ರಿಲಾಯನ್ಸ್ ಜಿಯೋದಿಂದ ಹೊಸ 'ಜಿಯೋಜಾಯಿನ್' ಆಪ್‌ ಲಾಂಚ್‌: ತಿಳಿಯಲೇಬೇಕಾದ 5 ಬೆನಿಫಿಟ್‌ಗಳು!

ಜಿಯೋಜಾಯಿನ್‌ ಆಪ್‌ ಅನ್‌ಲಿಮಿಟೆಡ್ ಮತ್ತು ಉಚಿತ HD ಕರೆಗಳನ್ನು ಪ್ರಪಂಚದಾದ್ಯಂತ ಕರೆ ಮಾಡಲು ಸಹಾಯಕಾರಿ ಆಗಿದೆ.

Written By:

ಜಿಯೋಜಾಯಿನ್‌ ಆಪ್‌ ಅನ್‌ಲಿಮಿಟೆಡ್ ಮತ್ತು ಉಚಿತ HD ಕರೆಗಳನ್ನು ಪ್ರಪಂಚದಾದ್ಯಂತ ಕರೆ ಮಾಡಲು ಸಹಾಯಕಾರಿ ಆಗಿದೆ. ಈ ಅಪ್ಲಿಕೇಶನ್‌ಗೆ ಜಿಯೋನೆಟ್ ಅಥವಾ 4G ಮೊಬೈಲ್‌ ಡಾಟಾ ಮಾತ್ರ ಅಗತ್ಯವಾಗಿದೆ.

ಜಿಯೋಜಾಯಿನ್‌ ಆಪ್‌ ಬಳಕೆದಾರರು ತಮ್ಮ ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ವಾಯ್ಸ್ ಕರೆ ಅಥವಾ ವೀಡಿಯೊ ಕರೆ ಪ್ಯಾಕ್‌ಗಳಿಗೆ ಸಬ್‌ಸ್ಕ್ರೈಬ್‌ ಆಗಬೇಕು. ಆಪ್‌ ಇಂಟರ್ನೆಟ್ ಸಂಪರ್ಕ ಹೊಂದಿರಬೇಕು. ಅಂದಹಾಗೆ ಜಿಯೋಜಾಯಿನ್ ಆಪ್‌ 2G, 3G, 4G ಸ್ಮಾರ್ಟ್‌ಫೋನ್‌ಗಳಲ್ಲಿ ಸಪೋರ್ಟ್‌ ಆಗುತ್ತದೆ. VoLTE ನೆಟ್‌ವರ್ಕ್‌ ಬೇಕೆ ಬೇಕು ಎಂಬ ಅಗತ್ಯವಿಲ್ಲ.

ಜಿಯೋ ಚಾಟ್ ಹಿಸ್ಟ್ರಿಯನ್ನು ಡಿಲೀಟ್ ಮಾಡುವುದು ಹೇಗೆ?

ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಉಚಿತ ಮತ್ತು ಅನ್‌ಲಿಮಿಟೆಡ್ HD ಕರೆ ಮಾಡಬಹುದಾದ, ಜಿಯೋಜಾಯಿನ್‌ ಆಪ್‌ ಬಗ್ಗೆ ತಿಳಿಯಲೇಬೇಕಾದ ಕೆಲವು ಅನುಕೂಲಗಳು ಮತ್ತು ಟ್ರಿಕ್ಸ್‌ಗಳನ್ನು ಪರಿಚಯಿಸುತ್ತಿದ್ದೇವೆ. ತಿಳಿಯಲು ಮುಂದೆ ಓದಿರಿ.(Jio)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಜಿಯೋಜಾಯಿನ್‌ ಆಪ್‌ನ ಫೀಚರ್‌ಗಳು

ನಿಮ್ಮ ಸ್ಮಾರ್ಟ್‌ಫೋನ್‌ ಯಾವುದೇ ನೆಟ್‌ವರ್ಕ್ ಹೊಂದಿದ್ದರೂ ಸಹ, ನೆಟ್‌ವರ್ಕ್‌ ಕನೆಕ್ಷನ್‌ ಬಗ್ಗೆ ಲಿಕ್ಕಿಸದೇ HD ವಾಯ್ಸ್ ಕರೆ ಮತ್ತು ವೀಡಿಯೊ ಕರೆಗಳನ್ನು ಎಂಜಾಯ್‌ ಮಾಡಲು ಅವಕಾಶ ನೀಡುತ್ತದೆ. ಪ್ರಪಂಚದ ಯಾವುದೇ ಮೂಲೆಗಳಲ್ಲಿದ್ದರೂ, ಯಾವುದೇ ನಿರ್ಬಂಧನೆಗಳಿಲ್ಲದೇ ವರ್ಕ್‌ ಆಗುತ್ತದೆ. ಅಲ್ಲದೇ ಯಾವುದೇ ರೋಮಿಂಗ್‌ ಚಾರ್ಜ್‌ ಪಾವತಿಸದೇ ಯಾವುದೇ ರಾಜ್ಯ ಮತ್ತು ದೇಶಗಳಲ್ಲಿರುವ ಜನರಿಗೆ ಕರೆ ಮಾಡಬಹುದು.

