ಭಾರತದ ಶೇ.83ರಷ್ಟು ಜನರು ಸ್ಮಾರ್ಟ್‌ಫೋನ್ ಬಳಕೆದಾರರಲ್ಲ!!

ಇಂದಿಗೂ ಕರೆ ಮತ್ತು ಎಸ್ಸೆಮ್ಮೆಸ್‌ನಂತಹ ಸೀಮಿತ ಸೌಲಭ್ಯಗಳಿರುವ ಮೊಬೈಲ್ ಬಳಸುವುದು ಹೆಚ್ಚು ಎಂಬ ಆಶ್ಚರ್ಯಕರ ಮಾಹಿತಿಯು PEW ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

Written By:

ನೂರಾರು ಸ್ಮಾರ್ಟ್‌ಫೋನ್‌ ಕಂಪೆನಿಗಳು, ಡಿಜಿಟಲ್ ಇಂಡಿಯಾದ ಅಲೆಯಲ್ಲಿ ತೇಲುತ್ತಿರುವ ಭಾರತದಲ್ಲಿ ನೂರು ಕೋಟಿಗೂ ಹೆಚ್ಚು ಮೊಬೈಲ್‌ಗಳಿವೆ.! ಆದರೆ, ಮೊಬೈಲ್ ಬಳಕೆದಾರರಲ್ಲಿ ಶೇ.83ರಷ್ಟು ಮಂದಿ ಇಂದಿಗೂ ಸ್ಮಾರ್ಟ್‌ಫೋನ್ ಬಳಕೆದಾರರಲ್ಲ!

ಹೌದು, ಮೂಲಭೂತ ಸೌಲಭ್ಯಗಳಷ್ಟೇ ಹೊಂದಿರುವ ಮೊಬೈಲ್‌ಗಳೇ ಭಾರತೀಯರ ಜನರ ಬಳಿ ಇವೆ. ಅವರು ಇಂದಿಗೂ ಕರೆ ಮತ್ತು ಎಸ್ಸೆಮ್ಮೆಸ್‌ನಂತಹ ಸೀಮಿತ ಸೌಲಭ್ಯಗಳಿರುವ ಮೊಬೈಲ್ ಬಳಸುವುದು ಹೆಚ್ಚು ಎಂಬ ಆಶ್ಚರ್ಯಕರ ಮಾಹಿತಿಯು PEW ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಭಾರತದ ಶೇ.83ರಷ್ಟು ಜನರು ಸ್ಮಾರ್ಟ್‌ಫೋನ್ ಬಳಕೆದಾರರಲ್ಲ!!

ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್‌ಫೋನ್ ಇರುವುದು ಇಂದಿನ ದಿನಗಳಲ್ಲಿ ಕಾಮನ್. ಕಂಪ್ಯೂಟರ್‌ ಸಹ ಮೀರಿಸುವ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಇದ್ದರೂ. ದೊಡ್ಡ ಸಂಖ್ಯೆಯ ಮೊಬೈಲ್ ಬಳಕೆದಾರರು ಬಳಸುತ್ತಿರುವುದು ಬೇಸಿಕ್ ಫೀಚರ್ಸ್ ಹೊಂದಿರುವ ಫೋನ್‌ಗಳನ್ನು ಮಾತ್ರ ಎಂದು PEW ರಿಸರ್ಚ್ ಸಂಸ್ಥೆ ತಿಳಿಸಿದೆ.

ಭಾರತದ ಶೇ.83ರಷ್ಟು ಜನರು ಸ್ಮಾರ್ಟ್‌ಫೋನ್ ಬಳಕೆದಾರರಲ್ಲ!!

ಇನ್ನು ಇದರಿಂದ ಡಿಜಿಟಲ್‌ ಪೇಮೆಂಟ್ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರದ ಕಾರ್ಯಕ್ರಮಗಳು ಜನರನ್ನು ಎಷ್ಟರಮಟ್ಟಿಗೆ ತಲುಪುತ್ತಿವೆ ಎನ್ನುವುದರ ಪ್ರಶ್ನೆ ಈ ಅಂಕಿಅಂಶಗಳಿಂದ ಹುಟ್ಟಿಕೊಳ್ಳುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Internet usage and smartphone ownership in India has increased in the past two years, but to know more visit to kannada.gizbot.com
Please Wait while comments are loading...
Opinion Poll

Social Counting