ಎಟಿಎಂನಿಂದ ಹಣ ವಿತ್‌ಡ್ರಾ ಮಿತಿ 10,000 ರೂ.ಗೆ ಏರಿಕೆ!!

ನೋಟು ಅಭಾವ ಸ್ವಲ್ಪ ಕಡಿಮೆಯಾದಂತೆ ಇದೀಗ ಹಣ ವಿತ್‌ಡ್ರಾ ಮಾಡುವ ಮಿತಿಯನ್ನು 10,000 ರೂಪಾಯಿಗಳಿಗೆ ಹೆಚ್ಚ

Written By:

500 ಮತ್ತು 1000 ರೂಪಾಯಿ ನೋಟು ನಿಷೇಧದ ನಂತರ ಎಟಿಎಂನಿಂದ ಹಣ ಡ್ರಾ ಮಾಡಲು ಇದ್ದ ಮಿತಿಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಎಟಿಎಂನಿಂದ ಹಣ ವಿತ್‌ಡ್ರಾ ಮಾಡುವ ಮಿತಿಯನ್ನು 10,000 ರೂಪಾಯಿಗಳಿಗೆ ಹೆಚ್ಚಿಸಿ ಜನತೆಗೆ ಸಿಹಿಸುದ್ದಿಯನ್ನು ನೀಡಿದೆ.

ಮೊದಲು 2000 ರೂಪಾಯಿಗಳನ್ನು ಮಾತ್ರ ಎಟಿಎಂನಿಂದ ವಿತ್‌ಡ್ರಾ ಮಾಡಲು ಅವಕಾಶ ನೀಡಿದ್ದ ಸರ್ಕಾರ ನಂತರ 4500 ರೂಪಾಯಿಗಳಿಗೆ ಹೆಚ್ಚಿಸಿತ್ತು. ಇದೀಗ ನೋಟು ಅಭಾವ ಸ್ವಲ್ಪ ಕಡಿಮೆಯಾದಂತೆ ಇದೀಗ ಹಣ ವಿತ್‌ಡ್ರಾ ಮಾಡುವ ಮಿತಿಯನ್ನು 10,000 ರೂಪಾಯಿಗಳಿಗೆ ಹೆಚ್ಚಿಸಿದೆ.

ಶಾಕ್‌ ಮೇಲೆ ಶಾಕ್‌ ನೀಡುತ್ತಿರುವ ನೋಕಿಯಾ!..ಆಂಡ್ರಾಯ್ಡ್ ಆಯ್ತು ಇದೀಗ?

ಎಟಿಎಂನಿಂದ ಹಣ ವಿತ್‌ಡ್ರಾ ಮಿತಿ 10,000 ರೂ.ಗೆ ಏರಿಕೆ!!

ಇನ್ನು ಬ್ಯಾಂಕಿನಿಂದ ಹಣ ಪಡೆಯಲು ಈ ಮೊದಲು ಇದ್ದ ನಿಯಮಗಳನ್ನು ಸಡಿಲಗೊಳಿಸಿರುವ ಆರ್‌ಬಿಐ, ಬ್ಯಾಂಕಿನಿಂದ 1,00,000 ರೂವರೆಗೂ ಹಣ ಬಿಡಿಸಿಕೊಳ್ಳುವ ಅವಕಾಶ ನೀಡಿದೆ.

ಎಟಿಎಂನಿಂದ ಹಣ ವಿತ್‌ಡ್ರಾ ಮಿತಿ 10,000 ರೂ.ಗೆ ಏರಿಕೆ!!

ನೋಟು ನಿಷೇಧದ ನಂತರ ನಗದು ವ್ಯವಸ್ಥೆಯು ಇದೀಗ ಸುಗಮವಾಗುತ್ತಿದ್ದು, ಹಣ ನಿಷೇಧದ ಪರಿಣಾಮಗಳು ಕಡಿಮೆಯಾಗಿವೆ. ಹಾಗಾಗಿ, ಹಣದ ಮೇಲಿದ್ದ ಮಿತಿಯನ್ನು ಹೆಚ್ಚುಮಾಡಲಾಗಿದೆ ಎಂದು ಆರ್‌ಬಿಐ ಸರ್‌ಕ್ಯುಲರ್ ಹೇಳಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
The limit on withdrawals from ATMs has been enhanced from the current limit of Rs.4,500 to Rs10,000 per day per card. to know more visit to kannada.gizbot.com
Please Wait while comments are loading...
Opinion Poll

Social Counting