ಜಿಯೋಜಾಯಿನ್ ವಾಟ್ಸಾಪ್‌ ಮತ್ತು ಮೆಸೇಂಜರ್ ಫೀಚರ್ ಹೊಂದಿದೆ

ರಿಲಾಯನ್ಸ್‌ನ 'ಜಿಯೋಜಾಯಿನ್‌' ಆಪ್‌ ವಾಟ್ಸಾಪ್‌ ಮತ್ತು ಫೇಸ್‌ಬುಕ್‌ ಮೆಸೇಂಜರ್‌ಗಳ ರೀತಿ ಇದೆ. ಬಳಕೆದಾರರು ವಾಯ್ಸ್ ಕರೆ ಮತ್ತು ವೀಡಿಯೊ ಕರೆಗಳನ್ನು ಮತ್ತು ಚಾಟಿಂಗ್‌ ಫೀಚರ್‌ಗಳನ್ನು ಸಹ ಎಂಜಾಯ್‌ ಮಾಡಬಹುದು. ಮೆಸೇಜ್‌ಗಳನ್ನು ಸೆಂಡ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋಜಾಯಿನ್ ಮಿತಿಗಳು

ಜಿಯೋಜಾಯಿನ್‌ ಆಪ್‌ನ ಒಂದೇ ಒಂದು ಮಿತಿ ಎಂದರೆ, ಆಪ್‌ ಆಫ್‌ಲೈನ್‌ನಲ್ಲಿ ವರ್ಕ್‌ ಆಗುವುದಿಲ್ಲ. ಆಪ್‌ ಬಳಸಲು ಇಂಟರ್ನೆಟ್ ಸಂಪರ್ಕ ಆಕ್ಟೀವ್‌ ಮಾಡಲೇಬೇಕು. 'ಜಿಯೋನೆಟ್‌ ಅಥವಾ ರಿಲಾಯನ್ಸ್ ಜಿಯೋ 4G' ಇಂಟರ್ನೆಟ್ ಕನೆಕ್ಷನ್‌ ಹೊಂದಿರಬೇಕು.

ಪ್ರಾಥಮಿಕ ಹಂತದಲ್ಲಿ ಅಪ್ಲಿಕೇಶನ್‌

ಇದು ಇತ್ತೀಚೆಗಷ್ಟೇ ಲಾಂಚ್‌ ಆದ ಅಪ್ಲಿಕೇಶನ್‌ ಆಗಿದ್ದು, ಉತ್ತಮ ಅನುಭವ ಆಪ್ ಬಳಕೆಯಿಂದ ಸಿಗದಿರಬಹುದು. ಆದರೆ ಮುಂದಿನ ದಿನಗಳಲ್ಲಿ ಹೆಚ್ಚು ಅಪ್‌ಡೇಟ್‌ನಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಜಸ್ಟ್‌ ಡೌನ್‌ಲೋಡ್ ಮಾಡಿ ಎಂಜಾಯ್‌ ಮಾಡಿ

ಉಚಿತ ಮತ್ತು ಅನ್‌ಲಿಮಿಟೆಡ್ HD ಕರೆಗಳನ್ನು ಎಂಜಾಯ್‌ ಮಾಡಲು ರಿಲಾಯನ್ಸ್ ಜಿಯೋ 4G ಸಿಮ್ ಪಡೆದು ಆಕ್ಟಿವೇಟ್‌ ಮಾಡಿ. ನಂತರ ಜಿಯೋಜಾಯಿನ್ ಆಪ್‌ ಅನ್ನು ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ ಮಾಡಿ ಸೇವೆ ಎಂಜಾಯ್‌ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 Read more about:
English summary
Reliance Jio Benefits: JioJoin App Lets You Enjoy Free Unlimited HD Calls. To know more visit kannada.gizbot.com
Please Wait while comments are loading...
Opinion Poll

Social Counting