ಹೊಸ ಮೊಬೈಲ್‌ ಕನೆಕ್ಷನ್‌ಗೆ ಆಧಾರ್ e-KYC: ಸರ್ಕಾರದಿಂದ ಅನುಮತಿ

By Suneel
|

ಸರ್ಕಾರಿ ಇಲಾಖೆಗಳಲ್ಲಿ ಮಾತ್ರವಲ್ಲದೇ ಎಲ್ಲಾ ಕ್ಷೇತ್ರಗಳು, ಖಾಸಗಿ ಕಂಪನಿಗಳ ಸೇವೆಯಲ್ಲೂ ಸಹ ಪೇಪರ್‌ ಕೆಲಸಗಳನ್ನು ಕಡಿಮೆ ಮಾಡಲೆಂದು ನರೇಂದ್ರ ಮೋದಿ'ರವರು ಡಿಜಿಟಲ್‌ ಇಂಡಿಯಾ ಅಭಿಯಾನ ಆರಂಭಿಸಿದರು.

ಅಂತೂ ಇಂತೂ ಪೇಪರ್‌ ವರ್ಕ್‌ ಎಲ್ಲಾ ಇಲಾಖೆಗಳಲ್ಲೂ ಕಡಿಮೆಯಾಗುತ್ತಿರುವುದಕ್ಕೆ ಸಾಕ್ಷಿಯಾಗಿ ಸರ್ಕಾರ ಹೊಸ ಮೊಬೈಲ್ ಕನೆಕ್ಷನ್‌ಗಳಿಗೆ ಕೇವಲ ಆಧಾರ್ e-KYC ಯಿಂದ ಅವಕಾಶ ನೀಡುತ್ತಿದೆ. ಪೇಪರ್‌ಗಳ ಅವಶ್ಯಕತೆ ಇಲ್ಲದೆಯೇ ನೆಡೆಯುವ ಸೇವೆಯ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಸ್ಮಾರ್ಟ್‌ಫೋನ್‌ ಚಾರ್ಜ್ ಮಾಡಲು ನೀರು ಮತ್ತು ಉಪ್ಪು ಸಾಕು!

ಆಧಾರ್ ಕಾರ್ಡ್‌

ಆಧಾರ್ ಕಾರ್ಡ್‌

ಮೊಬೈಲ್‌ ಬಳಕೆದಾರರು ವ್ಯಾಲಿಡೇಟ್, ಆಕ್ಟಿವೇಟ್‌, ಹೊಸ ಪ್ರೀಪೇಡ್‌ ಮತ್ತು ಪೋಸ್ಟ್ ಪೇಡ್‌ ಮೊಬೈಲ್‌ ಕನೆಕ್ಷನ್‌ಗಾಗಿ ಯಾವುದೇ ಪೇಪರ್‌ ಮತ್ತು ಜೆರಾಕ್ಸ್‌ಗಳನ್ನು ನೀಡುವ ಬದಲು ಇನ್ನುಮುಂದೆ ಆಧಾರ್ ಕಾರ್ಡ್‌ ಮತ್ತು ಫಿಂಗರ್‌ ಪ್ರಿಂಟ್‌ ನೀಡಿದರೆ ಸಾಕು.

ಎಲ್ಲಾ ಅಪ್ಲಿಕೇಶನ್‌ಗಳಿಗೂ e-KYC

ಎಲ್ಲಾ ಅಪ್ಲಿಕೇಶನ್‌ಗಳಿಗೂ e-KYC

ಸರ್ಕಾರ ನೆನ್ನೆ (ಆಗಸ್ಟ್‌ 16) ಆನ್‌ಲೈನ್ ಪ್ರೋಸೆಸ್‌ ಅಪ್ಲಿಕೇಶನ್‌ಗಾಗಿ ಮತ್ತು ದೃಢೀಕರಣದ ವೇಗಕ್ಕಾಗಿ ಚಂದಾದಾರರಿಗೆ ಸರಳವಾಗಲೆಂದು e-KYC ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ.

 ಸಿಮ್‌ ಆಕ್ಟಿವೇಶನ್‌

ಸಿಮ್‌ ಆಕ್ಟಿವೇಶನ್‌

ಸ್ಮಾರ್ಟ್‌ಫೋನ್ ಬಳಕೆದಾರರ ಯಾವುದೇ ರೀತಿಯ ಸೇವೆಗಳ ಆಕ್ಟಿವೇಶನ್ ಮತ್ತು ಸಿಮ್‌ ಆಕ್ಟಿವೇಶನ್‌ಗಾಗಿ ಪೇಪರ್‌ ಡಾಕ್ಯುಮೆಂಟ್‌ ಪ್ರೊಸೆಸ್ ಅಂತ್ಯಗೊಳ್ಳಲಿದ್ದು, ಶೀಘ್ರವಾಗಿ KYC ಪರಿಶೀಲನೆ ನೆಡೆಸಿ ಸಿಮ್‌ ಆಕ್ಟಿವೇಶನ್‌ ಮಾಡಲಿದೆ.

