ಏರ್‌ಟೆಲ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಜಿಯೋ!..ಟ್ರೂ ಕಾಲರ್ ರಿಪೋರ್ಟ್!!

ಭಾರತದಲ್ಲಿ 4G ಹ್ಯಾಂಡ್‌ಸೆಟ್ (ಟ್ರೂಕಾಲರ್ ಉಪಯೋಗಿಸುತ್ತಿರುವ) ಬಳಸುತ್ತಿರುವ ಪೈಕಿ 42 ಪರ್ಸೆಂಟ್ ಭಾರತೀಯರು ಜಿಯೋವನ್ನು ಡೇಟಾಗೆ ಬಳಕೆಮಾಡುತ್ತಿದ್ದು, ಏರ್‌ಟೆಲ್ ಕೇವಲ 17.54 ಪರ್ಸೆಂಟ್ 4G ಬಳಕೆದಾರರನ್ನು ಹೊಂದಿದೆ.

Written By:

ರಿಲಾಯನ್ಸ್‌ ಜಿಯೋ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಮೊದಲ ಸ್ಥಾನಕ್ಕೇರುವ ದಿನಗಳು ಬಹಳದೂರವಿಲ್ಲ ಎನ್ನುವ ಸೂಚನೆಗಳು ಸಿಕ್ಕಿವೆ.!! ಪ್ರಖ್ಯಾತ ಟ್ರೂಕಾಲರ್ ರಿಪೋರ್ಟ್ ಪ್ರಕಾರ ಭಾರತೀಯ ಟೆಲಿಕಾಂನಲ್ಲಿ ಜಿಯೋ ಈಗಾಗಲೇ ನಂಬರ್ ಒನ್ ಸ್ಥಾನವನ್ನು ಪಡೆದಿದ್ದು, ಸ್ಮಾರ್ಟ್‌ಫೋನ್‌ನಲ್ಲಿ ಕೇವಲ ಟ್ರೂ ಕಾಲರ್ ಬಳಕೆ ಮಾಡುತ್ತಿರುವವರ ಅಂಕಿ ಅಂಶಗಳಾಗಿದೆ.

ಟ್ರೂ ಕಾಲರ್ ರಿಪೋರ್ಟ್ ಪ್ರಕಾರ ಟ್ರೂ ಕಾಲರ್ ಆಪ್ ಬಳಸುತ್ತಿರುವ ಭಾರತೀಯರ ಪೈಕಿ ಜಿಯೋ ಈಗಾಗಲೇ ಮಾರುಕಟ್ಟೆಯ ಶೇಕಡ 23 ಪರ್ಸೆಂಟ್ ಶೇರ್ ಹೊಂದಿದ್ದು, ಏರ್‌ಟೆಲ್‌ಗಿಂತಲೂ ಮುಂದಿದೆ ಎಂದು ಹೇಳಿದೆ. ರಿಲಾಯನ್ಸ್ ಜಿಯೋದಿಂದ ಹೆಚ್ಚು ಕರೆಗಳನ್ನು ಮಾಡಲಾಗಿದ್ದು, ಪ್ರತಿಯೊಬ್ಬ ಜಿಯೋ ಗ್ರಾಹಕನ ಸರಾಸರಿ ಕರೆ ಸಮಯ 30 ಸೆಕೆಂಡ್‌ಗಳು ಎಂದು ಟ್ರೂ ಕಾಲರ್ ತಿಳಿಸಿದೆ.

ಏರ್‌ಟೆಲ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಜಿಯೋ!..ಟ್ರೂ ಕಾಲರ್ ರಿಪೋರ್ಟ್!!

ನೋಕಿಯಾದ ಬೆಸ್ಟ್ ಬೇಸಿಕ್ ಮೊಬೈಲ್ "ನೋಕಿಯಾ 3310" ರೀ ಲಾಂಚ್!!

ಭಾರತದಲ್ಲಿ 4G ಹ್ಯಾಂಡ್‌ಸೆಟ್ (ಟ್ರೂಕಾಲರ್ ಉಪಯೋಗಿಸುತ್ತಿರುವ) ಬಳಸುತ್ತಿರುವ ಪೈಕಿ 42 ಪರ್ಸೆಂಟ್ ಭಾರತೀಯರು ಜಿಯೋವನ್ನು ಡೇಟಾಗೆ ಬಳಕೆಮಾಡುತ್ತಿದ್ದು, ಏರ್‌ಟೆಲ್ ಕೇವಲ 17.54 ಪರ್ಸೆಂಟ್ 4G ಬಳಕೆದಾರರನ್ನು ಹೊಂದಿದೆ. ಇನ್ನು ವೊಡಾಫೋನ್ ಮತ್ತು ಐಡಿಯಾ ಕ್ರಮವಾಗಿ 12.26 ಮತ್ತು 11.50 ಪರ್ಸೆಂಟ್ 4G ಬಳಕೆದಾರರನ್ನು ಹೊಂದಿವೆ ಎಂದು ಟ್ರೂ ಕಾಲರ್ ವರದಿಯಲ್ಲಿ ತಿಳಿಸಲಾಗಿದೆ.

ಏರ್‌ಟೆಲ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಜಿಯೋ!..ಟ್ರೂ ಕಾಲರ್ ರಿಪೋರ್ಟ್!!

ದೇಶದಾಧ್ಯಂತ 4G ಸ್ಮಾರ್ಟ್‌ಫೋನ್‌ ಬಳಕೆದಾರಲ್ಲಿ ಟ್ರೂ ಕಾಲರ್ ಆಪ್‌ ಅನ್ನು ಶೇ 70 ರಿಂ 80 ರಷ್ಟು ಜನರು ಬಳಕೆ ಮಾಡುತ್ತಿದ್ದು, ಟ್ರೂ ಕಾಲರ್ ವರದಿಯ ಪ್ರಕಾರ ಈಗಾಗಲೇ ಜಿಯೋ ಭಾರತದ ಟೆಲಿಕಾಂನಲ್ಲಿ ಮೊದಲನೇ ಸ್ಥಾನಕ್ಕೇರಿದ್ದು, ಮಾಹಿತಿ ಅಧಿಕೃತವಾಗಿ ಹೊರಬೀಳಬೇಕಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Reliance Jio users are reportedly making most number of calls. to know more visit to kannada.gizbot.com
Please Wait while comments are loading...
Opinion Poll

Social Counting