ರಿಲಾಯನ್ಸ್ ಜಿಯೋಗೆ ಮೊಬೈಲ್‌ ನಂಬರ್ ಪೋರ್ಟ್‌ ಮಾಡಲೇ? ಬೇಡವೇ? ಈ ಲೇಖನ ಓದಿ!

ಆಫರ್‌ಗಳ ಲಾಭ ಮತ್ತು ಇತ್ತ ಇತರೆ ಸಮಸ್ಯೆಗಳನ್ನು ಸಹ ಅರಿತ ಹಲವು ಇತರೆ ಟೆಲಿಕಾಂ ನೆಟ್‌ವರ್ಕ್‌ ಬಳಕೆದಾರರು, ಜಿಯೋ ಸಿಮ್‌ಗೆ ಮೊಬೈಲ್ ನಂಬರ್ ಪೋರ್ಟ್‌ ಆಗಲೇ ಅಥವಾ ಬೇಡವೇ ಎಂಬ ಸಂಶಯದಲ್ಲಿದ್ದಾರೆ. ಸಂಶಯಗಳಿಗೆ ಉತ್ತರ ಇಲ್ಲಿದೆ.

By Suneel
|

ಕೇವಲ ಒಂದು ತಿಂಗಳಲ್ಲಿ ಅತಿ ಹೆಚ್ಚು ಆಕ್ಟೀವ್ ಬಳಕೆದಾರರನ್ನು ಪಡೆದ ಟೆಲಿಕಾಂ ಕಂಪನಿ ಎಂದರೆ ರಿಲಾಯನ್ಸ್ ಜಿಯೋ. ಟೆಲಿಕಾಂ ಕ್ಷೇತ್ರದಲ್ಲಿ ಇದೊಂದು ಹೊಸ ರೆಕಾರ್ಡ್ ಎನ್ನಬಹುದು.

ಅಂದಹಾಗೆ ರಿಲಾಯನ್ಸ್ ಜಿಯೋದ ಹೊಸ ಸುದ್ದಿ ಎಂದರೆ, ಜಿಯೋ ಈಗ ಮೊಬೈಲ್‌ ನಂಬರ್ ಪೋರ್ಟ್‌ಟೆಬಲಿಟಿ (MNP-Mobile Number Portability) ಆಪ್ಶನ್ ನೀಡಿದೆ. ಇತರೆ ಟೆಲಿಕಾಂ ಬಳಕೆದಾರರು ರಿಲಾಯನ್ಸ್ ಜಿಯೋ ಸೇವೆಗೆ ಮೊಬೈಲ್ ನಂಬರ್ ಪೋರ್ಟ್ ಪಡೆದು, ಜಿಯೋ 4G ಸಿಮ್‌ನ ಬೆನಿಫಿಟ್‌ ಆಫರ್‌ಗಳನ್ನು ಪಡೆಯಬಹುದು.

ರಿಲಾಯನ್ಸ್ ಜಿಯೋಗಿಂತಲೂ ಏರ್‌ಟೆಲ್‌ ಉತ್ತಮ: 5 ಕಾರಣಗಳು

ರಿಲಾಯನ್ಸ್ ಜಿಯೋ ಸರ್ವೀಸ್ ಪ್ರೊವೈಡರ್ ಈಗಾಗಲೇ ಹಲವು ನಕರಾತ್ಮಕ ವಿಮರ್ಶೆಗಳನ್ನು ತಮ್ಮ ಗ್ರಾಹಕರಿಂದಲೇ ಪಡೆದಿರುವುದು ಗೊತ್ತೇಇದೆ. ಆದರೂ ಸಹ ಹಲವರು ಉಚಿತ ಡಾಟಾ, ಕರೆ, ಉಚಿತ ಮೆಸೇಜ್‌ ಆಫರ್‌ಗಳಿಂದ ಜಿಯೋ ಸೇವೆಯನ್ನು ತೃಪ್ತಿಪಟ್ಟಿಕೊಂಡಿದ್ದಾರೆ. ಅದರೆ ಇತರರು ಇಂಟರ್ನೆಟ್ ಕನೆಕ್ಟಿವಿಟಿ, ಡಾಟಾ ವೇಗ ಮತ್ತು ಕರೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಮೇಲೆ ತಿಳಿಸಿದ ಆಫರ್‌ಗಳ ಲಾಭ ಮತ್ತು ಇತ್ತ ಇತರೆ ಸಮಸ್ಯೆಗಳನ್ನು ಸಹ ಅರಿತ ಹಲವು ಇತರೆ ಟೆಲಿಕಾಂ ನೆಟ್‌ವರ್ಕ್‌ ಬಳಕೆದಾರರು, ಜಿಯೋ(Jio) ಸಿಮ್‌ಗೆ ಮೊಬೈಲ್ ನಂಬರ್ ಪೋರ್ಟ್‌ ಆಗಲೇ ಅಥವಾ ಬೇಡವೇ ಎಂಬ ಸಂಶಯದಲ್ಲಿದ್ದಾರೆ. ಈ ಸಂಶಯಗಳಿಗೆ ಇಂದಿನ ಲೇಖನದಲ್ಲಿ ಗಿಜ್‌ಬಾಟ್‌ ನಿಮಗೆ ಹಲವು ಉತ್ತಮ ಸಲಹೆಗಳನ್ನು ನೀಡುತ್ತಿದ್ದು, ಮಿಸ್‌ ಮಾಡದೇ ಓದಿರಿ.

