50 ಮಿಲಿಯನ್ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಜಿಯೋ: ಮತ್ತೆ ಉಚಿತ ಕೊಡುಗೆ ಮುಂದುವರೆಯುವುದೇ..!

ಜಿಯೋ ಉಚಿತ ಸೇವೆಯನ್ನು ಅನುಭವಿಸಿದವರು, ದುಡ್ಡು ಕೊಟ್ಟು ಜಿಯೋ ಬಳಸವುದು ಸಂಶಯ ಎಂದು ಸಮೀಕ್ಷೆಯೂ ತಿಳಿಸಿದೆ.

Written By:

ಸಮೀಕ್ಷೆಯೊಂದರ ಪ್ರಕಾರ ಏಪ್ರಿಲ್ ನಂತರ ಜಿಯೋ ತನ್ನ ಗ್ರಾಹಕರಲ್ಲಿ ಸರಿ ಸುಮಾರು 50 ಮಿಲಿಯನ್ ಮಂದಿಯನ್ನು ಕಳೆದುಕೊಳ್ಳಲಿದೆ ಎನ್ನಲಾಗಿದೆ. ಉಚಿತ ಸೇವೆಯನ್ನು ಅನುಭವಿಸಿದವರು, ದುಡ್ಡು ಕೊಟ್ಟು ಜಿಯೋ ಬಳಸವುದು ಸಂಶಯ ಎಂದು ಸಮೀಕ್ಷೆಯೂ ತಿಳಿಸಿದೆ.

50 ಮಿಲಿಯನ್ ಗ್ರಾಹಕರನ್ನು ಕಳೆದುಕೊಳ್ಳುವ ಭಯದಲ್ಲಿ ಜಿಯೋ..!!!

ಓದಿರಿ: ಸೋನಿಯಿಂದ ಶಕ್ತಿಶಾಲಿ ಸ್ಮಾರ್ಟ್‌ಪೋನ್ ಬಿಡುಗಡೆ: 4K ಡಿಸ್‌ಪ್ಲೇ, ಸ್ನಾಪ್‍ಡ್ರಾಗನ್ 835 ಪ್ರೋಸೆಸರ್

ಇದಲ್ಲದೇ ಜಿಯೋ ನೆಟ್‌ವರ್ಕ್ ಸಹ ಉತ್ತಮವಾಗಿಲ್ಲ, ಕೆಲವು ಕಡೆ ಉತ್ತಮ ಸಿಗ್ನಲ್‌ಗಳನ್ನು ಹೊಂದಿಲ್ಲ. ಹೀಗಾಗಿ ಉಚಿತ ಸಮಯದಲ್ಲಿ ಮಾತನಾಡದೆ ಸುಮ್ಮನಿದ್ದ ಜನರು ಹಣ ಪಾವತಿ ಮಾಡಲು ಹಿಂದೆ ಮುಂದೆ ನೋಡಲಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಆರಂಭದಲ್ಲಿ ಉಚಿತ ಕೊಡುಗೆ:

ಮಾರುಕಟ್ಟೆಗೆ ಲಗ್ಗೆ ಇಡುವ ವೇಳೆ ಆಕರ್ಷಕ ‘ವೆಲ್‌ಕಮ್ ಆಫರ್' ನೀಡಿದ್ದ ರಿಲಯನ್ಸ್ ಮಾಲೀಕತ್ವದ ಜಿಯೋ ಮೊದಲ ಮೂರು ತಿಂಗಳು ಉಚಿತ ಸೇವೆಯನ್ನು ನೀಡಿತ್ತು. ಇದಾದ ನಂತರದಲ್ಲಿ ಹೊಸ ವರ್ಷದ ಕೊಡುಗೆಯಾಗಿ 'ಹ್ಯಾಪಿ ನ್ಯೂ ಇಯರ್' ಆಫರ್ ಹೆಸರಿನಲ್ಲಿ ಮತ್ತೆ ಉಚಿತ ಸೇವೆ ಮುಂದುವರೆಸಿತ್ತು.

