ.ಗಳನ್ನು ನೀಡಬೇಕಾಗಿದೆ. ಇಷ್ಟು ಹಣ ನೀಡಿದರು ಕನಿಷ್ಠ ಪಕ್ಷ 25 ದಿನಗಳು ಕಾಯಲೇ ಬೇಕಾಗಿದೆ.

ಚೀನಾ ಮಾರುಕಟ್ಟೆಯಲ್ಲಿ ನೋಕಿಯಾ ಸಕತ್ ಸದ್ದು:

ಚೀನಾ ಮಾರುಕಟ್ಟೆಯಲ್ಲಿ ನೋಕಿಯಾ ಸಕತ್ ಸದ್ದು ಮಾಡಿದ್ದು, ಸುಮಾರು 1.4 ಮಿಲಿಯನ್ ಪೋನುಗಳು ಕೆಲವೇ ಕ್ಷಣಗಳಲ್ಲಿ ಖಾಲಿಯಾಗಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಭಾರತಕ್ಕೆ ಬಂದರೇ ಮತ್ತೊಂದು ದಾಖಲೆಯನ್ನು ಮಾಡುವುದು ಖಂಡಿತ.

ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿRead more about:
English summary
Nokia's comeback smartphone is finally available in India. But there's no reason why you should be happy as the Nokia 6 is available via a third-party online retailer. to know more visit kannada.gizbot.com
Please Wait while comments are loading...
Opinion Poll

Social Counting