ನೀವಿನ್ನು ಜಿಯೋ ಪ್ರೈಮ್ ಸದಸ್ಯರಾಗಿಲ್ಲವೇ..? ಹಾಗಿದ್ದರೆ ನೀವು ಈ ಸ್ಟೋರಿ ಓದಲೇ ಬೇಕು

ಜಿಯೋ ಆಫರ್ ಮೇಲೆ ಆಫರ್ ನೀಡಲು ಮುಂದಾಗಿದೆ. ಇದಕ್ಕಾಗಿ ತನ್ನ ಜಿಯೋ ಮನಿ ಆಪ್ ಸೇವೆಯನ್ನು ಪಡೆಯುವಂತೆ ಮಾಡಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಗ್ರಾಹಕರಿಗೆ ಪ್ರೈಮ್ ಸದಸ್ಯ ರಾಗುವಂತೆ ಪ್ರೇರಿಪಿಸಲು ಆಫರ್ ಮೇಲೆ ಆಫರ್ ನೀಡಲು ಮುಂದಾಗಿದೆ. ಇದಕ್ಕಾಗಿ ತನ್ನ ಜಿಯೋ ಮನಿ ಆಪ್ ಸೇವೆಯನ್ನು ಪಡೆಯುವಂತೆ ಮಾಡಿದೆ.

ನೀವಿನ್ನು ಜಿಯೋ ಪ್ರೈಮ್ ಸದಸ್ಯರಾಗಿಲ್ಲವೇ..? ಹಾಗಿದ್ದರೆ ನೀವು ಈ ಸ್ಟೋರಿ ಓದಲೇ ಬೇ

ಓದಿರಿ: ಭಾರತದಲ್ಲಿ ಬಿಡುಗಡೆ ಆಯ್ತು ಮೊದಲ ನೋಕಿಯಾ ಪೋನ್: ಅಮೆಜಾನ್‌ನಲ್ಲಿ ಲಭ್ಯ..!!

ಇದೇ ಕೆಲವು ದಿನಗಳ ಹಿಂದೆ ಪೇಟಿಎಂನೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ಪ್ರೈಮ್ ಗ್ರಾಹಕರಿಗೆ ಕ್ಯಾಷ್‌ ಬ್ಯಾಕ್ ನೀಡಲು ಮುಂದಾಗಿತ್ತು. ಸದ್ಯ ಅದೇ ಮಾದರಿಯಲ್ಲಿ ತನ್ನ ಜಿಯೋ ಮನಿ ಆಪ್ ಮೂಲಕ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳುವವರಿಗೆ ಭರ್ಜರಿ ಕ್ಯಾಷ್ ಬ್ಯಾಕ್ ನೀಡಲು ಮುಂದಾಗಿದೆ.

ಪ್ರೈಮ್ ಸದಸ್ಯತ್ವ ಹೆಚ್ಚು ಮಾಡಲು:

ಪ್ರೈಮ್ ಸದಸ್ಯತ್ವ ಹೆಚ್ಚು ಮಾಡಲು:

ಹೇಗಾದರು ಮಾಡಿ ತನ್ನ ಬಳಕೆದಾರನ್ನು ಉಳಿಸಿಕೊಳ್ಳಬೇಕು ಎಂದು ತೀರ್ಮಾನಿಸಿರುವ ಜಿಯೋ, ಪ್ರೈಮ್ ಸದಸ್ಯತ್ವ ಹೆಚ್ಚು ಮಾಡಲು, ಗ್ರಾಹಕರನ್ನು ಆಕರ್ಷಿಸಲು ವಿವಿಧ ಆಮಿಷಗಳನ್ನು ಒಡ್ಡಲು ಮುಂದಾಗಿದೆ. ಒಟ್ಟಿನಲ್ಲಿ 10 ಕೋಟಿ ಗ್ರಾಹಕರನ್ನು ಸೇರಿದಂತೆ ಇನ್ನು ಈ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೊಸ ಹೊಸ ಪ್ರಯತ್ನಗಳನ್ನು ಮಾಡಲು ಜಿಯೋ ಸಿದ್ದವಾಗಿದೆ.

