ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ನೋಕಿಯಾ 6 ಆಂಡ್ರಾಯ್ಡ್! ಈಗಲೇ ರಿಜಿಸ್ಟ್ರೇಷನ್ ಮಾಡಿಕೊಳ್ಳಿ

ಭಾರೀ ಸದ್ದು ಮಾಡಿದ್ದ ನೋಕಿಯಾ 6 ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮತ್ತೊಮ್ಮ ಸುದ್ದಿಯಲ್ಲಿದೆ.

ಈ ಮೊದಲು ಭಾರೀ ಸದ್ದು ಮಾಡಿದ್ದ ನೋಕಿಯಾ 6 ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇದೀಗ ಮತ್ತೊಮ್ಮ ಸುದ್ದಿಯಲ್ಲಿದೆ. ಮೊದಲು ಕೇವಲ ಬ್ಲಾಕ್ ಬಣ್ಣದಲ್ಲಿ ಮಾತ್ರ ಲಭ್ಯವಿದ್ಧ ಈ ಫೋನ್, ಸದ್ಯ ಸಿಲ್ವರ್ ಬಣ್ಣದಲ್ಲಿ ಬಿಡುಗಡೆಗೆ ಸಿದ್ಧವಾಗಿರುವುದೇ ಇದಕ್ಕೆ ಕಾರಣ. ಆದರೆ ಈ ಫೋನ್ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ, ಚೀನಾ ಸೇರಿದಂತೆ ಕೆಲವೇ ದೇಶಗಳಲ್ಲಿ ಮಾತ್ರ ದೊರೆಯುತ್ತಿದೆ ಎಂಬುವುದೇ ಬೇಸರದ ಸಂಗತಿ. ಆದರೂ ಈ ತಿಂಗಳ ಅಂತ್ಯದ ವೇಳೆಗೆ ಭಾರತಕ್ಕೂ ಕಾಲಿಡಲಿದೆ ಎಂಬ ನಿರೀಕ್ಷೆಯೂ ಇದೆ.

ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ ನೋಕಿಯಾ 6 ಆಂಡ್ರಾಯ್ಡ್!

ಭಾರತದಲ್ಲಿ ಲಭ್ಯವಿರದಿದ್ದರೂ ಭಾರತೀಯ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟಿಹಾಕಿದ್ದ ನೋಕಿಯಾ 6 ಕಪ್ಪು ಬಣ್ಣದ ಫೋನಿಗಿಂತ ಸಿಲ್ವರ್ ಬಣ್ಣದ ಸ್ಮಾರ್ಟ್ ಫೋನ್ ನೋಡಲು ಬಲು ಸುಂದರ ಮತ್ತು ಆಕರ್ಷಕವಾಗಿದೆ. ಸದ್ಯ ನೂತನ ಬಣ್ಣದ ನೋಕಿಯಾ 6 ಸ್ಮಾರ್ಟ್ ಫೋನ್ ಫಿಲಿಫನ್ಸ್'ನಲ್ಲಿ ಕಾಣಸಿಗುತ್ತಿದೆಯಾದರೂ ಈ ಹೊಸ ಫೋನಿನ ಕುರಿತು ನೋಕಿಯಾ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ ಎನ್ನಲಾಗಿದೆ.

ಈಗಾಗಲೇ ಚೀನಾದಲ್ಲಿ ಮತ್ತೊಂದು ಸುತ್ತಿನ ನೋಕಿಯಾ 6 ಮಾರಾಟಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಇದಕ್ಕಾಗಿ ಪ್ರೀ ರಿಜಿಸ್ಟ್ರೆಷನ್ ಆರಂಭವಾಗಿದೆ. ಈ ಮೊದಲು ಬ್ಲಾಕ್ ಕಲರ್'ನ ನೋಕಿಯಾ 6 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟವಾಗಿತ್ತು, ಹಾಗಾಗಿ ಅಭಿಮಾನಿಗಳು ಸಿಲ್ವರ್ ಆವೃತ್ತಿಯ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಓದಿರಿ: ಫ್ಲಿಪ್‌ಕಾರ್ಟ್ ತೆಕ್ಕೆ ಸೇರಿದ ಈಬೇ

ಮೆಟಲ್ ಬಾಡಿಯನ್ನು ಹೊಂದಿರುವ ನೋಕಿಯಾ 6 ಸದ್ಯ ಎರಡು ಬಣ್ಣದಲ್ಲಿ ಲಭ್ಯವಿದ್ದರೂ ಹೊಸ ಬಣ್ಣದ ಫೋನಿನಲ್ಲಿ ನೋಕಿಯಾ ಲೋಗೋ ಮತ್ತು ಹಿಂಬದಿಯ ಕ್ಯಾಮೆರಾ ಎದ್ದು ಕಾಣುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲೂ ಎರಡು ಬಣ್ಣಗಳಲ್ಲಿ ದೊರೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಗೆ ಕಾಲಿಡಲು ತುದಿಗಾಲಿನಲ್ಲಿ ನಿಂತಿರುವ ನೋಕಿಯಾ, ಚೀನಾ ಮಾದರಿಯಲ್ಲೇ ಮೊದಲಿಗೆ ನೋಕಿಯಾ 6 ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಎರಡು ಬಣ್ಣದಲ್ಲಿ ದೊರೆಯುವ ಈ ಫೋನಿನ ಬೆಲೆ ಸುಮಾರು 16,000 ರೂಗಳಾಗಲಿದೆ. ಭಾರತದಲ್ಲಿ ಲಾಂಚ್ ಆದ ಮೇಲೆ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಈ ಬೆಲೆಗಿಂತ ಕಡಿಮೆ ಬೆಲೆಗೆ ದೊರೆಯಲಿ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Nokia 6 gets a new silver color option and is already up for pre-registrations in China. Take a look at the details from here.
Please Wait while comments are loading...
Opinion Poll

Social Counting