ರಿಲಾಯನ್ಸ್ ಕಂಮ್ಯುನಿಕೇಷನ್: ಜಿಯೋಗೆ ಪೋರ್ಟ್‌ ಮಾಡದಿದ್ದರೇ ಅನ್‌ಲಿಮಿಟೆಡ್ ವಾಯ್ಸ್ ಕರೆ

ರಿಲಾಯನ್ಸ್ ಜಿಯೋಗೆ ಪೋರ್ಟ್‌ ಮೂಲಕ ತಮ್ಮ ಗ್ರಾಹಕರು ಪಾಲಾಯನ ಮಾಡದಂತೆ ತಡೆಯಲು ಟೆಲಿಕಾಂ ಆಪರೇಟರ್‌ಗಳು ಅನ್‌ಲಿಮಿಟೆಡ್‌ ವಾಯ್ಸ್ ಕರೆ ಆಫರ್ ನೀಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

By Suneel
|

ರಿಲಾಯನ್ಸ್ ಜಿಯೋ ಹೊಡೆತ, ರಿಲಾಯನ್ಸ್ ಕಂಮ್ಯುನಿಕೇಷನ್‌ಗೂ ಸಹ ತಟ್ಟಿದೆ. ರಿಲಾಯನ್ಸ್ ಕಂಮ್ಯುನಿಕೇಷನ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಲವು ನಷ್ಟಗಳ ಜೊತೆಗೆ, ನಿವ್ವಳ ಲಾಭದಲ್ಲಿ ಶೇ.28 ಅಂದರೆ 39 ಕೋಟಿ ಹಿನ್ನೆಡೆ ಅನುಭವಿಸಿದೆ. ಈ ನಷ್ಟಕ್ಕೆ ದೊಡ್ಡ ಪ್ರಮಾಣದಲ್ಲಿ ರಿಲಾಯನ್ಸ್ ಜಿಯೋ, ಟೆಲಿಕಾಂ ಮಾರುಕಟ್ಟೆಗೆ ಕಾಲಿರಿಸಿರುವುದೇ ಕಾರಣ.

ರಿಲಾಯನ್ಸ್ ಜಿಯೋಗೆ ಪೋರ್ಟ್‌ ಆಗದಂತೆ ತಮ್ಮ ಗ್ರಾಹಕರನ್ನು ತಮ್ಮಲ್ಲೇ ಉಳಿಸಿಕೊಳ್ಳಲು, ಏರ್‌ಟೆಲ್, ವೊಡಾಫೋನ್, ಐಡಿಯಾ ಸೆಲ್ಯುಲಾರ್, ಅನಿಲ್ ಅಂಬಾನಿ'ರವರ ರಿಲಾಯನ್ಸ್ ಕಂಮ್ಯುನಿಕೇಷನ್ ಟೆಲಿಕಾಂಗಳು ಇತ್ತೀಚೆಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್‌ಗಳನ್ನು ಗ್ರಾಹಕರಿಗಾಗಿ ಬಿಡುಗಡೆ ಮಾಡಿದ್ದವು.

ರಿಲಾಯನ್ಸ್ ಜಿಯೋ ಡಿಟಿಎಚ್ VS ಏರ್‌ಟೆಲ್ ಡಿಟಿಎಚ್: ಯಾವುದು ಉತ್ತಮ?

ರಿಲಾಯನ್ಸ್ ಜಿಯೋಗೆ ಪೋರ್ಟ್‌ ಮೂಲಕ ತಮ್ಮ ಗ್ರಾಹಕರು ಪಾಲಾಯನ ಮಾಡದಂತೆ ತಡೆಯಲು ಟೆಲಿಕಾಂ ಆಪರೇಟರ್‌ಗಳು ಅನ್‌ಲಿಮಿಟೆಡ್‌ ವಾಯ್ಸ್ ಕರೆ ಆಫರ್ ನೀಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧಿಯಾಗಿ ಇತರೆ ಟೆಲಿಕಾಂಗಳಿಂದ ಪ್ಲಾನ್‌ಗಳ ಲಾಂಚ್