 e-KYC

e-KYC

e-KYC ಯಲ್ಲಿ ಗ್ರಾಹಕರ ಆಧಾರ್‌ ನಂಬರ್‌ ಜೊತೆಗೆ ಬಯೋಮೆಟ್ರಿಕ್ ಆನ್‌ಲೈನ್‌ ದೃಢೀಕರಣವನ್ನು UIDAI 'ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಸಹಿ ಮಾಡಿದ ಡಿಜಿಟಲ್ ಫೋಟೋಗ್ರಾಫ್‌ ನೊಂದಿಗೆ ಮೊಬೈಲ್ ಆಪರೇಟರ್‌ಗಳಿಗೆ ನೀಡುತ್ತದೆ.

UIDAI

UIDAI

UIDAI ನೀಡುವ ಡಿಜಿಟಲ್‌ ಸಹಿಯ ಎಲೆಕ್ಟ್ರಾನಿಕ್‌ KYC ಡಾಟಾ ಮಷಿನ್‌ ರೀಡ್‌ ಮಾಡುವುದಾಗಿದ್ದು, ಲೈಸೆನ್ಸ್‌ ನೀಡಲು ಗ್ರಾಹಕರ ವಿವರಣೆಯನ್ನು ನೇರವಾಗಿ ಸ್ಟೋರ್‌ ಮಾಡುವ ಕ್ರಮ ಇದಾಗಿದೆ.

ಸೆಲ್ಯೂಲಾರ್ ಆಪರೇಟರ್ಸ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ

ಸೆಲ್ಯೂಲಾರ್ ಆಪರೇಟರ್ಸ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ

ಭಾರತದ ಸೆಲ್ಯೂಲಾರ್ ಆಪರೇಟರ್ಸ್‌ ಅಸೋಸಿಯೇಶನ್‌ನ ಪ್ರಧಾನ ನಿರ್ದೇಶಕರಾದ 'ರಾಜನ್‌ ಮ್ಯಾಥಿವ್ಸ್‌' ಈ e-KYC ಜಾರಿಯಿಂದ ಎಲ್ಲಾ ಮಧ್ಯಸ್ಥಗಾರರಿಗೆ ಸರಾಗವಾಗಿ ಆಕ್ಟಿವೇಶನ್ ಮಾಡಲು, ಸುಲಭವಾಗಿ ಪರಿಶೀಲನೆ ನಡೆಸಲು ಹಾಗೂ ಭದ್ರತೆ ಹೆಚ್ಚಿಸಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

 ಪರಿಶೀಲನೆ

ಪರಿಶೀಲನೆ

e-KYC ಮೂಲಕ ನಡೆಸಲಾಗುವ ಎಲ್ಲಾ ಪರಿಶೀಲನೆ ಕೇವಲ 8-10 ಗಂಟೆಗಳಲ್ಲಿ ನಡೆಯುತ್ತದೆ.

 ಭಾರತಿ ಏರ್‌ಟೆಲ್‌

ಭಾರತಿ ಏರ್‌ಟೆಲ್‌

ಆಧಾರ್‌ ಆಧಾರಿತ e-KYC ಪರಿಹಾರವನ್ನು ಈ ವಾರದಿಂದಲೇ ಭಾರತಿ ಏರ್‌ಟೆಲ್‌ ಜಾರಿಗೊಳಿಸುತ್ತಿದೆ ಎಂದು ಭಾರತ ಮತ್ತು ದಕ್ಷಿಣ ಏಷಿಯಾ ಏರ್‌ಟೆಲ್‌ ನಿರ್ವಹಣ ವ್ಯವಸ್ಥಾಪಕ ಮತ್ತು ಸಿಇಓ 'ಗೋಪಾಲ್‌ ವಿಠಲ್‌' ಹೇಳಿದ್ದಾರೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್ ಏರ್‌ಪ್ಲೇನ್‌ಗೂ ಆಗಸದ ಏರೋಪ್ಲೇನ್‌ಗೂ ಏನಿದು ಲಿಂಕ್?ಸ್ಮಾರ್ಟ್‌ಫೋನ್ ಏರ್‌ಪ್ಲೇನ್‌ಗೂ ಆಗಸದ ಏರೋಪ್ಲೇನ್‌ಗೂ ಏನಿದು ಲಿಂಕ್?

ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್ಫ್ಲಿಪ್‌ಕಾರ್ಟ್‌ನಲ್ಲಿ ಲೀಕೊ ಸೂಪರ್ ಫೋನ್ಸ್ ಮೇಲೆ ವಿಶೇಷ ಆಫರ್

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
Now Government allows new mobile connections with just Aadhaar eKYC. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X