ಸೆಕೆಂಡ್ಸ್‌ನಲ್ಲಿ ಮೊಬೈಲ್ ಬ್ಯಾಟರಿ ಫುಲ್: ವಿಸ್ಮಯಗೊಳಿಸುವ ಟೆಕ್ನಾಲಜಿ ಯಾವುದು ಗೊತ್ತಾ?

ರ್ಟ್‌ಫೊನ್ ಇಲ್ಲದೇ ಕೇವಲ ಒಂದು ದಿನ ಕಳೆಯಲು ನಮಗೆ ಸಾಧ್ಯವಿಲ್ಲ ಎನ್ನುವಷ್ಟು ಎಲ್ಲರೂ ಬದಲಾಗಿದದ್ದೇವೆ. ಸ್ಮಾರ್ಟ್‌ಫೊನ್‌ನಲ್ಲಿ ಚಾರ್ಜ್ ಇಲ್ಲದೆ ಅದು ವರ್ಕ್ ಮಾಡೋಲ್ಲಾ ಎನ್ನುವ ಯೋಚನೆಯೇ ನಮಗೆ ಸಹಿಸಲಾಗದು.

|

ರಾತ್ರಿ ಮಲಗುವ ಮುನ್ನ ಚಾರ್ಜ್ ಹಾಕಿ ಬೆಳಿಗ್ಗೆ ಎದ್ದು ನಿಮ್ಮ ಮೊಬೈಲ್ ನೋಡಿದ ನಂತರ ನಿಮ್ಮ ಬೆಳಗಿನ ಮೂಡ್ ಬದಲಾಗುತ್ತದೆ!! ಹೇಗೆ ಎನ್ನುತ್ತೀರಾ? ಉದಾಹರಣೆಗೆ, ನಿಮ್ಮ ಮೊಬೈಲ್ ಫುಲ್ ಚಾರ್ಜ್(ಬ್ಯಾಟರಿ) ಆಗಿದ್ದಾಗ ನಿಮ್ಮ ಮೂಡ್ ಹೇಗಿರುತ್ತದೆ? ಅಥವಾ ಯಾವುದೊ ಕಾರಣದಿಂದ ನಿಮ್ಮ ಮೊಬೈಲ್ ಚಾರ್ಜ್ ಆಗಿಲ್ಲದಿದ್ದರೆ ನಿಮ್ಮ ಮೂಡ್ ಹೇಗಿರುತ್ತದೆ.? ಇವಾಗ ಯೋಚಿಸಿ ಮೊಬೈಲ್ ನೋಡಿ ನಿಮ್ಮ ಬೆಳಗಿನ ಮೂಡ್ ಹೇಗೆ ಬದಲಾಯಿತು ತಿಳಿಯಿರಿ!!

ಹೌದು, ಸ್ಮಾರ್ಟ್‌ಫೊನ್ ಇಲ್ಲದೇ ಕೇವಲ ಒಂದು ದಿನ ಕಳೆಯಲು ನಮಗೆ ಸಾಧ್ಯವಿಲ್ಲ ಎನ್ನುವಷ್ಟು ಎಲ್ಲರೂ ಬದಲಾಗಿದದ್ದೇವೆ. ಸ್ಮಾರ್ಟ್‌ಫೊನ್‌ನಲ್ಲಿ ಚಾರ್ಜ್ ಇಲ್ಲದೆ ಅದು ವರ್ಕ್ ಮಾಡೋಲ್ಲಾ ಎನ್ನುವ ಯೋಚನೆಯೇ ನಮಗೆ ಸಹಿಸಲಾಗದು. ಎಲ್ಲೋ ಹೊರಗೆ ಹೋಗಬೇಕಿತ್ತು ಆದರೆ ಮೊಬೈಲ್‌ನಲ್ಲಿ ಚಾರ್ಜ್ ಇಲ್ಲ. ಮೊಬೈಲ್‌ ಚಾರ್ಜ್ ಆಗೋಕೆ ಕನಿಷ್ಟ 2 ಗಂಟೆಗಳಾದರು ಬೇಕು. ಅಲ್ಲಿಯವರೆಗೂ ಏನು ಮಾಡುವುದು? ಎಂದು ಚಿಂತೆಗೆ ಒಳಗಾಗುತ್ತೀರಾ. ಆದರೆ, ಇನ್ನು ಆ ಚಿಂತೆಯನ್ನು ಬಿಡಿ ಏಕೆಂದರೆ ಕೆಲವೆ ಸೆಕೆಂಡ್‌ಗಳಲ್ಲಿ ನಿಮ್ಮ ಸ್ಮಾರ್ಟ್‌ಫೊನ್ ಚಾರ್ಜ್ ಆಗುವ ಟೆಕ್ನಾಲಜಿ ಮೊಬೈಲ್‌ಗಳಿಗೆ ಬಂದಿದೆ.

ಸ್ಮಾರ್ಟ್‌ಫೋನ್ ಬ್ಯಾಟರಿ 10 ದಿನ ಖಾಲಿಯಾಗಲ್ಲ! ಇದು ಜಿಯೋನಿಯ ಜಿಂಗಾಲಾಲ!!

ಹಾಗಾದರೆ ಆ ನೂತನ ಟೆಕ್ನಾಲಜಿ ಯಾವುದು. ಅದರಿಂದ ಕೆಲವೇ ಸೆಕೆಂಡ್ಸ್‌ಗಳಲ್ಲಿ ಮೊಬೈಲ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಹೇಗೆ ಚಾರ್ಜ್ ಆಗುತ್ತವೆ ಎಂದು ಕೆಳಗಿನ ಸ್ಲೈಡರ್ ಮೂಲಕ ತಿಳಿಯಿರಿ

ನೂತನ ಸಂಶೋಧನೆ ಸಾಬೀತಾಗಿದೆ!!