ರಿಲಾಯನ್ಸ್ ಜಿಯೋಗೆ ಪ್ರತಿಸ್ಪರ್ಧಿಯಾಗಿ ಇತರೆ ಟೆಲಿಕಾಂಗಳಿಂದ ಪ್ಲಾನ್‌ಗಳ ಲಾಂಚ್

ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್‌ನಿಂದ ಇತರೆ ಟೆಲಿಕಾಂಗಳು ನಿದ್ರಾ ರಹಿತ ದಿನಗಳನ್ನು ಕಳೆಯುತ್ತಿವೆ. ತಮ್ಮ ಗ್ರಾಹಕರನ್ನು ಮೊಬೈಲ್‌ ನಂಬರ್ ಪೋರ್ಟ್‌ ಮೂಲಕ ಪಾಲಾಯನ ಮಾಡದಂತೆ ಉಳಿಸಿಕೊಳ್ಳಲು ಅನ್‌ಲಿಮಿಟೆಡ್ ಆಫರ್‌ಗಳಿಂದ ಆಕರ್ಷಿಸುತ್ತಿವೆ.

ಜಿಯೋಗೆ ಎದುರಾಗಿ, ಭಾರತಿ ಏರ್‌ಟೆಲ್, ವೊಡಾಫೋನ್, ಐಡಿಯಾ ಸೆಲ್ಯುಲಾರ್ ಮತ್ತು ಇತರೆ ಟೆಲಿಕಾಂಗಳು ಮಾತ್ರವಲ್ಲದೇ ರಿಲಾಯನ್ಸ್ ಕಂಮ್ಯುನಿಕೇಷನ್‌ ಸಹ ಈಗ ರೇಸ್‌ನಿಂದ ದೂರ ಉಳಿಯದೇ ಅನ್‌ಲಿಮಿಟೆಡ್ ವಾಯ್‌ ಕರೆ ಆಫರ್ ನೀಡುತ್ತಿದೆ.

ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್ ಆರಂಭ

ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್ ಆರಂಭ

ರಿಲಾಯನ್ಸ್ ಕಂಮ್ಯುನಿಕೇಷನ್, ವೈರ್‌ಲೆಸ್ ಆಪರೇಟರ್‌ಗಳಾದ ಎಂಟಿಎಸ್ ಮತ್ತು ಏರ್‌ಸೆಲ್ ಸಹಯೋಗದೊಂದಿಗೆ ಇತ್ತೀಚೆಗೆ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್ ಬಿಡುಗಡೆ ಮಾಡಿದೆ. ಜಿಯೋದ ಡಾಟಾ ಆಫರ್‌ ಎದುರಾಗಿ ಸ್ಪರ್ಧೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಲಾಯನ್ಸ್ ಕಂಮ್ಯುನಿಕೇಷನ್ ಅನ್‌ಲಿಮಿಟೆಡ್ ವಾಯ್ಸ್ ಕರೆ ದರ ರೂ.153

ರಿಲಾಯನ್ಸ್ ಕಂಮ್ಯುನಿಕೇಷನ್ ಅನ್‌ಲಿಮಿಟೆಡ್ ವಾಯ್ಸ್ ಕರೆ ದರ ರೂ.153

ರಿಲಾಯನ್ಸ್ ಕಂಮ್ಯುನಿಕೇಷನ್ ಗ್ರಾಹಕರು ತಮ್ಮ ನಂಬರ್‌ಗೆ ರೂ.153 ರೀಚಾರ್ಜ್‌ನಿಂದ ಅನ್‌ಲಿಮಿಟೆಡ್ ವಾಯ್ಸ್ ಕರೆ ಆಫರ್ ಪಡೆಯಬಹುದು. ಅಲ್ಲದೇ, ಈ ಹೊಸ 153 ರೂ ಪ್ಲಾನ್‌ನಿಂದ ಅತೀ ಕಡಿಮೆ ದರದಲ್ಲಿ ಅನ್‌ಲಿಮಿಟೆಡ್ ಕಾಲಿಂಗ್ ಬೆನಿಫಿಟ್‌ಗಳ ಆಫರ್ ಪಡೆಯಬಹುದು. ರಿಲಾಯನ್ಸ್ ಜಿಯೋದ ವೆಲ್ಕಮ್‌ ಆಫರ್‌ನಲ್ಲಿಯ ವಾಯ್ಸ್ ಕರೆ ಬೆನಿಫಿಟ್‌ಗಾಗಿಯೇ ಗ್ರಾಹಕರು ಪೋರ್ಟ್‌ ಮಾಡುವುದನ್ನು ಈ ಆಫರ್‌ನಿಂದ ತಪ್ಪಿಸಬಹುದು.

