ಬಿಡುಗಡೆಗೂ ಮೊದಲೇ ದಾಖಲೆ ಸೃಷ್ಟಿಸಿದ ಒನ್‌ಪ್ಲಸ್ 5!!

ಒನ್‌ಪ್ಲಸ್ 1 ಮತ್ತು ಒನ್‌ಪ್ಲಸ್‌ 3 ಸ್ಮಾರ್ಟ್‌ಫೋನ್‌ಗಳ ಮೂಲಕ ಈಗಾಗಲೇ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಒನ್‌ಪ್ಲಸ್ ಕಂಪೆನಿ ಒನ್‌ಪ್ಲಸ್ 5 ಫೋನ್‌ ಮೂಲಕ ಜನರನ್ನು ಸೆಳೆಯಲು ಬರುತ್ತಿದೆ.

|

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪ್ರಪಂಚದಲ್ಲಿಯೇ ತಲ್ಲಣ ಮೂಡುಸುತ್ತಿರುವ ಒನ್‌ಪ್ಲಸ್ 5 ಸ್ಮಾರ್ಟ್‌ಫೊನ್ ಬಿಡುಗಡೆಗೂ ಮೊದಲೇ ದಾಖಲೆ ಸೃಷ್ಟಿಸಿಸೆ.!! ಅತ್ಯಾಧುನಿಕ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್ ಒನ್‌ಪ್ಲಸ್ 5 ಚೀನಾದಲ್ಲಿ ಬಿಡುಗಡೆಗೆ ಮುನ್ನವೆ 3,00,000 ಪ್ರೀ ಬುಕ್ಕಿಂಗ್ ಆಗಿ ಬೆರಗುಗೊಳಿಸಿದೆ.!!

ಮಧ್ಯಮ ಬೆಲೆಗೆ ಅತ್ಯುತ್ತಮ ಫೀಚರ್ಸ್ ಹೊಂದಿರುವ ಒನ್‌ಪ್ಲಸ್ 5 ವಿಶ್ವದ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದು!! ಒನ್‌ಪ್ಲಸ್ 1 ಮತ್ತು ಒನ್‌ಪ್ಲಸ್‌ 3 ಸ್ಮಾರ್ಟ್‌ಫೋನ್‌ಗಳ ಮೂಲಕ ಈಗಾಗಲೇ ಜನಪ್ರಿಯತೆಯ ಉತ್ತುಂಗಕ್ಕೇರಿರುವ ಒನ್‌ಪ್ಲಸ್ ಕಂಪೆನಿ ಒನ್‌ಪ್ಲಸ್ 5 ಫೋನ್‌ ಮೂಲಕ ಜನರನ್ನು ಸೆಳೆಯಲು ಬರುತ್ತಿದೆ.

ಹಾಗಾದರೆ ಒನ್‌ಪ್ಲಸ್‌ 5 ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಸ್ಮಾರ್ಟ್‌ಫೋನ್ ವಿಶೇಷತೆ ಏನುಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

5.5. ಇಂಚ್ ಡಿಸ್‌ಪ್ಲೇ!!

5.5. ಇಂಚ್ ಡಿಸ್‌ಪ್ಲೇ!!

ಒನ್‌ಪ್ಲಸ್‌ 3 ಸ್ಮಾರ್ಟ್‌ಫೋನ್‌ 5.5. ಇಂಚ್ ಡಿಸ್‌ಪ್ಲೇ ಹೊಂದಿದ್ದು, 1440*2560 ಪಿಕ್ಸೆಲ್ ರೆಸ್ಯುಲೇಶನ್ ಹೊಂದಿದೆ. ಫುಲ್ ಹೆಚ್‌ಡಿ ಗುಣಮಟ್ಟವನ್ನು ಹೊಂದಿರುವ ಡಿಸ್‌ಪ್ಲೇ ಮಲ್ಟಿಮೀಡಿಯಾಗೆ ಹೆಚ್ಚು ಸಪೋರ್ಟ್ ನೀಡಲಿದೆ.!!

ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್!!

ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್!!

