ಬಿಎಸ್‌ಎನ್‌ಎಲ್‌ ನೀಡಲಿದೆ ರೂ 16 ಕ್ಕೆ ಇಂಟರ್ನೆಟ್ ಪ್ಯಾಕ್

Written By:

ರಿಲಾಯನ್ಸ್ ಜಿಯೋದ ಸ್ಪರ್ಧೆಯನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಂಡಿರುವ ಬಿಎಸ್‌ಎನ್‌ಎಲ್ ದೇಶಾದ್ಯಂತ ಬೇರೆ ಬೇರೆ ಯೋಜನೆಗಳನ್ನು ಪ್ರಸ್ತುತಪಡಿಸುವ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುವಲ್ಲಿ ಬಿಎಸ್‌ಎನ್‌ಎಲ್ ಪಣ ತೊಟ್ಟಿದೆ. ಬಿಬಿ 249 ಪ್ಲಾನ್ ಅನ್ನು ಪ್ರಸ್ತುತಪಡಿಸುವ ಮೂಲಕ ಬಿಎಸ್‌ಎನ್‌ಎಲ್ ತನ್ನ ಯೋಜನೆಗಳನ್ನು ಸಾಕಾರಗೊಳಿಸಿದ್ದು ಹೆಚ್ಚಿನ ಬಳಕೆದಾರರು ಈ ಯೋಜನೆಗೆ ಚಂದಾದಾರರಾಗಿ ಸೇವೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಓದಿರಿ: ಏರ್‌ಟೆಲ್‌ನಲ್ಲಿ 50 ನಿಮಿಷಗಳ 'ಫ್ರೀ' ಟಾಕ್ ಟೈಮ್ ಪಡೆದುಕೊಳ್ಳುವುದು ಹೇಗೆ?

ಇದೀಗ ಬಿಎಸ್‌ಎನ್‌ಎಲ್ ರೂ 16 ರ ಯೋಜನೆಯೊಂದಿಗೆ ಬಂದಿದ್ದು ಕೆಳಗೆ ಈ ಯೋಜನೆಯ ಕುರಿತಾದ ವಿವರಗಳನ್ನು ನೀಡಿದ್ದೇವೆ.

ಓದಿರಿ: ಅನ್‎ಲಿಮಿಟೆಡ್ 4ಜಿ ಡೇಟಾವನ್ನು ಹೈ ಸ್ಪೀಡ್‎ನಲ್ಲಿ ಪಡೆದುಕೊಳ್ಳುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಬಿಎಸ್‌ಎನ್‌ಎಲ್ 16 ವರ್ಷಗಳ ಸಂಭ್ರಮ

ತನ್ನ ಸ್ಥಾಪನೆಯ 16 ವರ್ಷಗಳನ್ನು ಆಚರಿಸುವುದಕ್ಕಾಗಿ ಸರ್ವೀಸ್ ಪ್ರೊವೈಡರ್ ರೂ 16 ರ ಡೇಟಾ ಪ್ಲಾನ್‌ನೊಂದಿಗೆ ಬಂದಿದೆ.

ರೂ 16 ಕ್ಕೆ 60 ಎಮ್‌ಬಿ ಡೇಟಾ

ಈ ವಿಶೇಷ ಡೇಟಾ ಟಾರಿಫ್ ಯೋಜನೆಯು ರೂ 16 ರದ್ದಾಗಿದ್ದು ಬಳಕೆದಾರರಿಗೆ 60 ಎಮ್‌ಬಿ ಡೇಟಾವನ್ನು ನೀಡಲಿದೆ. ಇದು ಒಂದು ತಿಂಗಳ ವ್ಯಾಲಿಡಿಯನ್ನು ಪಡೆದುಕೊಂಡಿದ್ದು ಆಕ್ಟಿವೇಶನ್ ದಿನಾಂಕದಿಂದ ತೊಡಗಿ ಇದು ಕಾರ್ಯಾಚರಣೆಯಲ್ಲಿದ್ದು ಇದು ಕಡಿಮೆ ದರದ ಪ್ಲಾನ್ ಆಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಕ್ಟೋಬರ್ ಅಂತ್ಯದವರೆಗೆ ಲಭ್ಯ

ಅಕ್ಟೋಬರ್ 7 ರಿಂದ ಅಕ್ಟೋಬರ್ 31 ರವರೆಗೆ ಈ ವಿಶೇಷ ಕಡಿಮೆ ದರದ ಡೇಟಾ ಟಾರಿಫ್ ಪ್ಲಾನ್ ಲಭ್ಯವಿದೆ. ಇದನ್ನು ಒಮ್ಮೆ ಮಾತ್ರವೇ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಜಿಟಲ್ ಇಂಡಿಯಾ ಯೋಜನೆ

ಪ್ರಧಾನಿಯವರ ಡಿಜಿಟಲ್ ಇಂಡಿಯಾ ಯೋಜನೆಗೆ ಕೈಜೋಡಿಸುವ ಸಲುವಾಗಿ ಬಿಎಸ್‌ಎನ್‌ಎಲ್ಈ ಯೋಜನೆಯನ್ನು ಪ್ರಸ್ತುತಪಡಿಸಿದೆ. ರೂ 16 ಕ್ಕೆ ಇಂಟರ್ನೆಟ್ ಸಂಪರ್ಕವನ್ನು ಬಳಕೆದಾರರು ಈ ಯೋಜನೆಯ ಮೂಲಕ ಪಡೆದುಕೊಳ್ಳಬಹುದಾಗಿದೆ.

ಹೊಸ 2ಜಿ ಮತ್ತು 3ಜಿ ಪ್ಲಾನ್ ಲಾಂಚ್ ಆಗಲಿದೆ

ಬಿಎಸ್‌ಎನ್‌ಎಲ್ ಚೇರ್‌ಮ್ಯಾನ್ ಅನುಪಮ್ ಶ್ರೀವಾಸ್ತವ ಹೇಳಿರುವಂತೆ, ಜಿಯೋಗೆ ಸ್ಪರ್ಧೆಯನ್ನು ನೀಡುವ ಸಲುವಾಗಿ ಮುಂದಿನ ವರ್ಷ ಜನವರಿಯಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ 2ಜಿ ಮತ್ತು 3ಜಿ ಪ್ಲಾನ್ ಅನ್ನು ಪ್ರಸ್ತುತಪಡಿಸಲಿದೆ ಎಂದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
As mentioned, BSNL has come up with a low-cost data plan priced at Rs. 16. Take a look at more details of this plan from below.
Please Wait while comments are loading...
Opinion Poll

Social Counting