ರಿಲಯನ್ಸ್ ಜಿಯೋ ಏಫೆಕ್ಟ್: ಏರ್‌ಟೆಲ್‌ನಿಂದ ಡಬ್ಬಲ್ ಡೇಟಾ ಆಫರ್

ಏರ್‌ಟೆಲ್ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದೆ.

|

ಸದ್ಯ ಟೆಲಿಕಾಂ ವಲಯದಲ್ಲಿ ಭಾರೀ ಪ್ರಮಾಣದ ದರ ಸಮರವನ್ನು ನಡೆಸಿದ ಜಿಯೋ-ಏರ್‌ಟೆಲ್ ಈ ಬಾರಿ ಬ್ರಾಡ್ ಬ್ಯಾಂಡ್ ವಲಯದಲ್ಲಿ ದರ ಸಮಯವನ್ನು ಮುಂದುವರೆಸಲು ಮುಂದಾಗಿದ್ದಾರೆ. ಜಿಯೋ ಬ್ರಾಡ್ ಬ್ಯಾಂಡ್ ಲೋಕಕ್ಕೆ ಕಾಲಿಡಲಿದೆ ಎನ್ನುವ ಮಾಹಿತಿ ದೊರೆಯುತ್ತಿದ್ದಂತೆ ಏರ್‌ಟೆಲ್ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದೆ.

ರಿಲಯನ್ಸ್ ಜಿಯೋ ಏಫೆಕ್ಟ್: ಏರ್‌ಟೆಲ್‌ನಿಂದ ಡಬ್ಬಲ್ ಡೇಟಾ ಆಫರ್

ಜಿಯೋ ಶೀಘ್ರವೇ ಮಾರುಕಟ್ಟೆಯನ್ನು ಪ್ರವೇಶಿಸಿಲಿದ ಎನ್ನುವ ಸುದ್ಧಿಯನ್ನು ನೋಡದ ನಂತರದಲ್ಲಿ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಡೇಟಾ ಸರ್ಪ್ರೈಸ್ ಆಫರ್ ನೀಡಿದ್ದ ಏರ್‌ಟೆಲ್ ಮತ್ತೇ ಮತ್ತೊಂದು ಆಕರ್ಷಕ ಆಫರ್ ಘೋಷಣೆ ಮಾಡಿದ್ದು, ತನ್ನ ಡೇಟಾ ಆಫರ್‌ಗಳಲ್ಲಿ ಒಂದೇ ಬೆಲೆಗೆ ಡಬ್ಬಲ್ ಡೇಟಾವನ್ನು ನೀಡಿ ಗ್ರಾಹಕರನ್ನು ಸಂತೋಷಗೊಳಿಸಲು ಮುಂದಾಗಿದೆ.

ಜಿಯೋ ಆರು ನಗರಗಳಲ್ಲಿ ಸೇವೆ:

ಜಿಯೋ ಆರು ನಗರಗಳಲ್ಲಿ ಸೇವೆ:

ಜಿಯೋ ದೇಶದ ಆರು ನಗರಗಳಲ್ಲಿ ತನ್ನ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಲಿದ್ದು, 4G ಸೇವೆ ಮಾದರಿಯಲ್ಲಿ ಇಲ್ಲಿಯೂ ಮೊದಲ ಮೂರು ರಿಂದ ಆರು ತಿಂಗಳು ಉಚಿತ ಸೇವೆಯನ್ನು ನೀಡಲಿದೆ. ಅಲ್ಲದೇ ಇದಕ್ಕಾಗಿ ಆರು ನಗರಗಳನ್ನು ಸೆಲೆಕ್ಟ್ ಮಾಡಿಕೊಂಡಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಇದರಂದಾಗಿ ಏರ್‌ಟೆಲ್ ಈಗಾಗಲೇ ತನ್ನ ಯೋಜನೆಯನ್ನು ರೂಪಿಸಿದೆ.

