'ವೊಡಾಫೋನ್ ಫ್ಲೆಕ್ಸ್' ಹೊಸ ಯೋಜನೆಯ 5 ಪ್ರಯೋಜನಗಳು

ಜಿಯೋಗೆ ಸಮನಾಗಿಯೇ ವೊಡಾಫೋನ್ ಫ್ಲೆಕ್ಸ್ ಯೋಜನೆಯನ್ನು ಬಳಕೆದಾರರ ಮುಂದೆ ಇಡುತ್ತಿದೆ. ಡೇಟಾ ಮತ್ತು ಕರೆಗಳ ಯೋಜನೆಗಳನ್ನು ಈ ಪ್ಯಾಕ್ ಒಳಗೊಂಡಿದ್ದು, ಜಿಯೋದಂತೆಯೇ ಇದು ಯೋಜನೆಗಳನ್ನು ಹಮ್ಮಿಕೊಂಡಿದೆ

By Shwetha
|

ಜಿಯೋ ಪ್ರಸ್ತುತ ಭಾರತದಲ್ಲಿ ತನ್ನದೇ ರಾಜ್ಯಾಭಾರವನ್ನು ಮಾಡುತ್ತಿದೆ. ಇದಕ್ಕೆ ತಕ್ಕಂತೆ ಇತರ ಟೆಲಿಕಾಮ್‌ಗಳೂ ಕೂಡ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸುತ್ತಿದ್ದು ವೊಡಾಫೋನ್ ಫ್ಲೆಕ್ಸ್ ಯೋಜನೆಯನ್ನು ಬಳಕೆದಾರರ ಮುಂದೆ ಇಡುತ್ತಿದೆ. ಡೇಟಾ ಮತ್ತು ಕರೆಗಳ ಯೋಜನೆಗಳನ್ನು ಈ ಪ್ಯಾಕ್ ಒಳಗೊಂಡಿದ್ದು, ಜಿಯೋದಂತೆಯೇ ಇದು ಯೋಜನೆಗಳನ್ನು ಹಮ್ಮಿಕೊಂಡಿದೆ

ಓದಿರಿ: ಜಿಯೋ ಸಿಮ್ ಕುರಿತ ಸಮಸ್ಯೆಗಳಿಗೆ ಇಲ್ಲಿದೆ ಒಂದಿಷ್ಟು ಪರಿಹಾರ

ಜಿಯೋಗೆ ಸಮನಾಗಿಯೇ ಈ ಯೋಜನೆಗಳೂ ಇದ್ದು ಅದೇ ದರದಲ್ಲಿ ನಿಮಗೆ ದೊರೆಯಲಿದೆ. ಈ ಪ್ಯಾಕ್‌ನ ವಿವರಗಳನ್ನು ನಾವು ಇಂದಿಲ್ಲಿ ನೀಡುತ್ತಿದ್ದು ಇದು ಏಕೆ ಲಾಭಕರವಾಗಲಿದೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ರಿಲಾಯನ್ಸ್ ಜಿಯೋಗೆ ಕಾದಿದೆ ದೊಡ್ಡ ಗಂಡಾಂತರ

ಫ್ಲೆಕ್ಸ್ ಆಫರ್

ಫ್ಲೆಕ್ಸ್ ಆಫರ್

ಪ್ರತೀ ಎಮ್‌ಬಿಗೆ ಒಂದು ನಿಮಿಷದ ಇನ್‌ಕಮಿಂಗ್ ಕರೆಗಳು ಅಂತೆಯೇ ಪ್ರತೀ ನಿಮಿಷದ ಔಟ್‌ಗೋಯಿಂಗ್ ಕರೆಗಳು, ಎರಡು ಫ್ಲೆಕ್ಸ್ ಅನ್ನು ಡಿಟಕ್ಟ್ ಮಾಡಲಾಗುತ್ತದೆ