ವೆಲ್ಕಮ್ ಆಫರ್ 2017 ಮಾರ್ಚ್‌ವರೆಗೆ

ವೆಲ್ಕಮ್ ಆಫರ್ 2017 ಮಾರ್ಚ್‌ವರೆಗೆ

ಜಿಯೋದ ವೆಲ್ಕಮ್ ಆಫರ್ ಅನ್‌ಲಿಮಿಟೆಡ್ ಉಚಿತ 4G ಡಾಟಾ, ವಾಯ್ಸ್ ಕರೆ, ಮೆಸೇಜ್‌ ಮತ್ತು ಆಪ್‌ ಕಂಟೆಂಟ್ ಅಧಿಕೃತವಾಗಿ ಡಿಸೆಂಬರ್ 31, 2016 ವರೆಗೆ ಇತ್ತು. ಆದರೆ ಈಗ ರಿಲಾಯನ್ಸ್ ಜಿಯೋ ಸ್ವತಃ ತನ್ನ ವೆಲ್ಕಮ್‌ ಆಫರ್‌ ಅನ್ನು ಮಾರ್ಚ್‌ 2017 ರವರೆಗೆ ನೀಡುವುದಾಗಿ ಹೇಳಿದೆ.

ಪೋರ್ಟ್‌ ಮಾಡಬಹುದೇ?

ಪೋರ್ಟ್‌ ಮಾಡಬಹುದೇ?

ಕೇವಲ ವೆಲ್ಕಮ್‌ ಆಫರ್‌ಗಾಗಿ ನೀವು ನಂಬರ್ ಫೋರ್ಟ್ ಮಾಡಲು ಪ್ಲಾನ್‌ ಮಾಡುತ್ತಿದ್ದಲ್ಲಿ, 4-5 ತಿಂಗಳು ವೆಲ್ಕಮ್‌ ಆಫರ್ ಬೆನಿಫಿಟ್‌ಗಾಗಿ ಪೋರ್ಟ್‌ ಮಾಡುವ ಅಗತ್ಯವಿಲ್ಲ.

ಜಿಯೋ ನೀಡುತ್ತಿರುವ 4G ಬಹಳ ನಿಧಾನವಾಗಿದೆ

ಜಿಯೋ ನೀಡುತ್ತಿರುವ 4G ಬಹಳ ನಿಧಾನವಾಗಿದೆ

ಬಹುಸಂಖ್ಯಾತ ಬಳಕೆದಾರರ ಪ್ರಕಾರ, ರಿಲಾಯನ್ಸ್ ಜಿಯೋ ನೀಡುತ್ತಿರುವ 4G ಇಂಟರ್ನೆಟ್ ವೇಗ ತುಂಬಾ ನಿಧಾನವಾಗಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ರಿಲಾಯನ್ಸ್ ಜಿಯೋ 4G ವೇಗ ಏರ್‌ಟೆಲ್‌ ನೀಡುವ 4G ವೇಗದ ಅರ್ಧದಷ್ಟಿದೆ ಎನ್ನಲಾಗಿದೆ. ಪ್ರಸ್ತುತದಲ್ಲಿ ಉಚಿತ ಸಿಮ್‌ ಮತ್ತು ವೆಲ್ಕಮ್‌ ಆಫರ್‌ಗೋಸ್ಕರ ಸಿಮ್ ಬಳಸಬಹುದು. ಆದರೆ ಕಂಪನಿ ಒಮ್ಮೆ ಟ್ಯಾರಿಫ್‌ ಪ್ಲಾನ್ ಪ್ರಕಟಗೊಳಿಸಿದರೆ, ಹಲವರು ಸಿಮ್‌ ಬಳಸುವುದನ್ನು ನಿಲ್ಲಿಸಬಹುದು. ಆದರೆ 4G ವೇಗವನ್ನು ಎಲ್ಲರೂ ನೀರಿಕ್ಷೆ ಮಾಡುತ್ತಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋಗೆ ಪೋರ್ಟ್‌ ಅನ್ನು ಖಂಡಿತ ಮಾಡುತ್ತಿರಾ?

