ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ವೆಲ್ಕಮ್ ಆಫರ್ ಡಿಸೆಂಬರ್ 3 ಕ್ಕೆ ಅಂತ್ಯ

ರಿಲಾಯನ್ಸ್ ಜಿಯೋ ತನ್ನ ವೆಲ್ಕಮ್‌ ಆಫರ್‌ ಅನ್ನು ಡಿಸೆಂಬರ್‌ 3 ಕ್ಕೆ ಅಂತ್ಯಗೊಳಿಸಲು ತೀರ್ಮಾನಿಸಿದೆ. ರಿಲಾಯನ್ಸ್ ಜಿಯೋ ಸಿಮ್‌ ಬಳಸುತ್ತಿದ್ದಲ್ಲಿ ಈ ಮಾಹಿತಿಯನೊಮ್ಮೆ ಮಿಸ್‌ ಮಾಡದೇ ಓದಿ.

Written By:

ಶಾಕಿಂಗ್‌ ನ್ಯೂಸ್‌. ಈ ಶಾಕಿಂಗ್‌ ನ್ಯೂಸ್‌ ಕೇವಲ ರಿಲಾಯನ್ಸ್ ಜಿಯೋ 4G ಸಿಮ್ ಅನ್ನು ವೆಲ್ಕಮ್‌ ಆಫರ್‌ನಲ್ಲಿ ಬಳಸುತ್ತಿರುವವರಿಗೆ ಮಾತ್ರ. ಅದೇನು ಅಂತಿರಾ? ರಿಲಾಯನ್ಸ್ ಜಿಯೋ ತನ್ನ ವೆಲ್ಕಮ್‌ ಆಫರ್‌ ಅನ್ನು ಡಿಸೆಂಬರ್‌ 3 ಕ್ಕೆ ಅಂತ್ಯಗೊಳಿಸಲು ತೀರ್ಮಾನಿಸಿದೆ. ಆದರೆ ಈ ಹಿಂದೆ ರಿಲಾಯನ್ಸ್ ಜಿಯೋ ವೆಲ್ಕಮ್ ಅನ್ನು ಡಿಸೆಂಬರ್‌ 31 ರವರೆಗೆ ನೀಡುವುದಾಗಿ ಹೇಳಿತ್ತು.

ಅದು ಸರಿ ಬಿಡಿ. ಗ್ರಾಹಕರನ್ನ ತಮ್ಮತ್ತ ಸೆಳೆಯಲು, ಹೆಚ್ಚು ಗ್ರಾಹಕರನ್ನು ಹೊಂದಲು ಮೊದಲು ಒಂದು ವರ್ಷದ ವರೆಗೆ ಉಚಿತ ಡಾಟಾ, ಉಚಿತ ಕರೆ ಸೇವೆ, ಉಚಿತ ಎಸ್‌ಎಂಎಸ್‌ ಎಂದು ಹೇಳಿ, 2 ತಿಂಗಳುಗಳ ನಂತರ ಈ ಸೇವೆಯನ್ನು ಕಾರಣಾಂತರಗಳಿಂದ ಸ್ಥಗಿತಗೊಳಿಸಲಾಗಿದೆ. ಆದರೆ ಇತರೆ ಟೆಲಿಕಾಂಗಳಿಗಿಂತ ಕಡಿಮೆ ಬೆಲೆಯ ಟ್ಯಾರಿಫ್ ಪ್ಲಾನ್‌, ಕಡಿಮೆ ಬೆಲೆಯಲ್ಲಿ ಕರೆ ದರ ಸೇವೆ ನೀಡುತ್ತೇವೆ ಎಂದರೆ, ಜನರ ಬಾಯಿ ಮುಚ್ಚಿಸಬಹುದು. ಆಮೇಲೆ ಜನರು ಸಹ ಸುಮ್ಮನಾಗುತ್ತಾರೆ. 2 ತಿಂಗಳ ಒಳಗೆ ಹೆಚ್ಚಿನ ಗ್ರಾಹಕರನ್ನ ತಮ್ಮತ್ತ ಸೆಳೆದುಕೊಂಡು ಸಹ ಆಗಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ರಿಲಾಯನ್ಸ್ ಜಿಯೋ 4G ಉಚಿತ ಡಾಟಾವನ್ನು 1 ವರ್ಷದವರೆಗೆ ಪಡೆಯುವುದು ಹೇಗೆ?

ಅಂದಹಾಗೆ ನೀವು ರಿಲಾಯನ್ಸ್ ಜಿಯೋ(Jio) ಸಿಮ್‌ ಬಳಸುತ್ತಿದ್ದಲ್ಲಿ ಈ ಮಾಹಿತಿಯನೊಮ್ಮೆ ಮಿಸ್‌ ಮಾಡದೇ ಓದಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಜಿಯೋ ವೆಲ್ಕಮ್‌ ಆಫರ್ ಡಿಸೆಂಬರ್‌ 3 ಕ್ಕೆ ಅಂತ್ಯ

ರಿಲಾಯನ್ಸ್ ಜಿಯೋ ಈ ಹಿಂದೆ ವೆಲ್ಕಮ್‌ ಆಫರ್‌ ಅನ್ನು ಡಿಸೆಂಬರ್ 31 ರವರೆಗೆ ತನ್ನ ಗ್ರಾಹಕರಿಗೆ ನೀಡುವುದಾಗಿ ಹೇಳಿತ್ತು. ಆದರೆ ವೆಲ್ಕಮ್‌ ಆಫರ್‌ ಅನ್ನು ಡಿಸೆಂಬರ್ 3 ಕ್ಕೆ ಅಂತ್ಯ ಎಂದು ಮಾಹಿತಿ ಪ್ರಕಟಗೊಳಿಸಿದೆ. ಕಾರಣ ಏನು ಗೊತ್ತೇ? ಮುಂದೆ ಓದಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೆಲ್ಕಮ್‌ ಆಫರ್ ಯೋಜನೆ ಕೇವಲ 3 ತಿಂಗಳು