ಪ್ರೈಮ್ ಸದಸ್ಯತ್ವಕ್ಕೆ 50 ರೂ. ಕ್ಯಾಷ್‌ ಬ್ಯಾಕ್:

ಪ್ರೈಮ್ ಸದಸ್ಯತ್ವಕ್ಕೆ 50 ರೂ. ಕ್ಯಾಷ್‌ ಬ್ಯಾಕ್:

ಸದ್ಯ ಜಿಯೋ ಗ್ರಾಹಕರು ಪ್ರೈಮ್ ಸದಸ್ಯರಾಗಿ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂಯಿರ್ ಆಫರ್ ಲಾಭವನ್ನು ಪಡೆಯಬೇಕಾದಲ್ಲಿ ರೂ. 99 ನೀಡಬೇಕಾಗಿದೆ. ಅದೇ ಜಿಯೋ ಮನಿ ಬಳಸಿಕೊಂಡು ಈ ಹಣವನ್ನು ಪಾವತಿ ಮಾಡಿದ ಸಂದರ್ಭದಲ್ಲಿ ಜಿಯೋ ಗ್ರಾಹಕರಿಗೆ 50 ರೂ. ಕ್ಯಾಷ್‌ ಬ್ಯಾಕ್ ನೀಡಲಿದೆ. ಇದರಿಂದಾಗಿ ಗ್ರಾಹಕರು ಕೇಲವ 49 ರೂಗಳಿಗೆ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.

303 ರೂ. ರೀಚಾರ್ಜ್ ಮೇಲೂ 50 ರೂ. ಕ್ಯಾಷ್‌ ಬ್ಯಾಕ್:

303 ರೂ. ರೀಚಾರ್ಜ್ ಮೇಲೂ 50 ರೂ. ಕ್ಯಾಷ್‌ ಬ್ಯಾಕ್:

ಕೇವಲ ಪ್ರೈಮ್ ಸದಸ್ಯತ್ವಕ್ಕೆ ಮಾತ್ರ ಕ್ಯಾಷ್ ಬ್ಯಾಕ್ ನೀಡದ ಜಿಯೋ, ಮೊದಲ ತಿಂಗಳ ರೀಚಾರ್ಜ್ ಮೇಲೆಯೂ ಗ್ರಾಹಕರಿಗೆ ಕ್ಯಾಷ್ ಬ್ಯಾಕ್ ಆಫರ್ ನೀಡಲು ಮುಂದಾಗಿದೆ. ಮೊದಲ ತಿಂಗಳ 303 ರೂ. ರೀಚಾರ್ಜ್ ಮೇಲೂ 50 ರೂ. ಕ್ಯಾಷ್‌ ಬ್ಯಾಕ್ ಘೋಷಣೆ ಮಾಡಿದ್ದು, ಇದರಿಂದಾಗಿ ಜಿಯೋ ಪ್ರೈಮ್ ಗ್ರಾಹಕರು 253 ರೂ.ಗಳಿಗೆ ಮೊದಲ ತಿಂಗಲು ಹ್ಯಾಪಿ ನ್ಯೂ ಇಯರ್ ಸೇವೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಜಿಯೋ ಮನಿ ಬಳಸುವುದು ಹೇಗೆ:

ಜಿಯೋ ಮನಿ ಬಳಸುವುದು ಹೇಗೆ:

ಜಿಯೋ ಮನಿ ಆಪ್ ಬಳಸುವುದು ತೀರಾ ಸುಲಭವಾಗಿದ್ದು, ಜಿಯೋ ಆಪ್ ಡೌನಲೋಡ್ ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ನೀಡಿ ಆಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ. ನಂತರ ನಿಮ್ಮ ಕ್ರೆಡಿಡ್ ಇಲ್ಲವೇ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಪಾಸ್‌ವರ್ಡ್ ನೀಡಿರಿ, ಇದಾದ ಬಳಿಕ ನಿಮ್ಮ ಪೋನಿಗೆ OTP ಬರಲಿದ್ದು, ಇದನ್ನು ನೀಡಿದ ನಂತರ ನಿಮ್ಮ ಜಿಯೋ ಆಪ್‌ ಪಿನ್ ಸಂಖ್ಯೆ ನೀಡಿರಿ.

