2017ಕ್ಕೆ ನೋಕಿಯಾ ಸ್ಮಾರ್ಟ್‌ಫೋನ್‌ ಪುನರಾಗಮನ: ಆಪಲ್‌, ಸ್ಯಾಮ್‌ಸಂಗ್‌ಗೆ ಬೀಳಲಿದೆ ಹೊಡೆತ!

ಎಚ್‌ಎಂಡಿ ಗ್ಲೋಬಲ್, ನೋಕಿಯಾ ಅನುಭವಿ ಆರ್ಟೋ ನುಮ್ಮೆಲ'ರವರು ಮುಂದಿನ ವರ್ಷ ಮೊಟ್ಟ ಮೊದಲ ನೊಕಿಯಾ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಿದ್ದಾರೆ.

By Suneel
|

ನೋಕಿಯಾ ಸ್ಮಾರ್ಟ್‌ಫೋನ್‌ ಅಂದ್ರೆ ಇಂದಿಗೂ ಸಹ ಹಲವರಿಗೆ ಅಚ್ಚುಮೆಚ್ಚು. ಫಿನ್‌ಲ್ಯಾಂಡ್ ಕಂಪನಿ ಮೈಕ್ರೋಸಾಫ್ಟ್ ಹ್ಯಾಂಡ್‌ಸೆಟ್ ಬ್ರ್ಯಾಂಡ್ ಪರವಾನಗಿ ಪಡೆದು, ಗೂಗಲ್ ಮತ್ತು ಫೋನ್ ತಯಾರಕ ಕಂಪನಿ ಫಾಕ್ಸ್ ಜೊತೆಗೂ ಹೆಚ್ಚು ಸಮಸ್ಯೆ ಅನುಭವಿಸಿತು. ನೋಕಿಯಾ ಒಂದಾನೊಂದು ಕಾಲದಲ್ಲಿ ಪ್ರಪಂಚದ ಪ್ರಬಲವಾದ ಸೆಲ್‌ಫೋನ್ ತಯಾರಕ ಕಂಪನಿ ಆಗಿತ್ತು. ಆದರೆ ಸ್ಮಾರ್ಟ್‌ಫೋನ್ ಅನ್ನು ಶಿಫ್ಟ್‌ ಮಾಡುವಲ್ಲಿ ಮತ್ತು ಪ್ರಖ್ಯಾತವಲ್ಲದ ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ ಅನ್ನು 'ಲೂಮಿಯಾ' ಡಿವೈಸ್‌ಗೆ ಆಯ್ಕೆ ಮಾಡಿಕೊಂಡು ಇನ್ನಷ್ಟು ನೆಲಕಚ್ಚಲು ಕಾರಣವಾಯಿತು.

ಹೊಸ ನೋಕಿಯಾ ಫೋನ್‌: 23MP ಹಿಂಭಾಗ ಕ್ಯಾಮೆರಾ, ಬಟನ್‌ಲೆಸ್ ಫೀಚರ್..!

2017ಕ್ಕೆ ನೋಕಿಯಾ ಸ್ಮಾರ್ಟ್‌ಫೋನ್‌ ಪುನರಾಗಮನ: ಆಪಲ್‌, ಸ್ಯಾಮ್‌ಸಂಗ್‌ಗೆ  ಹೊಡೆತ!