ಅಂದಹಾಗೆ ನಿಯಮದ ಪ್ರಕಾರ ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್ ಯೋಜನೆ ಅವಧಿ 3 ತಿಂಗಳು. 3 ತಿಂಗಳ ನಂತರ ವೆಲ್ಕಮ್‌ ಆಫರ್‌ ಅನ್ನು ನೀಡುವ ಆಗಿಲ್ಲ. ರಿಲಾಯನ್ಸ್ ಜಿಯೋ ಈ ಸೇವೆಯನ್ನು ಸೆಪ್ಟೆಂಬರ್ 5 ರಂದು ಲಾಂಚ್‌ ಮಾಡಿದ್ದು, 90 ದಿನಗಳ ನಂತರ ಅಂದರೆ ಡಿಸೆಂಬರ್ 3 ರ ನಂತರ ಉಚಿತ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ.

ಟೆಲಿಕಾಂ ನಿಯಂತ್ರಕರಿಂದ ಮಾಹಿತಿ ಬಹಿರಂಗ

ಸಂವಹನ ಸ್ಥಾನಿಕ ಟೆಲಿಕಾಂ ನಿಯಂತ್ರಕರಿಂದ ಈ ಮಾಹಿತ ಬಹಿರಂಗವಾಗಿದ್ದು, ಟ್ರಾಯ್‌ಗೆ, ರಿಲಾಯನ್ಸ್ ಪರಸ್ಪರ ಬಳಕೆ ಶುಲ್ಕ ರೂಡಿಗಳನ್ನು ಉಲ್ಲಂಘಿಸುತ್ತಿದೆ ಮತ್ತು ಸ್ಪರ್ಧಾತ್ಮಕ ವಿರೋಧಿ ಮತ್ತು ಪರಭಕ್ಷಕ ಕ್ರಮಗಳನ್ನು ಕೈಗೊಂಡಿದೆ, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಟೆಲಿಕಾಂ ಆಪರೇಟರ್‌ಗಳು ಪತ್ರ ಬರೆದಿದ್ದಾರೆ. ಆದರೆ ಟ್ರಾಯ್‌ ಮಾತ್ರ ಟೆಲಿಕಾಂ ಆಪರೇಟರ್‌ಗಳಿಗೆ, ರಿಲಾಯನ್ಸ್ ಜಿಯೋ ವೆಲ್ಕಮ್‌ ಆಫರ್‌ ಸ್ಕೀಮ್ ಯಾವುದೇ ರೀತಿಯಲ್ಲಿ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಹೇಳಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಲಾಯನ್ಸ್ ಜಿಯೋ ಬಗ್ಗೆ ಹರಿದಾಡುತ್ತಿರುವ ಹೊಸ ಸುದ್ದಿ ಏನು ಗೊತ್ತೇ?

ವೆಲ್ಕಮ್‌ ಆಫರ್ ಕೇವಲ ಡಿಸೆಂಬರ್ 31 ರವರೆಗೆ ಎಂದು ರಿಲಾಯನ್ಸ್ ಜಿಯೋ ಹೇಳಿತ್ತು. ಆದರೆ ಈ ವೆಲ್ಕಮ್‌ ಆಫರ್‌ ಅನ್ನು ಈಗ ಸ್ಮಾರ್ಟ್‌ಫೋನ್‌ ಪ್ರಿಯರು ಹೊಸ ಲೈಫ್‌(LYF) ಬ್ರ್ಯಾಂಡ್‌ ಫೋನ್ ಖರೀದಿಸಿ 1 ವರ್ಷದವರೆಗೆ ವಿಸ್ತರಣೆ ಪಡೆಯಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಕಂಪನಿ ಮಾತ್ರ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಪ್ರಕಟಮಾಡಿಲ್ಲ.

ವೆಲ್ಕಮ್‌ ಆಫರ್‌ನಲ್ಲಿ ರಿಲಾಯನ್ಸ್ ಜಿಯೋ ನೀಡುತ್ತಿದ್ದ ಸೇವೆ

ವೆಲ್ಕಮ್‌ ಆಫರ್‌ನಲ್ಲಿ ರಿಲಾಯನ್ಸ್ ಜಿಯೋ 3 ತಿಂಗಳು ಉಚಿತ ಮತ್ತು ಅನ್‌ಲಿಮಿಟೆಡ್ 4G ಡಾಟಾ ಆಕ್ಸೆಸ್, ಉಚಿತ ಕರೆಗಳು, ಉಚಿತ ಅನ್‌ಲಿಮಿಟೆಡ್ ಎಸ್‌ಎಂಎಸ್‌ ಸೇವೆಗಳನ್ನು ನೀಡುತ್ತಿದೆ. ಆದರೆ ಈಗ ರಿಲಾಯನ್ಸ್ ಜಿಯೋ ತನ್ನ ಈ ವೆಲ್ಕಮ್‌ ಆಫರ್ ಅನ್ನು ಡಿಸೆಂಬರ್‌ 3 ಕ್ಕೆ ಅಂತ್ಯಗೊಳಿಸಲಿದೆ. ಗ್ರಾಹಕರು ನಿರಾಸೆಗೊಳ್ಳುವುದರಲ್ಲಿ ಸಂಶಯವಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Reliance Jio free welcome offer ends on December 3. To know more visit kannada.gizbot.com
Please Wait while comments are loading...
Opinion Poll

Social Counting