ಜಿಯೋಗೆ ಪೋರ್ಟ್‌ ಅನ್ನು ಖಂಡಿತ ಮಾಡುತ್ತಿರಾ?

ಸ್ವಲ್ಪ ಸಮಯ ಕಾಯಿರಿ. ವಾಸ್ತವವಾಗಿ ಉಚಿತ ಸೇವೆಗಿಂತ ನಿಮಗೆ 4G ವೇಗ ಅಗತ್ಯ ಎಂದಲ್ಲಿ, ಜಿಯೋದ ವೆಲ್ಕಮ್‌ ಆಫರ್ ಮುಗಿಯುವವರೆಗೆ ಕಾಯಿರಿ. ಅಥವಾ ವೆಲ್ಕಮ್‌ ಆಫರ್‌ನ ಉಚಿತ ಸೇವೆ‌ ಬೇಕೆ ಬೇಕು ಎಂದಲ್ಲಿ ಪೋರ್ಟ್‌ ಮಾಡಲು ಪ್ರಯತ್ನಿಸಿ.

ಲೈಫ್‌ಟೈಮ್ ಉಚಿತ ಕರೆ ಎಂಜಾಯ್‌ ಮಾಡಬಹುದು

ಲೈಫ್‌ಟೈಮ್ ಉಚಿತ ಕರೆ ಎಂಜಾಯ್‌ ಮಾಡಬಹುದು

ರಿಲಾಯನ್ಸ್ ಜಿಯೋ ನೆಟ್‌ವರ್ಕ್‌ನಿಂದ ಉಚಿತ ವಾಯ್ಸ್ ಕರೆ ಮತ್ತು ಯಾವುದೇ ರೋಮಿಂಗ್ ಚಾರ್ಜ್‌ ಇಲ್ಲದ ಸೇವೆಯನ್ನು ಲೈಫ್‌ ಟೈಮ್ ಪಡೆಯಬಹುದು. ಆದರೆ ಈಗಾಗಲೇ ಟ್ರಾಯ್‌ ಜಿಯೋಗೆ ತನ್ನ ಲೈಫ್‌ಟೈಮ್‌ ಉಚಿತ ವಾಯ್ಸ್ ಕರೆ ಆಫರ್‌ ಅನ್ನು ನಿಲ್ಲಿಸಲು ಹೇಳಿದೆ. ಉಚಿತ ವಾಯ್ಸ್ ಕರೆ ಎಂಜಾಯ್‌ಗಾಗಿ ನಂಬರ್ ಪೋರ್ಟ್‌ ಮಾಡಲು ಹೊರಟಲ್ಲಿ, ಈಗಲೇ ಕ್ಲಿಯರ್‌ ಮಾಡಬಹುದು.

ಈಗ ಹೇಳಿ ಖಂಡಿತ ಜಿಯೋಗೆ ಪೋರ್ಟ್‌ ಆಗುತ್ತಿರಾ?

ಈಗ ಹೇಳಿ ಖಂಡಿತ ಜಿಯೋಗೆ ಪೋರ್ಟ್‌ ಆಗುತ್ತಿರಾ?

ಖಂಡಿತ ರಿಲಾಯನ್ಸ್ ಜಿಯೋ ಹೊರತುಪಡಿಸಿ ಇತರೆ ಯಾವುದೇ ಟೆಲಿಕಾಂ ಲೈಫ್‌ಟೈಮ್ ವಾಯ್ಸ್ ಕರೆ ಮತ್ತು ರೋಮಿಂಗ್ ಚಾರ್ಜ್‌ ರಹಿತ ಸೇವೆ ನೀಡುವುದಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Find Out If You Should Port Your Number to Reliance Jio Right Now... To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X