ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7(ನೋಟ್ ಎಫ್ಇ): ಇನ್ನು ಜುಲೈ ಅಂತ್ಯದವರೆಗೂ ವಿಳಂಬ..!

By Akshatha J
|

ಜೂನ್ ಮೊದಲವಾರ ನವೀಕರಿಸಿದ ಗ್ಯಾಲಕ್ಸಿ 7(ನೋಟ್ ಎಫ್ಇ) ಜೂಲೈ 7 ರಂದು ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಸೋರಿಕೆಯಾಗಿತ್ತು. ಹಾಗು ವರದಿಗಳ ಪ್ರಕಾರ ಈ ತಿಂಗಳ (ಜೂನ್) 30 ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗುತಿತ್ತು.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7(ನೋಟ್ ಎಫ್ಇ):ಇನ್ನು ಜುಲೈ ಅಂತ್ಯದವರೆಗೂ ವಿಳಂಬ

ಕೊರಿಯಾದ ನ್ಯೂಸ್ 1 ರ, ಹೊಸ ವರದಿಯ ಪ್ರಕಾರ ಗ್ಯಾಲಕ್ಸಿ ನೋಟ್ ಎಫ್ಇ ಮತ್ತಷ್ಟು ವಿಳಂಬವಾಗುತ್ತದೆ. ಇನ್ನು ಈ ಹೊಸ ಮೊಬೈಲ್ ಗ್ರಾಹಕರ ಕೈ ಸೇರಲು ಜುಲೈ ಅಂತ್ಯದವರೆಗೂ ಕಾಯಬೇಕು ಎಂದು ವರದಿಗಳು ತಿಳಿಸಿದೆ.

ನಮ್ಮ ನಿರೀಕ್ಷೆಯ ಪ್ರಕಾರ,

ಗ್ಯಾಲಕ್ಸಿ ನೋಟ್ ಎಫ್ಇ , 3200mAh ಬ್ಯಾಟರಿ ಸಾಮರ್ಥ್ಯದಲ್ಲಿ ಹಾಗು ಮೊಬೈಲ್ ಮಾದರಿಯಲ್ಲಿ ಸಣ್ಣ ಬದಲಾವಣೆ ಆಗಬಹುದು. ಇನ್ನು ಈ ಮೊಬೈಲ್ 2016 ರಲ್ಲಿ ಬಿಡುಗಡೆಯಾದ ಮಾದರಿಗೆ ಹೋಲಿಕೆ ಆಗಬಹುದು ಎಂದು ಕೆಲವರ ಅಭಿಪ್ರಾಯವಾಗಿದೆ.

ವಿಳಂಬಕ್ಕೆ ಕಾರಣ

ಗ್ಯಾಲಕ್ಸಿ ನೋಟ್ ಎಫ್ಇ ಗೆ, ಕಂಪನಿ ನಿರೀಕ್ಷಿಸಿದ ಮಾದರಿಯಲ್ಲೆ ಬೇಡಿಕೆ ಹೆಚ್ಚಿದ್ದು ಒಂದು ಕಡೆಯಾದರೆ, ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ಎಸ್ 8 ಮತ್ತು ಗ್ಯಾಲಕ್ಸಿ ಎಸ್ 8 + ನಿಂದ ಆದಂತಹ ಯಶಸ್ಸು. ಹಾಗೂ ಗ್ಯಾಲಕ್ಸಿ ನೋಟ್ 7 ಕಡಿಮೆ ಬೆಲೆಯದ್ದಾಗಿದ್ದು, ಗ್ರಾಹಕರಿಂದ ಹೆಚ್ಚಿದ ಬೇಡಿಕೆಗಳೇ ಮೊಬೈಲ್ ವಿಳಂಬಕ್ಕೆ ಬಹುಮುಖ್ಯವಾದ ಕಾರಣ ಎಂದು ಹೇಳಲಾಗಿದೆ.

Best Mobiles in India

English summary
Refurbished Samsung Galaxy Note 7 aka Galaxy Note FE is likely to be delayed until the end of July.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X