ಪ್ರಸ್ತುತ ಇರುವ ವಿಶ್ವದ ಅತ್ಯುತ್ತಮ ಪ್ರೊಸೆಸರ್ ಎಂದರೆ ಅದು ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್.!! ಒನ್‌ಪ್ಲಸ್‌ 5 ಸ್ಮಾರ್ಟ್‌ಫೋನ್ 2.4GHz ಆಕ್ಟ-ಕೋರ್ ಜೊತೆಗೆ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಹೋಂದಿದೆ. ಅಂದರೆ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಅತ್ಯದ್ಬುತವಾಗಿರಲಿದೆ.!!

RAM ಮತ್ತು ಆಂತರಿಕ ಮೆಮೊರಿ.!!

RAM ಮತ್ತು ಆಂತರಿಕ ಮೆಮೊರಿ.!!

ಅತ್ಯುತ್ತಮ ಫ್ಲಾಗ್‌ಶಿಪ್ ಫೋನ್‌ ಆಗಿರುವ ಒನ್‌ಪ್ಲಸ್‌ 5 8GB RAM ಮತ್ತು 64GB ಆಮತರಿಕ ಮೆಮೊರಿಯನ್ನು ಹೊಂದಿದೆ.!! ಇದೇ ಮೊದಲ ಬಾರಿಗೆ 8GB RAM ಹೊತ್ತು ಬರುತ್ತಿರುವ ಒನ್‌ಪ್ಲಸ್‌ ಮೊಬೈಲ್ ಈಗಾಗಲೇ ಎಲ್ಲಡೆ ಕುತೋಹಲ ಮೂಡಿಸಿದೆ.!!

ಕ್ಯಾಮೆರಾ ಹೇಗಿದೆ ಗೊತ್ತಾ?

ಕ್ಯಾಮೆರಾ ಹೇಗಿದೆ ಗೊತ್ತಾ?

ಒನ್‌ಪ್ಲಸ್‌ 5 ಸ್ಮಾರ್ಟ್‌ಫೊನ್ ಬಹುತೇಕ ಎಲ್ಲಾ ಫೀಚರ್ಸ್‌ಗಳಲ್ಲಿಯೂ ತನ್ನ ಹವಾ ತೋರಿಸಿದ್ದು, 16 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 23 ಮೆಗಾಫಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದೆ.!! ಅಂದರೆ ಚಿತ್ರಗಳ ಗುಣಮಟ್ಟಕ್ಕೆ ಒನ್‌ಪ್ಲಸ್ 5 ಮುಂದೆ ಸಾಟಿ ಯಾವುದಿದೆ?

4000mAh ಬ್ಯಾಟರಿ ಮತ್ತು ಬೆಲೆ?

4000mAh ಬ್ಯಾಟರಿ ಮತ್ತು ಬೆಲೆ?

ಒನ್‌ಪ್ಲಸ್‌ 5 ಸ್ಮಾರ್ಟ್‌ಫೊನ್ ಅತ್ಯುತ್ತಮ 4000mAh ಬ್ಯಾಟರಿ ಶಕ್ತಿ ಹೊಂದಿದ್ದು, ಸಂಪೂರ್ಣ 48 ಗಂಟೆಗಳ ಪೂರ್ಣ ಕಾರ್ಯಾಚರಣೆ ನೀಡಲಿದೆ ಎಂದು ಒನ್‌ಪ್ಲಸ್‌ ಕಂಪೆನಿ ಹೇಳಿಕೊಂಡಿದೆ. ಆದರೆ,ಸ್ಮಾರ್ಟ್‌ಫೊನ್ ಬೆಲೆಯ ಬಗ್ಗೆ ನಿಖರ ಮಾಹಿತಿ ಹೊರಬಿದ್ದಿಲ್ಲ. ಮೂಲಗಳ ಪ್ರಕಾರ ಒನ್‌ಪ್ಲಸ್‌ 5 ಬೆಲೆ 30 ರಿಂದ 35 ಸಾವಿರ ರೂಪಾಯಿಗಳಾಗಿರಲಿದೆ.!!

Best Mobiles in India

English summary
OnePlus will take the wraps of OnePlus 5 on June 20, and the smartphone will be launched in India on June 22.to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X