ನೋಕಿಯಾ 2014 ರಲ್ಲಿ ಸ್ಮಾರ್ಟ್‌ಫೋನ್‌ ಚಟುವಟಿಕೆಯನ್ನು ಮೈಕ್ರೋಸಾಫ್ಟ್‌ಗೆ ಮಾರಾಟ ಮಾಡಿ, ಮೊಬೈಲ್ ನೆಟ್‌ವರ್ಕ್‌ ವಸ್ತುಗಳ ಮೇಲೆ ತನ್ನ ಗಮನಹಿರಿಸಿತು. ನಂತರ ಮೈಕ್ರೋಸಾಫ್ಟ್ ಲೂಮಿಯಾ ಸ್ಮಾರ್ಟ್‌ಫೋನ್‌ಗಳನ್ನು ತನ್ನ ಸ್ವಂತ ಹೆಸರಿನಲ್ಲಿ ಮಾರಾಟ ಮಾಡಲು ಆರಂಭಿಸಿತು, ಆದರೆ ಈ ವರ್ಷದಲ್ಲಿ ಅದನ್ನು ಕೈಬಿಡಲಾಯಿತು. ಆದ್ರೂ ಸಹ ನೋಕಿಯಾ ತನ್ನ ಪ್ರಖ್ಯಾತತೆಯನ್ನು ಇನ್ನೂ ಸಹ ಕಳದುಕೊಂಡಿಲ್ಲ. ಯಾಕಂದ್ರೆ ನೋಕಿಯಾ ಮುಂದಿನ ವರ್ಷ ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ಪುನಃ ಮಾರುಕಟ್ಟೆಗೆ ಬರುತ್ತಿದೆ.

2017ಕ್ಕೆ ನೋಕಿಯಾ ಸ್ಮಾರ್ಟ್‌ಫೋನ್‌ ಪುನರಾಗಮನ: ಆಪಲ್‌, ಸ್ಯಾಮ್‌ಸಂಗ್‌ಗೆ  ಹೊಡೆತ!

ಹೌದು, 'ಎಚ್‌ಎಂಡಿ' ಗ್ಲೋಬಲ್, ' ನೋಕಿಯಾ ಬ್ರ್ಯಾಂಡ್ ಹೆಸರಿನಲ್ಲಿ ತನ್ನ ಮೊದಲ ನೋಕಿಯಾ ಸ್ಮಾರ್ಟ್‌ಫೋನ್‌ ಅನ್ನು ಮುಂದಿನ ವರ್ಷ ಲಾಂಚ್‌ ಮಾಡಲು ಸಿದ್ಧವಾಗುತ್ತಿದೆ. ನೋಕಿಯಾ ಬ್ರ್ಯಾಂಡ್‌ ಅಡಿಯಲ್ಲಿ ಎಚ್‌ಎಂಡಿ ಗ್ಲೋಬಲ್ ಲಾಂಚ್‌ ಮಾಡಲಿರುವ ಸ್ಮಾರ್ಟ್‌ಫೋನ್ ಗೂಗಲ್‌ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ ಬಳಸಿಕೊಳ್ಳಲಿದೆ. ನೋಕಿಯಾ ಮತ್ತೊಮ್ಮೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬಹುದೊಡ್ಡ ಮಟ್ಟದಲ್ಲಿ ಕಾಲಿಟ್ಟರಂತೂ ಆಪಲ್‌, ಸ್ಯಾಮ್‌ಸಂಗ್ ಮತ್ತು ಇತರೆ ಹಲವು ಮೊಬೈಲ್‌ ಪ್ಲೇಯರ್‌ಗಳ ವಹಿವಾಟನ್ನು ಕಡಿತಗೊಳಿಸುವಲ್ಲಿ ಸಂಶಯವಿಲ್ಲ. ಆದರೆ ಎಚ್‌ಎಂಡಿಯು ಡಿವೈಸ್ ತಯಾರಿಸುವಲ್ಲಿ ವಿನ್ಯಾಸದ ಮೇಲೆ ಗಮನಹರಿಸುವುದರ ಮೇಲೆ ನಿಂತಿದೆ.

2017ಕ್ಕೆ ನೋಕಿಯಾ ಸ್ಮಾರ್ಟ್‌ಫೋನ್‌ ಪುನರಾಗಮನ: ಆಪಲ್‌, ಸ್ಯಾಮ್‌ಸಂಗ್‌ಗೆ  ಹೊಡೆತ!