ನೂತನ ಸಂಶೋಧನೆ ಸಾಬೀತಾಗಿದೆ!!

ಸೆಂಟ್ರಲ್ ಫ್ಲೋರಿಡಾ ವಿಶ್ವವಿಧ್ಯಾಲಯದ ಸಂಶೋಧಕರು ಎಲೆಕ್ಟ್ರಾನಿಕ್‌ ವಸ್ತುಗಳು ವೇಗವಾಗಿ ಚಾರ್ಜ್ ಆಗುವಂತೆ ಸಹಾಯಮಾಡುವ ಫ್ಲೆಕ್ಸಿಬಲ್ ಸೂಪರ್‌ಕೆಪಾಸಿಟರ್ಸ್ (Supercapacitors ) ಎನ್ನುವ ಸಾಧನವನ್ನು ಕಂಡುಹಿಡಿದಿದ್ದಾರೆ.

ಸೂಪರ್‌ಕೆಪಾಸಿಟರ್ಸ್ ಬ್ಯಾಟರಿ ಸ್ಮಾರ್ಟ್‌ಫೊನ್‌ಗೆ.

ಸೂಪರ್‌ಕೆಪಾಸಿಟರ್ಸ್ ಬ್ಯಾಟರಿ ಸ್ಮಾರ್ಟ್‌ಫೊನ್‌ಗೆ.

ಸಂಶೋಧಕರು ಹೇಳುವಂತೆ, ಸ್ಮಾರ್ಟ್‌ಫೊನ್ ಬ್ಯಾಟರಿಗಳಲ್ಲಿ ಸೂಪರ್‌ಕೆಪಾಸಿಟರ್ಸ್ ಸಾಧನವನ್ನು ಅಳವಡಿಸಿದರೆ ಕೆಲವೇ ಸೆಕೆಂಡ್ಸ್‌ಗಳಲ್ಲಿ ಮೊಬೈಲ್‌ ಚಾರ್ಜ್ ಆಗುತ್ತದೆ. ನಂತರ ಒಂದು ವಾರ ಮೊಬೈಲ್ ಚಾರ್ಜ್ಮಾಡುವ ಅವಶ್ಯಕತೆ ಸಹ ಇಲ್ಲ!!

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏನಿದು ಸೂಪರ್‌ಕೆಪಾಸಿಟರ್ಸ್

ಏನಿದು ಸೂಪರ್‌ಕೆಪಾಸಿಟರ್ಸ್

ಸೂಪರ್‌ಕೆಪಾಸಿಟರ್ಸ್ ಒಂದು ಸಣ್ಣ ಸಾಧನವಾಗಿದ್ದು, ಅತ್ಯಂತ ಹೆಚ್ಚು ಶಕ್ತಿಯನ್ನು ತನ್ನಲ್ಲಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಮತ್ತು ಇದು ಫ್ಲೆಕ್ಸಿಬಲ್ ಆಗಿದ್ದು, ಯಾವ ಆಕಾರದಲ್ಲಿಯೂ ಇದನ್ನು ರೂಪುಗೊಳಿಸಬಹುದು.

ನಿಮ್ಮ ಸ್ಮಾರ್ಟ್‌ಫೊನ್ ಬ್ಯಾಟರಿ ಬಾಳಿಕೆ

ನಿಮ್ಮ ಸ್ಮಾರ್ಟ್‌ಫೊನ್ ಬ್ಯಾಟರಿ ಬಾಳಿಕೆ

ಸೂಪರ್‌ಕೆಪಾಸಿಟರ್ಸ್ ಚಾರ್ಜಿಂಗ್ ಫೋನ್ ಹೊಂದಿದರೆ. ಕೆಲವೇ ಸೆಕೆಂಡ್‌ಗಳಲ್ಲಿ ನಿಮ್ಮ ಮೊಬೈಲ್‌ ಚಾರ್ಜ್ ಆಗುತ್ತದೆ. ಇದರಿಂದ ನಿಮ್ಮ ಸ್ಮಾರ್ಟ್‌ಫೊನ್ ಬ್ಯಾಟರಿ ಬಾಳಿಕೆ ಧೀರ್ಘಕಾಲ ಬರುತ್ತದೆ.

ಲೀಥಿಯಂ ಬ್ಯಾಟರಿ ಮತ್ತು ಸೂಪರ್‌ಕೆಪಾಸಿಟರ್ಸ್

ಲೀಥಿಯಂ ಬ್ಯಾಟರಿ ಮತ್ತು ಸೂಪರ್‌ಕೆಪಾಸಿಟರ್ಸ್

ಪ್ರಸ್ತುತ ಮೊಬೈಲ್‌ಗಳಲ್ಲಿ ಹೆಚ್ಚು ಜಾಗ ಪಡೆದುಕೊಂಡಿರುವ ಲೀಥಿಯಂ ಬ್ಯಾಟರಿಗಿಂತ 30,000 ಹೆಚ್ಚುಪಟ್ಟು ವೇಗದಲ್ಲಿ ಸೂಪರ್‌ಕೆಪಾಸಿಟರ್ಸ್ ಹೊಂದಿದ ಬ್ಯಾಟರಿಗಳು ಚಾರ್ಜ್ಆಗುತ್ತವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Yes! You no longer have to wait for long to charge your smartphone. This tiny device lets you charge your electronic device in just a few seconds.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X