ಏರ್‌ಟೆಲ್ ಡಬ್ಬಲ್ ಡೇಟಾ ಆಫರ್‌:

ಏರ್‌ಟೆಲ್ ಡಬ್ಬಲ್ ಡೇಟಾ ಆಫರ್‌:

ಏರ್‌ಟೆಲ್ ಹಿಂದೆ ಇದ್ದ ಬೆಲೆಗಳಿಗೆ ಡಬಲ್ ಡೇಟಾವನ್ನು ನೀಡಲು ಮುಂದಾಗಿದೆ. ರೂ.899ಗೆ 60GB ಡೇಟಾವನ್ನು ನೀಡುತ್ತಿದ್ದು, ಈ ಹಿಂದೆ 30GB ಮಾತ್ರ ನೀಡುತ್ತಿತ್ತು.

ಇದೇ ಮಾದರಿಯಲ್ಲಿ ರೂ.1099ಗೆ 90GB ಹೈಸ್ಪೀಡ್ ಡೇಟಾವನ್ನು ನೀಡುತ್ತಿದೆ. ಈ ಹಿಂದೆ 50GB ಮಾತ್ರವೇ ನೀಡುತ್ತಿತ್ತು. ಇದೇ ಮಾದರಿಯಲ್ಲಿ 1299ರೂಗಳಿಗೆ 75 GB ಡೇಟಾ ನೀಡುತ್ತಿದ್ದ ಏರ್‌ಟೆಲ್ ಈಗ 125GB ಹೈಸ್ಪೀಡ್ ಡೇಟಾವನ್ನು ನೀಡಲು ಮುಂದಾಗಿದೆ.

100 Mbps ವೇಗದ ಇಂಟರ್‌ನೆಟ್:

100 Mbps ವೇಗದ ಇಂಟರ್‌ನೆಟ್:

ಈ ಹಿಂದೆ ಕಡಿಮೆ ವೇಗದ ಇಂಟರ್ನೆಟ್ ಸೇವೆಯನ್ನು ನೀಡುತ್ತಿದ್ದ ಏರ್‌ಟೆಲ್ ತನ್ನ ವೇಗವನ್ನು ಹೆಚ್ಚಿಸಿಕೊಂಡಿದ್ದು, 100 Mbps ವೇಗದ ಸೇವೆಯನ್ನು ನೀಡುತ್ತಿದೆ. ಇದೇ ಸಂದರ್ಭದಲ್ಲಿ ಜಿಯೋ 1 GBPS ವೇಗದಲ್ಲಿ ಸೇವೆಯನ್ನು ನೀಡಲಿದೆ ಎನ್ನುವ ಮಾತು ಕೇಳಿಬಂದಿದೆ.

ಏರ್‌ಟೆಲ್ ನಿಂದ V ಫೈಬರ್‌ ಸೇವೆ:

ಏರ್‌ಟೆಲ್ ನಿಂದ V ಫೈಬರ್‌ ಸೇವೆ:

ಜಿಯೋ ಫೈಬರ್ ಟು ಹೊಮ್ ಸೇವೆಯ ಮಾದರಿಯಲ್ಲಿ ಏರ್‌ಟೆಲ್ V ಫೈಬರ್‌ ಸೇವೆ ಆರಂಭಿಸಿದ್ದು, ಇದರಲ್ಲಿ ವೇಗದ ಇಂಟರ್‌ನೆಟ್ ದೊರೆಯಲಿದ್ದು, ಆಲ್‌ಲೋಡ್ ಮತ್ತು ಡೌನ್‌ಲೋಡ್‌ಗಳು ಇದರಿಂದ ಸಾಧ್ಯವಾಗಲಿದೆ.

Best Mobiles in India

Read more about:
English summary
Reliance Jio broadband service confirmed to be under testing in six cities (and expanding to more), Airtel has revised its broadband Internet plans. The new plans offer up to twice the data at the same monthly rentals. to more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X