ಅನ್‌ಲಿಮಿಟೆಡ್ ವಾಯ್ಸ್ ಕರೆ ರಿಲಾಯನ್ಸ್ ನಂಬರ್‌ಗೆ ಮಾತ್ರ

ಅನ್‌ಲಿಮಿಟೆಡ್ ವಾಯ್ಸ್ ಕರೆ ರಿಲಾಯನ್ಸ್ ನಂಬರ್‌ಗೆ ಮಾತ್ರ

ಭಾರತಿ ಏರ್‌ಟೆಲ್‌ ರೀತಿ ಅಲ್ಲದೇ, ರಿಲಾಯನ್ಸ್ ಕಂಮ್ಯುನಿಕೇಷನ್ ಅನ್‌ಲಿಮಿಟೆಡ್ ವಾಯ್ಸ್ ಕರೆ ರಿಲಾಯನ್ಸ್ ನಂಬರ್‌ಗೆ ಮಾತ್ರ. ಆದರೆ ಇತರೆ ಟೆಲಿಕಾಂಗಳು ಇತರೆ ನೆಟ್‌ವರ್ಕ್‌ಗಳ ನಡುವೆ ಕರೆ ಮಾಡಲು ಅವಕಾಶ ನೀಡಿವೆ. ರಿಲಾಯನ್ಸ್ ಮಾತ್ರ ಈ ಆಫರ್‌ ಅನ್ನು ಕೇವಲ ರಿಲಾಯನ್ಸ್ ನಂಬರ್‌ಗೆ ಸೀಮಿತಗೊಳಿಸಿದೆ.

ಪ್ಲಾನ್ 1000 ನಿಮಿಷಗಳಿಗೆ ಇತರೆ ನಂಬರ್‌ಗೆ ಕರೆ ಮಾಡಲು ಮೀಸಲಿರಿಸಿದ್ದು, ಭಾರತದಾದ್ಯಂತ 28 ದಿನಗಳ ವ್ಯಾಲಿಡಿಟಿಯೊಂದಿಗೆ ಕರೆ ಮಾಡಬಹುದು.

ಆಫರ್ ಲಿಮಿಟೆಡ್ ಸಬ್‌ಸ್ಕ್ರೈಬರ್‌ಗಳಿಗೆ

ಆಫರ್ ಲಿಮಿಟೆಡ್ ಸಬ್‌ಸ್ಕ್ರೈಬರ್‌ಗಳಿಗೆ

ರಿಲಾಯನ್ಸ್ ಕಂಮ್ಯುನಿಕೇಷನ್ ಈ ಆಫರ್ ಅನ್ನು ಕೇವಲ ಆಯ್ಕೆಯ ವೃತ್ತಗಳಲ್ಲಿ ನೀಡಿತ್ತಿದ್ದು, ಕೊಲ್ಕತ್ತ, ದೆಹಲಿ, ತಮಿಳು ನಾಡು'ಗಳಲ್ಲಿ ಈ ಆಫರ್‌ ಅನ್ನು ಗ್ರಾಹಕರು ಪಡೆಯಬಹುದು. ಈ ಆಫರ್‌ ಅನ್ನು ಮುಂದಿನ ದಿನಗಳಲ್ಲಿ ಇತರೆ ವೃತ್ತಗಳಲ್ಲಿಯು ವಿಸ್ತರಿಸುವ ಬಗ್ಗೆ ಕಂಪನಿ ಹೇಳಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
RComm Rolls Out Unlimited Voice Calls to Retain Users from Porting to Reliance Jio. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X