ಏರ್ಟೆಲ್, ಐಡಿಯಾಗೆ ತಿರುಗುಬಾಣ ಬಿಟ್ಟ ಜಿಯೋ, ಟ್ರಾಯ್!!

ಟೆಲಿಕಾಂ ಕಂಪೆನಿಗಳಿಗೆ ಪಾರದರ್ಶಕ ಟ್ಯಾರಿಫ್‌ಗಳನ್ನು ನೀಡುವಂತೆ ಸೂಚನೆ ನೀಡಲು ಟ್ರಾಯ್ ಮುಂದಾಗಿದೆ.

|

ಜಿಯೋ ಮತ್ತು ಉಳಿದ ಟೆಲಿಕಾಂಗಳ ನಡುವೆ ನಡೆಯುತ್ತಿದ್ದ ದರಸಮರಕ್ಕೆ ಈಗ ಹೊಸದೊಂದು ಟ್ವಿಸ್ಟ್ ಸಿಕ್ಕಿದೆ.!! ಇಷ್ಟು ದಿವಸ ಜಿಯೋ ಪಾರದರ್ಶಕತೆ ಇಲ್ಲದ ನಿಯಮಬಾಹಿರ ಆಫರ್‌ಗಳನ್ನು ನೀಡುತ್ತಿದೆ ಎಂದು ಆರೋಪಿಸಿದ ಟೆಲಿಕಾಂ ಕಂಪೆನಿಗಳಿಗೆ ಇದೀಗ ಟ್ರಾಯ್ ತಿರುಗುಬಾಣ ಬಿಟ್ಟಿದೆ.!!

ಇನ್ನು ಆರು ವಾರಗಳಲ್ಲಿ ಟ್ರಾಯ್ ನೂತನ ಪರಭಕ್ಷಕ ಬೆಲೆ ನಿಯಮವನ್ನು ಜಾರಿಗೆ ತರಲು ಚಿಂತಿಸಿದ್ದು, ಟೆಲಿಕಾಂ ಕಂಪೆನಿಗಳಿಗೆ ಪಾರದರ್ಶಕ ಟ್ಯಾರಿಫ್‌ಗಳನ್ನು ನೀಡುವಂತೆ ಸೂಚನೆ ನೀಡಲು ಟ್ರಾಯ್ ಮುಂದಾಗಿದೆ. ಹಾಗಾದರೆ, ಏನಿದು ಪರಭಕ್ಷಕ ಬೆಲೆ ನಿಯಮ? ಪಾರದರ್ಶಕ ಟ್ಯಾರಿಫ್ ನಿಯಮ ಏಕೆ ಅನ್ವಯ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಟೆಲಿಕಾಂ ದರಸಮರ.!!

ಟೆಲಿಕಾಂ ದರಸಮರ.!!

ಜಿಯೋ ಮಾರುಕಟ್ಟೆಗೆ ಬಂದ ನಂತರ ಟೆಲಿಕಾಂನಲ್ಲಿ ಭಾರಿದರಸಮರ ಉಂಟಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ.!! ಹಾಗಾಗಿ, ಜಿಯೋಗೆ ವಿರುದ್ದವಾಗಿ ಇತರ ಎಲ್ಲಾ ಟೆಲಿಕಾಂ ಕಂಪೆನಿಗಳು ಹೊಸ ಹೊಸ ಆಫರ್ ನೀಡುತ್ತಿದ್ದು, ಟೆಲಿಕಾಂ ದರಸಮರದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.!!

ಏನಿದು ಪರಭಕ್ಷಕ ಬೆಲೆ?

ಏನಿದು ಪರಭಕ್ಷಕ ಬೆಲೆ?

ಯಾವುದೇ ಒಂದು ಟೆಲಿಕಾಂ ಕಂಪೆನಿ ಹೊಸದಾಗಿ ಟೆಲಿಕಾಂ ಮಾರುಕಟ್ಟೆಗೆ ಬಂದಾಗ ಈಗಾಗಲೇ ಇರುವ ಟೆಲಿಕಾಂ ಕಂಪೆನಿ ಕಡಿಮೆ ಬೆಲೆಗೆ ಸೇವೆ ನೀಡಲು ಮುಂದಾಗುತ್ತವೆ. ಇದರಿಂದ ಹೊಸ ಕಂಪೆನಿ ಮುಚ್ಚಿಹೋಗಬೇಕಾದ ಪರಿಸ್ಥಿತಿ ಬರುತ್ತದೆ.!!ಇದಕ್ಕೆ ಪರಭಕ್ಷಕ ಬೆಲೆ ನಿಯಮ ಎನ್ನುತ್ತಾರೆ.!!