ನೋಕಿಯಾ ಅನುಭವಿ ಆದ ನುಮ್ಮೆಲಾ 'ರವರು ಎಚ್‌ಎಂಡಿ, ನೋಕಿಯಾ ಬ್ರ್ಯಾಂಡ್‌ನಲ್ಲಿ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡುವ ಕುರಿತು ಮಾತನಾಡಿ " ಬಳಕೆದಾರರು ವಿವಿಧ ಸ್ಮಾರ್ಟ್‌ಫೋನ್‌ಗಳನ್ನು ಇಂದು ಬಳಸುತ್ತಿರಬಹುದು. ಆದರೆ ಅವರು ನಿಜವಾಗಲು ಬ್ರ್ಯಾಂಡ್ ಮೇಲಿನ ಪ್ರೀತಿಯಿಂದ, ನಿಷ್ಠೆಯಿಂದ ಬಳಸುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ.

ನೋಕಿಯಾ 1100; ಬ್ಯಾಕ್‌ ಟು ಸೇಲ್‌

ಆದ್ರೆ ನೋಕಿಯಾ ಪ್ರಿಯರು ಅರ್ಥ ಮಾಡಿಕೊಳ್ಳಲೇಬೇಕಾದ ವಿಷಯವೊಂದಿದೆ. ನೀವು ಅಂದು ಕೊಂಡಹಾಗೆ ನೋಕಿಯಾ ಸ್ಮಾರ್ಟ್‌ಫೋನ್‌ ತಯಾರಿಸುತ್ತಿಲ್ಲ. ಎಚ್‌ಎಂಡಿ ಗ್ಲೋಬಲ್‌ ತನ್ನದೇ ಬಂಡವಾಳ ಹೂಡಿ ಸ್ಮಾರ್ಟ್‌ಫೋನ್‌ ಅನ್ನು ತಯಾರಿಸುತ್ತದೆ. ಆದರೆ ಸ್ಮಾರ್ಟ್‌ಫೋನ್‌ ಅನ್ನು ಮಾರಾಟ ಮಾಡುವುದು ಮಾತ್ರ ಪ್ರಖ್ಯಾತ ನೋಕಿಯಾ ಬ್ರ್ಯಾಂಡ್‌ ಹೆಸರಿನಲ್ಲಿ. ಇದರಲ್ಲಿ ನೋಕಿಯಾ ಬಂಡವಾಳ ಶೂನ್ಯ. ಇನ್ನು ನೋಕಿಯಾ ತನ್ನ ಬ್ರ್ಯಾಂಡ್ ನೀಡುವುದಕ್ಕೆ ಎಚ್‌ಎಂಡಿ ಗ್ಲೋಬಲ್‌ ಇಂತಿಷ್ಟು ಕಮಿಷನ್‌ ನೀಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2017ಕ್ಕೆ ನೋಕಿಯಾ ಸ್ಮಾರ್ಟ್‌ಫೋನ್‌ ಪುನರಾಗಮನ: ಆಪಲ್‌, ಸ್ಯಾಮ್‌ಸಂಗ್‌ಗೆ  ಹೊಡೆತ!

ಎಚ್‌ಎಂಡಿ, ಸ್ಮಾರ್ಟ್‌ ಕನೆಕ್ಟ್ ಎಲ್‌ಪಿ ಮಾಲೀಕತ್ವದ ಕಂಪನಿ ಆಗಿದ್ದು, ಜೀನ್ ಫ್ರಾಂಕೋಯಿಸ್ ಬೆರಿಲ್ ರವರು ಖಾಸಗಿ ಷೇರುಗಳ ನಿಧಿಯಿಂದ ಕಂಪನಿ ನಡೆಸುತ್ತಿದ್ದಾರೆ. ಇವರು ಈ ಹಿಂದೆ ನೋಕಿಯಾ ವರ್ಲ್ಡ್‌ ಲೀಡಿಂಗ್‌ ಪೂರೈಕೆ ಸರಣಿ ನಿರ್ವಹಣೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಭವಿಷ್ಯದ ನೋಕಿಯಾ ಸ್ಮಾರ್ಟ್‌ಫೋನ್‌ಗೆ ಇತರೆ ಎಚ್‌ಎಂಡಿ ಮ್ಯಾನೇಜರ್‌ಗಳು ಸ್ವಂತಃ ಹಣ ಹೂಡುತ್ತಿದ್ದಾರೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Nokia is bracing for a smartphone comeback in 2017 with HMD Global. To know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X