ವೋಲ್ಟ್ ಅಗತ್ಯವಿಲ್ಲ

ವೋಲ್ಟ್ ಅಗತ್ಯವಿಲ್ಲ

ರಿಲಾಯನ್ಸ್ ಜಿಯೋ ವಾಯ್ಸ್ ಕರೆಗಳಿಗೆ ಡೇಟಾವನ್ನು ಹೇಗೆ ಬಳಸಿಕೊಳ್ಳುತ್ತದೆಯೋ ಅಂತೆಯೇ ವೊಡಾಫೋನ್ ಫ್ಲೆಕ್ಸ್ ವಾಯ್ಸ್ ಕರೆಗಳಿಗೆ ಯಾವುದೇ ಡೇಟಾವನ್ನು ಬಳಸಿಕೊಳ್ಳುವುದಿಲ್ಲ, ಈಗ ಇರುವಂತೆಯೇ ಇದರ ದರ ನಿಗದಿಯಾಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯೋಜನೆಗಳು ಸ್ಪರ್ಧಾತ್ಮಕವಾಗಿದೆ

ಯೋಜನೆಗಳು ಸ್ಪರ್ಧಾತ್ಮಕವಾಗಿದೆ

ವೊಡಾಫೋನ್ ಯೋಜನೆಗಳು ಅತ್ಯಂತ ಕಡಿಮೆ ದರದ್ದಾಗಿದ್ದು ಜಿಯೋದ ಪ್ರಿಪೈಡ್ ಪ್ಲಾನ್‌ಗಳಿಗೆ ಸಮನಾಗಿದೆ. ಆರಂಭ ಪ್ಲಾನ್ ಬೆಲೆ ರೂ 119 ಆಗಿದ್ದು, ಬಳಕೆದಾರರು 325 ಫ್ಲೆಕ್ಸ್‌ನೊಂದಿಗೆ ಒಂದಾ ಡೇಟಾ ಇಲ್ಲವೇ ವಾಯ್ಸ್ ಕರೆಗಳನ್ನು ಬಳಸಿಕೊಳ್ಳಬಹುದಾಗಿದೆ. ಗರಿಷ್ಟ ಫ್ಲೆಕ್ಸ್ ಪ್ಲಾನ್ ರೂ 399 ಆಗಿದ್ದು, ಇದು 1,750 ಫ್ಲೆಕ್ಸ್‌ನೊಂದಿಗೆ ಬಂದಿದೆ ಮತ್ತು 28 ದಿನಗಳ ಕಾಲಾವಕಾಶವನ್ನು ಒಳಗೊಂಡಿದೆ.

ಡೇಟಾಗಾಗಿ ಪ್ರತ್ಯೇಕ ರಿಚಾರ್ಜ್ ಮಾಡಬೇಕಾಗಿಲ್ಲ

ಡೇಟಾಗಾಗಿ ಪ್ರತ್ಯೇಕ ರಿಚಾರ್ಜ್ ಮಾಡಬೇಕಾಗಿಲ್ಲ

ಫ್ಲೆಕ್ಸ್ ಪ್ಯಾಕ್‌ನೊಂದಿಗೆ, ವೊಡಾಫೋನ್ ಪ್ರಿಪೈಡ್ ಗ್ರಾಹಕರು ಡೇಟಾ ಪ್ಯಾಕ್‌ಗಳನ್ನು ರಿಚಾರ್ಜ್ ಮಾಡಿಕೊಳ್ಳಬೇಕಾಗಿಲ್ಲ, ಇದೆಲ್ಲಾ ಜಿಯೋದ ಪ್ರಭಾವ ಎಂದೇ ಹೇಳಬಹುದಾಗಿದೆ.

25 ಶೇಕಡಾ ಉಳಿತಾಯ

25 ಶೇಕಡಾ ಉಳಿತಾಯ

ವೊಡಾಫೋನ್ ಇಂಡಿಯಾದ ಡೈರೆಕ್ಟರ್ ಸಂದೀಪ್ ಕತಾರಿಯಾ ಪ್ರಕಾರ ಹೊಸ ಫ್ಲೆಕ್ಸ್ ಪ್ಲಾನ್‌ಗಳು ಕನಿಷ್ಟ ಪಕ್ಷ 25 ಶೇಕಡಾವನ್ನು ಉಳಿತಾಯ ಮಾಡಲಿದ್ದು ವಾಯ್ಸ್ ಕಾಲ್ ಮತ್ತು ಡೇಟಾಗಾಗಿ ಪ್ರತ್ಯೇಕ ರಿಚಾರ್ಜ್ ಮಾಡಿಕೊಳ್ಳುವ ಬಳಕೆದಾರರಿಗಾಗಿ ಈ ಪ್ಲಾನ್‌ಗಳನ್ನು ಯೋಜಿಸಲಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are the five benefits of the newly announced packs when compared to Reliance Jio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X