ಜಿಯೋ ವಿರುದ್ದ ಸೋತ ಏರ್‌ಟೆಲ್!!

ಜಿಯೋ ವಿರುದ್ದ ಸೋತ ಏರ್‌ಟೆಲ್!!

ಜಿಯೋ ನೀಡುತ್ತಿರುವ ಟೆಲಿಕಾಂ ಸೇವೆ ನ್ಯಾಯಸಮ್ಮತವಾಗಿಲ್ಲ ಎಂದು ಏರ್‌ಟೆಲ್ ಮತ್ತು ಐಡಿಯಾ ಭಾರತದ ಸ್ಪರ್ಧೆ ಆಯೋಗ (CCI)ಕ್ಕೆ ದೂರು ಸಿಲ್ಲಿಸಿದ್ದವು. ಆದರೆ, ಆಯೋಗ ದೂರಿಗೆ ಮನ್ನಿಸದೇ, ಜಿಯೋ ನೀಡುತ್ತಿರುವ ಟೆಲಿಕಾಂ ಸೇವೆ ನ್ಯಾಯಸಮ್ಮತವಾಗಿದೆ ಎಂದು ಹೇಳಿತ್ತು.!!

ಜಿಯೋ ದೂರಿಗೆ ಗೆಲುವು ಇದು?

ಜಿಯೋ ದೂರಿಗೆ ಗೆಲುವು ಇದು?

ಜಿಯೋ ಕೂಡ ತನ್ನ ಆಫರ್‌ಗೆ ವಿರುದ್ದವಾಗಿ ಏರ್ಟೆಲ್ ನ್ಯಾಯಸಮ್ಮತವಲ್ಲದ ಟ್ಯಾರಿಫ್‌ಗಳನ್ನು ಬಿಡುಗಡೆ ಮಾಡುತ್ತಿದೆ. ತನ್ನದೇ ಗ್ರಾಹಕರಿಗೆ ತಾರತಮ್ಯ ಮಾಡುತ್ತಿದೆ ಎಂದು ಹೇಳಿ ಟ್ರಾಯ್‌ಗೆ ದೂರು ಸಲ್ಲಿಸಿತ್ತು. ಅದಕ್ಕೆ ಈಗ ಮನ್ನಣೆ ದೊರೆತಿದೆ.!!

ಟೆಲಿಕಾಂ'ಗೆ ಏಟು?

ಟೆಲಿಕಾಂ'ಗೆ ಏಟು?

ಈಗಾಗಲೇ ಏರ್‌ಟೆಲ್ ಸೇರಿದಂತೆ ಇತರ ಎಲ್ಲಾ ಟೆಲಿಕಾಂ ಕಂಪೆನಿಗಳು ಟ್ರಾಯ್ ನಿಯಮಗಳನ್ನು ಮೀರಿವೆ. ಹಾಗಾಗಿ, ನೂತನ ನಿಯಮಗಳನ್ನು ಜಾರಿಗೆ ತರಲು ಟ್ರಾಯ್ ನಿರ್ಧರಿಸಿದ್ದು, ಜಿಯೋ ವಿರುದ್ದ ಅಬ್ಬರಿಸುತ್ತಿರುವ ಉಳಿದೆಲ್ಲಾ ಟೆಲಿಕಾಂ ಕಂಪೆನಿಗಳು ಮೆತ್ತಗಾಗಲಿವೆ.!!

<strong>ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಇಂದಿನಿಂದ ಮಾರಾಟ!..ಚೀನಾ ಕಂಪೆನಿಗಳಿಗೆ ನಡುಕ!!</strong>ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಜೆ7 ಮ್ಯಾಕ್ಸ್ ಇಂದಿನಿಂದ ಮಾರಾಟ!..ಚೀನಾ ಕಂಪೆನಿಗಳಿಗೆ ನಡುಕ!!

Best Mobiles in India

English summary
Lately, mobile tariff has become contentious issue between Jio and rival telcos, each blaming the other of predatory pricing.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X