ಜಿಯೋ ಎಫೆಕ್ಟ್..ಏರ್‌ಟೆಲ್ ಫೈಟ್..ಮಾರಾಟವಾದ "ಟೆಲಿನಾರ್"!!

ಕಡಿಮೆ ದರದಲ್ಲಿ ಸೇವೆಯನ್ನು ನೀಡುತ್ತಿದ್ದ ಟೆಲಿನಾರ್ ಪೈಪೋಟಿ ಎದುರಿಸಲಾಗದೆ ಇದೀಗ ಏರ್‌ಟೆಲ್ ಪಾಲಾಗುತ್ತಿದೆ.!!

Written By:

ಒಂದು ಕಾಲದಲ್ಲಿ ಜಿಯೋನಂತೆಯೆ ಹೆಸರು ಮಾಡಿ ಗ್ರಾಹಕರ ಮನಗೆದ್ದಿದ್ದ ಟೆಲಿಕಾಂ ಸಂಸ್ಥೆ ಟೆಲಿನಾರ್ ಕಂಪೆನಿ ಭಾರತದಿಂದ ಕಾಲ್ಕೀಳುತ್ತಿದೆ.ಹೌದು, ಕಡಿಮೆ ದರದಲ್ಲಿ ಸೇವೆಯನ್ನು ನೀಡುತ್ತಿದ್ದ ಟೆಲಿನಾರ್ ಪೈಪೋಟಿ ಎದುರಿಸಲಾಗದೆ ಇದೀಗ ಏರ್‌ಟೆಲ್ ಪಾಲಾಗುತ್ತಿದೆ.!!

ಬಹುಬೇಗ ಹೆಸರ ಮಾಡಿದ ಟೆಲಿಕಾಂ ಕಂಪೆನಿಗಳ ಪೈಕಿ ಟೆಲಿನಾರ್ ಕಂಪೆನಿ ಕೂಡ ಒಂದು. ಎಮ್‌ಟಿಎಸ್ ಜೊತೆಯಲ್ಲಿಯೇ ಟೆಲಿಕಾಂಗೆ ಎಂಟ್ರಿ ನೀಡಿದ ಟೆಲಿನಾರ್ ಸೆಕೆಂಡ್‌ಗಳ ಲೆಕ್ಕದಲ್ಲಿ ಕರೆ ಸೇವೆಯನ್ನು ಒದಗಿಸಿ ಭಾರಿ ಹೆಸರು ಮಾಡಿತ್ತು. ಆದರೆ, ಈಗ ಟೆಲಿಕಾಂ ಪೈಪೋಟಿಯಲ್ಲಿ ನಿಲ್ಲಲಾಗದೆ ದೂರಸರಿಯುತ್ತಿದೆ.!!

ಜಿಯೋ ಎಫೆಕ್ಟ್..ಏರ್‌ಟೆಲ್ ಫೈಟ್..ಮಾರಾಟವಾದ

ಫೇಸ್‌ಬುಕ್ ಸಮೀಕ್ಷೆ...ಪ್ರಪಂಚದಲ್ಲಿಯೇ ಅತಿಹೆಚ್ಚು ಫಾಲೊವರ್ಸ್ ಹೊಂದಿರುವ ವ್ಯಕ್ತಿ ಮೋದಿ!!

ಆಂಧ್ರ, ಬಿಹಾರ್, ಗುಜರಾತ್ ಮತ್ತು ಯುಪಿ ರಾಜ್ಯಗಳಲ್ಲಿ ಈಗಲೂ ತನ್ನ ಅಸ್ತಿತ್ವ ಹೊಂದಿದ್ದ ಟೆಲಿನಾರ್ ಸಂಸ್ಥೆ ಪ್ರಸ್ತುತ 44 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು, ಆದರೆ, ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬಂದನಂತರ ಸಂಪೂರ್ಣ ಲಾಸ್ ಆಗಿ ಇದೀಗ ಮಾರುವ ಸ್ಥಿತಿಗೆ ಬಂದು ನಿಂತಿದೆ.

ಜಿಯೋ ಎಫೆಕ್ಟ್..ಏರ್‌ಟೆಲ್ ಫೈಟ್..ಮಾರಾಟವಾದ

ಇನ್ನು ಈ ಬಗ್ಗೆ ಮಾತನಾಡಿರುವ ಏರ್‌ಟೆಲ್ ಸಿಇಒ ಗೊಪಾಲ್ ವಿಟ್ಟಲ್, ಟೆಲಿನಾರ್ ಗ್ರಾಹಕರು ದೇಶದ ನಂಬರ್‌ ಒನ್ ಟೆಲಿಕಾಂ ಮತ್ತು ಹೆಚ್ಚು ವಿಸ್ತಾರವಿರುವ ಸಂಸ್ಥೆಯ ಸೇವೆಗಳನ್ನು ಟೆಲಿನಾರ್ ಗ್ರಾಹಕರು ಅನುಭವಿಸಲಿದ್ದಾರೆ. ಪ್ರಪಂಚದ ಗುಣಮಟ್ಟದ ಸೇವೆಗೆ ಅವರಿಗೆ ಸ್ವಾಗತ ಎಂದು ಹೇಳಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
ಕಡಿಮೆ ದರದಲ್ಲಿ ಸೇವೆಯನ್ನು ನೀಡುತ್ತಿದ್ದ ಟೆಲಿನಾರ್ ಪೈಪೋಟಿ ಎದುರಿಸಲಾಗದೆ ಇದೀಗ ಏರ್‌ಟೆಲ್ ಪಾಲಾಗುತ್ತಿದೆ.!!
Please Wait while comments are loading...
Opinion Poll

Social Counting