ಎರಡು ದಿನಗಳು ಮಾತ್ರ ಈ ಆಫರ್ ಲಭ್ಯ:

ಎರಡು ದಿನಗಳು ಮಾತ್ರ ಈ ಆಫರ್ ಲಭ್ಯ:

ಜಿಯೋ ಬಳಕೆದಾರಿಗೆ ಈ ಕ್ಯಾಷ್ ಬ್ಯಾಕ್ ಲಾಭವನ್ನು ಪಡೆಯಲು ಜಿಯೋ ಕೇವಲ ಎರಡು ದಿನಗಳ ಅವಕಾಶವನ್ನು ಮಾತ್ರ ನೀಡಿದೆ. ಅದನ್ನು ಮೀರಿದರೆ ಮತ್ತೆ ನೀವು ಕ್ಯಾಷ್ ಬ್ಯಾಕ್ ಲಾಭವನ್ನು ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಯಾರು ಜಿಯೋ ಪ್ರೈಮ್ ಸದಸ್ಯರಾಗಲು ಸಿದ್ಧವಾಗಿರುವವರಿಗೆ ಇದು ರೀಚಾರ್ಜ್ ಮಾಡಿಸಿಕೊಳ್ಳಲು ಸರಿಯಾದ ಸಮಯ.

ನೆನಪಿರಲಿ ಪ್ರೈಮ್ ಸದಸ್ಯರಾಗಲು ಮಾರ್ಚ್ 31 ಕಡೆ ದಿನ:

ನೆನಪಿರಲಿ ಪ್ರೈಮ್ ಸದಸ್ಯರಾಗಲು ಮಾರ್ಚ್ 31 ಕಡೆ ದಿನ:

ಪ್ರಸ್ತುತ ಜಿಯೋ ಸೇವೆಯನ್ನು ಬಳಸುತ್ತಿರುವ ಗ್ರಾಹಕರು ವರ್ಷ ಪೂರ್ತಿ ಹ್ಯಾಪಿ ನ್ಯೂಯಿರ್ ಸೇವೆಯನ್ನು ಪಡೆಯಲು ಪ್ರೈಮ್ ಸದಸ್ಯರಾಗ ಬೇಕಿದ್ದು, ಇದಕ್ಕಾಗಿ ಮಾರ್ಚ್ 31 ರ ಒಳಗೆ ರೀಜಾರ್ಚ್ ಮಾಡಿಕೊಳ್ಳಬೇಕಾಗಿದೆ. ಇದನ್ನು ಮೀರಿದರೆ ಮತ್ತೆ ಜಿಯೋ ಗ್ರಾಹಕರಿಗೆ ಪ್ರೈಮ್ ಸದಸ್ಯತ್ವವನ್ನು ಪಡೆಯವ ಅವಕಾಶ ಇಲ್ಲದಂತಾಗಲಿದೆ.

ಪ್ರೈಮ್ ಸದಸ್ಯರಿಗಾಗಿ ಇರುವ ಆಫರ್‌ಗಳು:

ಪ್ರೈಮ್ ಸದಸ್ಯರಿಗಾಗಿ ಇರುವ ಆಫರ್‌ಗಳು:

ಮೊದಲು 99 ರೂ. ನೀಡಿ ಪ್ರೈಮ್ ಸದಸ್ಯರಾಗುವವರಿಗೆ ಜಿಯೋ ಹ್ಯಾಪಿ ನ್ಯೂಯಿರ್ ಆಫರ್ ಅನ್ನು ಒಂದು ವರ್ಷ ಬಳಸುವ ಅವಕಾಶ ದೊರೆಯಲಿದೆ. 28 ದಿನಗಳಿಗೆ 303 ರೂ.ಗಳ ರೀಚಾರ್ಜ್ ಮಾಡಿಸಬೇಕಾಗಿದ್ದು, ಉಚಿತ ಅನ್‌ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ. ಇದರೊಂದಿಗೆ 28 GB 4G ಡೇಟಾ ಸಹ ದೊರೆಯಲಿದೆ.

<strong>ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?<img title=" title="ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?Cool" loading="lazy" width="100" height="56" />ಊಹಾಪೋಹಕ್ಕೆ ತೆರೆ!..ಭಾರತಕ್ಕೆ ನೋಕಿಯಾ ಆಂಡ್ರಾಯ್ಡ್!!..ಯಾವಾಗ?Cool

Best Mobiles in India

Read more about:
English summary
Reliance Jio users can get Rs 100 cashback if they subscribe to Jio Prime membership and here's how it works to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X