ಜಿಯೋ 100 ಮಿಲಿಯನ್ ಗ್ರಾಹಕರು:

ಆರಂಭವಾದ 6 ತಿಂಗಳು ಉಚಿತ ಕರೆ ಮತ್ತು ಡಾಟಾ ಆಫರ್ ನೀಡಿದ್ದ ರಿಲಾಯನ್ಸ್ ಜಿಯೋ 100 ಮಿಲಿಯನ್ ಗೂ ಹೆಚ್ಚಿನ ಗ್ರಾಹಕರನ್ನು ತನ್ನದಾಗಿಸಿಕೊಂಡಿತ್ತು, ಆದರೆ ಈಗ ಏಪ್ರಿಲ್ ನಿಂದ ತನ್ನ ಎಲ್ಲಾ ಸೇವೆಗಳ ಲಾಭವನ್ನು ಪಡೆಯಬೇಕಾದರೆ ಹಣ ಪಾವತಿ ಮಾಡುವಂತೆ ಘೋಷಣೆ ಮಾಡಿದೆ ಈ ಹಿನ್ನಲೆಯಲ್ಲಿ ಜಿಯೋದಿಂದ ಗ್ರಾಹಕರು ದೂರ ಹೋಗುವ ಸಾಧ್ಯತೆ ಹೆಚ್ಚಾಗಲಿದೆ.

ಜಿಯೋ 5 ಕೋಟಿ ಗ್ರಾಹಕರನ್ನು ಕಳೆದುಕೊಳ್ಳಲಿದೆ;

ಜಿಯೋ ನೆಟ್‌ವರ್ಕ್ ನೀಡಿದ್ದ ಉಚಿತ ಡಾಟಾ ಮತ್ತು ಕರೆಗಳ ಆಫರ್ ಏಪ್ರಿಲ್ 1 ರಿಂದ ರದ್ದುಗೊಳ್ಳಲಿದ್ದು, ಇದರಿಂದ ಜಿಯೋ 5 ಕೋಟಿ ಗ್ರಾಹಕರನ್ನು ಕಳೆದುಕೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರಸ್ತುತ ಜಿಯೋ ನೆಟ್‌ವರ್ಕ್ ಬಳಸುತ್ತಿರುವ ಗ್ರಾಹಕರು ಸಹ ಜಿಯೋ ಪ್ರೈಮ್‌ಗೆ ಸದಸ್ಯತ್ವ ಪಡೆದುಕೊಳ್ಳಬೇಕಿದ್ದು, ಇದಕ್ಕೆ ಎನ್‌ರೋಲ್ ಮಾಡಿಕೊಳ್ಳಲು ಮಾ.31 ಕೊನೆಯ ದಿನವಾಗಿರಲಿದೆ.

ಜಿಯೋಗೆ ಗುಡ್‌ಬೈ:

ಈ ವೇಳೆಗೆ ಜಿಯೋ ಕರೆ ಗುಣಮಟ್ಟ ಸುಧಾರಿಸದೇ ಇದ್ದಲ್ಲಿ ಜಿಯೋಗೆ ಗುಡ್‌ಬೈ ಹೇಳುವುದಾಗಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.50ರಷ್ಟು ಜನ ತಿಳಿಸಿದ್ದಾರೆ. ಅಲ್ಲದೇ ಇದೇ ಹಣವನ್ನು ನೀಡಿದರೆ ಬೇರೆ ನೆಟ್‌ವರ್ಕ್‌ಗಳಲ್ಲಿ ಉತ್ತಮ ಸೇವೆ ದೊರೆಯುವುದರಿಂದ ಗ್ರಾಹಕರು ಮತ್ತೆ ತಮ್ಮ ಮದರ್ ನೆಟ್‌ವರ್ಕ್ ಕಡೆ ಮುಖ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಮುಂದಿನ ಹೆಜ್ಜೆ ಏನು..?

ಒಂದು ವೇಳೆ ಜಿಯೋ ತನ್ನ ಗ್ರಾಹಕರನ್ನು ಕಳೆದುಕೊಂಡರೆ ಹೊಡೆತ ಬಿಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮತ್ತೆ ತನ್ನ ಉಚಿತ ಸೇವೆಗಳನ್ನು ಮುಂದುವರೆಸುವ ವಾಗ್ದಾನ ಮಾಡಿರುವ ಆಚ್ಚರಿ ಪಡಬೇಕಾಗಿಲ್ಲ. ಒಟ್ಟಿನಲ್ಲಿ 1.5 ಲಕ್ಷಕ್ಕಿಂತ ಹೆಚ್ಚಿನ ಬಂಡವಾಳವನ್ನು ಹೂಡಿರುವ ಜಿಯೋ ತನ್ನ ಮುಂದಿನ ಹೆಜ್ಜೆಯನ್ನು ಯಾವ ರೀತಿಯಲ್ಲಿ ಇಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿRead more about:
English summary
Starting April, they will have to choose to stay or leave the Jio network, which has lined up easy and attractive entry points. to know more visit kananda.gizbot.com
Please Wait while comments are loading...
Opinion Poll

Social Counting